ತಿರುಪತಿ-ವಿಜಯಪುರ ನಡುವೆ ವಿಶೇಷ ರೈಲು: ಇಲ್ಲಿದೆ ಸಂಚಾರದ ಸಮಯ, ನಿಲುಗಡೆ ಇತರ ವಿವರ
ದುರ್ಗಾ ಪೂಜೆ ಹಾಗೂ ನವರಾತ್ರಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ತಿರುಪತಿ-ವಿಜಯಪುರ ನಡುವೆ ಸಾಪ್ತಾಹಿಕ ವಿಶೇಷ ರೈಲು ಸಂಚಾರ ನಡೆಸಲಿದೆ. ಅಕ್ಟೋಬರ್ 4ರಿಂದ 25ರವರೆಗೆ ಪ್ರತಿ ದಿಕ್ಕಿನಲ್ಲಿ ನಾಲ್ಕು ಟ್ರಿಪ್‌ಗಳ ರೈಲು ಸಂಚರಿಸಲಿದ್ದು, ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ವೇಳಾಪಟ್ಟಿ ಹಾಗೂ ಇತರ ವಿವರ ಇಲ್ಲಿದೆ.

ಮುಖ್ಯಾಂಶಗಳು
- ತಿರುಪತಿ ವಿಜಯಪುರ ನಡುವೆ ವಿಶೇಷ ರೈಲು
- ಅಕ್ಟೋಬರ್ 4ರಿಂದ ವಿಶೇಷ ರೈಲು ಸಂಚಾರ
- ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಕ್ರಮ
ಬೆಂಗಳೂರು, ಸೆಪ್ಟೆಂಬರ್ 2: ನವರಾತ್ರಿ, ದುರ್ಗಾ ಪೂಜೆ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ತಿರುಪತಿ ಮತ್ತು ವಿಜಯಪುರ ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು (Weekly Special Trains) ಓಡಿಸಲು ನೈಋತ್ಯ ರೈಲ್ವೆ ಸೂಚಿಸಿದೆ. ಪ್ರತಿ ದಿಕ್ಕಿನಲ್ಲಿ ತಲಾ ನಾಲ್ಕು ಟ್ರಿಪ್‌ಗಳಂತೆ ವಿಶೇಷ ರೈಲು ಸಂಚಾರ ನಡೆಸಲಿದೆ. ರೈಲು ಸಂಖ್ಯೆ 07419 ತಿರುಪತಿ-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 4ರಿಂದ 25ರವರೆಗೆ ಪ್ರತಿ ಭಾನುವಾರ ಬೆಳಗ್ಗೆ 8.15ಕ್ಕೆ ತಿರುಪತಿಯಿಂದ ಹೊರಡಲಿದೆ. ಅದೇ ದಿನ ರಾತ್ರಿ 10.25ಕ್ಕೆ ವಿಜಯಪುರ ತಲುಪಲಿದೆ.
ರಿಟರ್ನ್ ಟ್ರಿಪ್ನಲ್ಲಿ ರೈಲು ಸಂಖ್ಯೆ 07420 ವಿಜಯಪುರ-ತಿರುಪತಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 4ರಿಂದ 25ರವರೆಗೆ ಪ್ರತಿ ಭಾನುವಾರ ರಾತ್ರಿ 11.35ಕ್ಕೆ ವಿಜಯಪುರದಿಂದ ಹೊರಡಲಿದೆ. ಮಾರನೇ ದಿನ ಸೋಮವಾರ ಮಧ್ಯಾಹ್ನ 2.15ಕ್ಕೆ ತಿರುಪತಿ ತಲುಪಲಿದೆ.
ತಿರುಪತಿ-ವಿಜಯಪುರ ವೀಕ್ಲಿ ಸ್ಪೆಷಲ್ ರೈಲಿಗೆ ಎಲ್ಲೆಲ್ಲಿ ನಿಲುಗಡೆ?
ತಿರುಪತಿ-ವಿಜಯಪುರ ವೀಕ್ಲಿ ಸ್ಪೆಷಲ್ ರೈಲು ರೇಣಿಗುಂಟ, ಕೋಡೂರು, ರಾಜಂಪೇಟೆ, ಕಡಪ, ಯರ್ರಗುಂಟ, ತಾಡಿಪತ್ರಿ, ಗುತ್ತಿ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹೊಳೆ ಆಲೂರು, ಬದಾಮಿ, ಬಾಗಲಕೋಟೆ, ಆಲಮಟ್ಟಿ ಹಾಗೂ ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಿರಲಿದೆ.
ನೈಋತ್ಯ ರೈಲ್ವೆ ಎಕ್ಸ್ ಸಂದೇಶ
Kindly note:
To clear the extra rush of passengers during the Durga Puja festival, South Coast Railway has notified for running of weekly special trains between Tirupati–Vijayapura for four trips in each direction. ದುರ್ಗಾ ಪೂಜೆ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟ ಣೆಯನ್ನು… pic.twitter.com/PWkiXOFE6s
— South Western Railway (@SWRRLY) October 1, 2026
11 ಬೋಗಿಗಳ ತಿರುಪತಿ-ವಿಜಯಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್
ವಿಶೇಷ ರೈಲು ಒಟ್ಟು 11 ಬೋಗಿಗಳನ್ನು ಹೊಂದಿರಲಿದೆ. ಇದರಲ್ಲಿ ಒಂದು ಎಸಿ-2 ಟೈರ್, ಎರಡು ಎಸಿ-3 ಟೈರ್, ನಾಲ್ಕು ಸ್ಲೀಪರ್ ಕ್ಲಾಸ್, ಎರಡು ಸಾಮಾನ್ಯ ಎರಡನೇ ದರ್ಜೆ ಹಾಗೂ ಎರಡು ಲಗೇಜ್, ಬ್ರೇಕ್ ವ್ಯಾನ್ ಮತ್ತು ದಿವ್ಯಾಂಗರ ಬೋಗಿಗಳು ಇರಲಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




