
TTD Tirumala Tirupati
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಮಲವು ಹಿಂದೂ ಧರ್ಮದ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಪವಿತ್ರ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ತಿರುಮಲ ಬೆಟ್ಟಗಳ ಮೇಲಿರುವ ಈ ಪುರಾತನ ದೇವಾಲಯವು ವಿಷ್ಣುವಿನ ಅವತಾರವಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ಈ ದೇವಾಲಯವು ವಾರ್ಷಿಕವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ, ಇದು ಜಾಗತಿಕವಾಗಿ ಹೆಚ್ಚು ಭೇಟಿ ನೀಡುವ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಭಕ್ತರು ಕಾಲ್ನಡಿಗೆಯ ಮೂಲಕ ಅಥವಾ ವಿವಿಧ ಸಾರಿಗೆ ವಿಧಾನಗಳ ಮೂಲಕ ಬೆಟ್ಟಗಳನ್ನು ಏರುತ್ತಾರೆ, ಭಗವಾನ್ ವೆಂಕಟೇಶ್ವರನ ಆಶೀರ್ವಾದವನ್ನು ಕೋರುತ್ತಾರೆ. ದೇವಾಲಯದ ದೇವತೆ ಶ್ರೀಮಂತ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆ. ತಿರುಮಲದ ಆಧ್ಯಾತ್ಮಿಕ ಸೆಳವು ಸೊಂಪಾದ ಸುತ್ತಮುತ್ತಲಿನ ಪ್ರದೇಶಗಳಿಗೆ ವಿಸ್ತರಿಸುತ್ತದೆ. ಇದು ಭಕ್ತರಿಗೆ ಪ್ರಶಾಂತವಾದ ಏಕಾಂತವನ್ನು ನೀಡುತ್ತದೆ. ತಿರುಮಲಕ್ಕೆ ತೀರ್ಥಯಾತ್ರೆ ಕೇವಲ ಧಾರ್ಮಿಕ ಪ್ರಯಾಣವಲ್ಲ. ಇದು ನಂಬಿಕೆ, ಭಕ್ತಿ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾಕಾರಗೊಳಿಸುತ್ತದೆ.
ತಿರುಪತಿ ದೇವಸ್ಥಾನವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ವಿಷ್ಣು ಕಲಿಯುಗದಲ್ಲಿ ವಾಸಿಸುವ ಸ್ಥಳವೆಂದೇ ಹೇಳಲಾಗುತ್ತದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಭುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ಕಾಣಬಹುದು.
ಹೆಚ್ಚಿನ ಪ್ರಮಾಣದ ದಾನಗಳನ್ನು ಪಡೆದುಕೊಳ್ಳುವ ದೇವಾಲಯಗಳಲ್ಲಿ ಒಂದಾಗಿದೆ. ವರ್ಷದ ಯಾವುದೇ ದಿನ ನೀವು ಈ ದೇವಾಲಯಕ್ಕೆ ಭೇಟಿ ನೀಡಿದರೂ ಲಕ್ಷಾಂತರ ಭಕ್ತರ ಸಮೂಹವನ್ನು ನೋಡಬಹುದು.
ಭಕ್ತರು ತಮ್ಮೆಲ್ಲಾ ಇಚ್ಛೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಇಚ್ಛೆ ಈಡೇರಿದ ಬಳಿಕ ದೇವಸ್ಥಾನದ ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆ.
ಆಂಧ್ರ ಪ್ರದೇಶ ಸರ್ಕಾರದ ನಿಯಂತ್ರಣದಲ್ಲಿರುವ ತಿರುಮಲ ತಿರುಪತಿ ದೇವಸ್ತಾನಂ (TTD) ಈ ದೇವಾಲಯವನ್ನು ನಡೆಸುತ್ತಿದೆ. ಟಿಟಿಡಿಯ ಮುಖ್ಯಸ್ಥರನ್ನು ಆಂಧ್ರ ಪ್ರದೇಶ ಸರ್ಕಾರ ನೇಮಿಸುತ್ತದೆ.
Viral: ತಿರುಮಲ ಪಾವಿತ್ರ್ಯಕ್ಕೆ ಧಕ್ಕೆ : ಚಪ್ಪಲಿ ಧರಿಸಿ ಶ್ರೀವಾರಿ ದೇವಾಲಯದ ಮುಖ್ಯದ್ವಾರ ಪ್ರವೇಶಿಸಿದ ಮೂವರು ಭಕ್ತರು
ವಿಶ್ವದ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಾತ್ರವಾಗಿದೆ. ವರ್ಷದಿಂದ ವರ್ಷಕ್ಕೆ ಆದಾಯದಿಂದ ಹಿಡಿದು ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೌದು, ದೇಶ ವಿದೇಶಗಳಿಂದ ದೇವರ ದರ್ಶನಕ್ಕೆ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ವಿಐಪಿಗಳು ಚಪ್ಪಲಿ ಧರಿಸಿ ಮುಖ್ಯದ್ವಾರ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಭಕ್ತಾಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Sainandha P
- Updated on: Apr 12, 2025
- 4:48 pm
ತಿರುಪತಿ ಲಡ್ಡುವಿನ ಕಲಬೆರಕೆ ಆಗಿದೆ ಎಂಬುದಕ್ಕೆ ಸಾಕ್ಷಿ ನೀಡಿದ ಎಸ್‌ಐಟಿ! ನಾಲ್ವರ ಬಂಧನ
ಭಾರಿ ವಿವಾದವನ್ನು ಸೃಷ್ಟಿಸಿದ ತಿರಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ಆರೋಪಕ್ಕೆ ಬಲವಾದ ಸಾಕ್ಷಿಯನ್ನು ಎಸ್‌ಐಟಿ ನೀಡಿದೆ. ಇದರ ಇದರ ಜತೆಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬದರ ಬಗ್ಗೆ ಸಿಬಿಐ ತನಿಖೆಯನ್ನು ನಡೆಸಿ ವರದಿಯನ್ನು ನೀಡಿದೆ. ಇದೀಗ ಮೂರು ಡೈರಿಗಳ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದರಲ್ಲಿ ಅಕ್ರಮ ದಾಖಲೆಗಳನ್ನು ನೀಡಿ ಟಿಟಿಡಿಗೆ ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಎಸ್‌ಐಟಿ ಹಾಗೂ ಸಿಬಿಐ ಅಧಿಕಾರಿಗಳು ನೀಡಿದ ಸಾಕ್ಷಿಗಳೇನು. ತನಿಖಾ ವರದಿಯಲ್ಲಿ ಏನಿದೆ? ಈ ಬಗ್ಗೆ ಇಲ್ಲಿದೆ ನೋಡಿ.
- Akshay Pallamajalu
- Updated on: Feb 10, 2025
- 12:25 pm
ಹಿಂದೂ ಧಾರ್ಮಿಕ ಪದ್ಧತಿಗಳನ್ನು ಪಾಲಿಸದ 18 ನೌಕರರ ವಿರುದ್ಧ ಕ್ರಮ ಕೈಗೊಂಡ ಟಿಟಿಡಿ
ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡುವಾಗ ಹಿಂದೂಯೇತರ ಧಾರ್ಮಿಕ ಪದ್ಧತಿಗಳನ್ನು ಪಾಲಿಸಿದ 18 ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ತಿರುಪತಿ ದೇವಸ್ಥಾನದಲ್ಲಿ ಕೆಲಸ ಮಾಡುವಾಗ ಹಿಂದೂ ಪದ್ಧತಿಗಳನ್ನು ಪಾಲಿಸದ 18 ನೌಕರರ ವಿರುದ್ಧ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕ್ರಮ ಕೈಗೊಂಡಿದೆ. ಆ ನೌಕರರು ಈಗ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆಯಾಗಬೇಕು ಅಥವಾ ಸ್ವಯಂಪ್ರೇರಿತ ನಿವೃತ್ತಿಗೆ (ವಿಆರ್‌ಎಸ್) ಅರ್ಜಿ ಸಲ್ಲಿಸಬೇಕು ಎಂದು ಆಡಳಿತ ಮಂಡಳಿ ತಿಳಿಸಿದೆ. ಇದನ್ನು ಪಾಲಿಸಲು ವಿಫಲವಾದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
- Sushma Chakre
- Updated on: Feb 5, 2025
- 10:34 pm
ತಿರುಪತಿಯಲ್ಲಿ ಕಾಲ್ತುಳಿತ ದುರಂತದ ಬೆನ್ನಲ್ಲೇ ತಿರುಮಲ ಲಡ್ಡು ಕೌಂಟರ್‌ನಲ್ಲಿ ಬೆಂಕಿ ಅವಘಡ
ತಿರುಪತಿಯಲ್ಲಿ ಕೆಲವು ದಿನಗಳ ಹಿಂದೆ ವೈಕುಂಠ ಏಕಾದಶಿ ಟಿಕೆಟ್ ಕೌಂಟರ್ ಬಳಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿತ್ತು. ಈ ದುರಂತದಲ್ಲಿ 6 ಜನ ಮೃತಪಟ್ಟಿದ್ದರು ಹಾಗೂ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ತಿರುಪತಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಇಂದು ತಿರುಮಲ ಲಡ್ಡು ಕೌಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಕ್ತರು ಓಡಿಹೋಗಿ ಅಪಾಯದಿಂದ ಪಾರಾಗಿದ್ದಾರೆ.
- Sushma Chakre
- Updated on: Jan 13, 2025
- 3:42 pm
Tirupati stampede: ತಿರುಪತಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ ಆಂಧ್ರ ಸರ್ಕಾರ
ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 6 ಮಂದಿ ಭಕ್ತರು ಮೃತಪಟ್ಟಿದ್ದಾರೆ. ಈ ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಆಂಧ್ರಪ್ರದೇಶ ಸರ್ಕಾರ ಘೋಷಿಸಿದೆ. ತಿರುಮಲ ಶ್ರೀವಾರಿ ವೈಕುಂಠ ದ್ವಾರ ದರ್ಶನಕ್ಕೆ ಟೋಕನ್ ವಿಚಾರದಲ್ಲಿ ತಿರುಪತಿಯಲ್ಲಿರುವ ವಿಷ್ಣು ನಿವಾಸದ ಬಳಿ ಕಾಲ್ತುಳಿತ ಸಂಭವಿಸಿ ಹಲವಾರು ಭಕ್ತರು ಮೃತಪಟ್ಟಿರುವುದು ಆಘಾತಕ್ಕೀಡು ಮಾಡಿದೆ.
- Nayana Rajeev
- Updated on: Jan 9, 2025
- 1:31 pm
ತಿರುಪತಿ ತಿರಮಲದಲ್ಲಿ ಕಾಲ್ತುಳಿತ: ಅಸಲಿಗೆ ಬುಧವಾರ ರಾತ್ರಿ ನಡೆದಿದ್ದೇನು? ಇಲ್ಲಿದೆ ವಿವರ
ಟೋಕನ್ ಕಲೆಕ್ಟ್ ಮಾಡಿಕೊಳ್ಳಲು ಭಕ್ತರೆಲ್ಲ ಶಾಲೆಯ ಬಳಿಯಿರುವ ಪದ್ಮಾವತಿ ಪಾರ್ಕ್ನಲ್ಲಿ ನೆರೆದಿದ್ದರು. ಮಹಿಳೆಯೊಬ್ಬರಿಗೆ ಉಸಿರಾಟದ ಸಮಸ್ಯೆ ಎದುರಾದಾಗ ಪೊಲೀಸರು ಅವರ ನೆರವಿಗೆ ಧಾವಿಸಿದ್ದಾರೆ. ಅದನ್ನು ಟೋಕನ್ ನೀಡುವ ಕೆಲಸ ಶುರುವಾಗಿದೆಯೆಂದು ಭಕ್ತರು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಪಾರ್ಕಿನ ಗೇಟ್ ಬಳಿ ನೂಕುನುಗ್ಗಲು ಮತ್ತು ಕಾಲ್ತುಳಿತ ಉಂಟಾಗಿದೆ.
- Arun Belly
- Updated on: Jan 9, 2025
- 11:07 am
Tirupati Stampede: ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಕಾರಣವೇನು?
ಬುಧವಾರ ಸಂಜೆ ತಿರುಪತಿ ದೇವಸ್ಥಾನದ ಬಳಿ ಕಾಲ್ತುಳಿತ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧಿಕಾರಿಗಳು ತಿಳಿಸಿದ್ದಾರೆ. ತಿರುಮಲ ಶ್ರೀವಾರಿ ವೈಕುಂಠ ದ್ವಾರ ಟಿಕೆಟಿಂಗ್ ಕೌಂಟರ್ ಬಳಿಯ ವಿಷ್ಣು ನಿವಾಸದ ಬಳಿ ದರ್ಶನ ಟೋಕನ್ ವಿತರಣೆ ವೇಳೆ ಈ ಘಟನೆ ನಡೆದಿದೆ.
- Nayana Rajeev
- Updated on: Jan 9, 2025
- 11:05 am
ತಿರುಪತಿ ಕಾಲ್ತುಳಿತ: ಗಾಯಗೊಂಡಿದ್ದ 32 ಮಂದಿ ಭಕ್ತರು ಡಿಸ್ಚಾರ್ಜ್
ದೇಶದ ಪ್ರಸಿದ್ಧ ಯಾತ್ರಾ ಸ್ಥಳ ಆಂಧ್ರ ಪ್ರದೇಶದಲ್ಲಿನ ತಿರುಪತಿ-ತಿರುಮಲದಲ್ಲಿ ಬುಧವಾರ ರಾತ್ರಿ ಕಾಲ್ತುಳಿತ ಸಂಭವಿಸಿತ್ತು. ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಓರ್ವ ಮಹಿಳೆ ಸೇರಿದಂತೆ ಒಟ್ಟು ಆರು ಜನ ಮೃತಪಟ್ಟಿದ್ದಾರೆ. 48 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಣ್ಯರು ಸಂತಾಪ ಸೂಚಿಸಿದ್ದಾರೆ.
- Vivek Biradar
- Updated on: Jan 9, 2025
- 11:09 am
Tirupati Stampede: ತಿರುಪತಿ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆ, 20 ಮಂದಿಗೆ ಗಾಯ
ದೇಶದ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿರುವ ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾರ ದರ್ಶನ ಟೋಕನ್ ವಿತರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ.
- Ganapathi Sharma
- Updated on: Jan 9, 2025
- 9:08 am
ತಿರುಪತಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಟೋಕನ್ ಕೌಂಟರ್‌ನಲ್ಲಿ ಕಾಲ್ತುಳಿತ; ನಾಲ್ವರು ಭಕ್ತರ ಸಾವು
ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಭಾರೀ ಕಾಲ್ತುಳಿತ ಉಂಟಾಗಿ, ನಾಲ್ವರು ಭಕ್ತರು ಸಾವನ್ನಪ್ಪಿರುವ ಘಟನೆ ನಡೆದಿದೆ. ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಯ ಟೋಕನ್ ಕೌಂಟರ್ ಟೋಕನ್ ವಿತರಿಸುವಾಗ ಭಕ್ತರ ನಡುವೆ ತಳ್ಳಾಟ ಶುರುವಾಗಿದೆ. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ಭಕ್ತರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ವಿವಿಧ ಕೇಂದ್ರಗಳಲ್ಲಿ ದರ್ಶನದ ಟೋಕನ್ಗಾಗಿ ಸಾವಿರಾರು ಮಂದಿ ಜಮಾಯಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು.
- Sushma Chakre
- Updated on: Jan 8, 2025
- 10:45 pm