ತಿರುಪತಿ ತಿರಮಲದಲ್ಲಿ ಕಾಲ್ತುಳಿತ: ಅಸಲಿಗೆ ಬುಧವಾರ ರಾತ್ರಿ ನಡೆದಿದ್ದೇನು? ಇಲ್ಲಿದೆ ವಿವರ

ತಿರುಪತಿ ತಿರಮಲದಲ್ಲಿ ಕಾಲ್ತುಳಿತ: ಅಸಲಿಗೆ ಬುಧವಾರ ರಾತ್ರಿ ನಡೆದಿದ್ದೇನು? ಇಲ್ಲಿದೆ ವಿವರ

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 09, 2025 | 11:07 AM

ಟೋಕನ್ ಕಲೆಕ್ಟ್ ಮಾಡಿಕೊಳ್ಳಲು ಭಕ್ತರೆಲ್ಲ ಶಾಲೆಯ ಬಳಿಯಿರುವ ಪದ್ಮಾವತಿ ಪಾರ್ಕ್​​ನಲ್ಲಿ ನೆರೆದಿದ್ದರು. ಮಹಿಳೆಯೊಬ್ಬರಿಗೆ ಉಸಿರಾಟದ ಸಮಸ್ಯೆ ಎದುರಾದಾಗ ಪೊಲೀಸರು ಅವರ ನೆರವಿಗೆ ಧಾವಿಸಿದ್ದಾರೆ. ಅದನ್ನು ಟೋಕನ್ ನೀಡುವ ಕೆಲಸ ಶುರುವಾಗಿದೆಯೆಂದು ಭಕ್ತರು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಪಾರ್ಕಿನ ಗೇಟ್ ಬಳಿ ನೂಕುನುಗ್ಗಲು ಮತ್ತು ಕಾಲ್ತುಳಿತ ಉಂಟಾಗಿದೆ.

ತಿರುಪತಿ: ತಿರುಪತಿಯ ತಿರುಮಲದಲ್ಲಿ ಬುಧವಾರ ರಾತ್ರಿ ಸುಮಾರು 8 ಗಂಟೆಗೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ 6 ಭಕ್ತಾದಿಗಳು ಮೃತಪಟ್ಟು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಮ್ಮ ವರದಿಗಾರ ಸ್ಥಳವನ್ನು ತಲುಪಿ ಅಲ್ಲ್ಲಿ ನಡೆದಿದ್ದೇನು ಅನ್ನೋದನ್ನು ವಿವರಿಸುತ್ತಿದ್ದಾರೆ. ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್​ಗಳನ್ನು ಹಂಚುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ದುರಂತ ಜರುಗಿದೆ. ಭಕ್ತರಿಗೆ ಟೋಕನ್​ಗಳನ್ನು ವಿತರಿಸಲು 9 ಸ್ಥಳಗಳಲ್ಲಿ 94 ಕೌಂಟರ್​ಗಳ ಏರ್ಪಾಟು ಮಾಡಲಾಗಿತ್ತು ಮತ್ತು ಬೈರಾಗಿಪಟ್ಟಣದ ರಾಮಾನಾಯ್ಡು ಹೈಸ್ಕೂಲ್ ನಲ್ಲಿದ್ದ ಕೌಂಟರ್ ಬಳಿ ನೂಕುನುಗ್ಗಲು ಮತ್ತು ಕಾಲ್ತುಳಿತ ಸಂಭವಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತಿರುಪತಿ ಕಾಲ್ತುಳಿತ: ಬಳ್ಳಾರಿ ಮೂಲದ ಮಹಿಳೆ ಸಾವು

Published on: Jan 09, 2025 11:02 AM