ರೈಲು ಹತ್ತಲು ಹೋಗಿ ಪ್ಲಾಟ್ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ, ಹೋಮ್ ಗಾರ್ಡ್ಗೆ ಶ್ಲಾಘನೆ
ದಾವಣಗೆರೆಯ ರೈಲು ನಿಲ್ದಾಣದಲ್ಲಿ ಓರ್ವ ಪ್ರಯಾಣಿಕ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಫ್ಲಾಟ್ಫಾರಂನಿಂದ ಕೆಳಗೆ ಬೀಳುತ್ತಿದ್ದನು. ಕೂಡಲೇ ಹೋಮ್ ಗಾರ್ಡ್ ಶಶಿಧರ್ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಈ ಧೈರ್ಯಶಾಲಿ ಕಾರ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಮ್ ಗಾರ್ಡ್ ಶಶಿಧರ್ ಕಾರ್ಯಕಕ್ಕೆ ಸಾರ್ವಜನಿಕರು ಶ್ಲಾಘಿನೆ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ, ಜನವರಿ 09: ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ (Davangere Railway Station) ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಫ್ಲಾಟ್ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನನ್ನು ಹೋಮ್ ಗಾರ್ಡ್ (Home Gard) ಶಶಿಧರ್ ರಕ್ಷಣೆ ಮಾಡಿದ್ದಾರೆ. ಪ್ರಯಾಣಿಕ ಹುಬ್ಬಳಿಯಿಂದ ಮಂಗಳೂರಿಗೆ ಹೊರಟಿದ್ದನು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ರೈಲು ದಾವಣಗೆರೆಯಲ್ಲಿ ನಿಲುಗಡೆಯಾಗುತ್ತಿದ್ದಂತೆ ಉಡುಪಿ ಮೂಲದ ಪ್ರಯಾಣಿಕ ನೀರು ತರಲು ಕೆಳಗೆ ಇಳಿದಿದ್ದನು. ನೀರು ತೆಗೆದುಕೊಂಡು ಬರುವಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತ್ತು. ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಅಯತಪ್ಪಿ ಬಿದ್ದ ಫ್ಲಾಟ್ಫಾರಂನಿಂದ ಕೆಳಗೆ ಬೀಳುತ್ತಿದ್ದನು. ಪ್ರಯಾಣಿಕ ಬೀಳುತ್ತಿರುವುದನ್ನು ಕಂಡ ಹೋಮ್ ಗಾರ್ಡ್ ಶಶಿಧರ್ ತಕ್ಷಣ ಅವರನ್ನು ಮೇಲೆ ಎಳೆದುಕೊಂಡಿದ್ದಾರೆ. ರಕ್ಷಣೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೋಮ್ ಗಾರ್ಡ್ ಶಶಿಧರ್ ಅವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
