ದೆಹಲಿಯಲ್ಲಿ ಇಂಡಿಯಾ ಸಂಸದರ ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ತ್ರಿವರ್ಣ ಧ್ವಜ ಬೀಸಿದ ರಾಹುಲ್ ಗಾಂಧಿ!
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ ಕಳವು ನಡೆಸಿದ್ದಾರೆ ಎಂದು ಆರೋಪಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ಇಂದು ನವದೆಹಲಿಯಲ್ಲಿ ನಡೆಸಿದ ಭಾರಿ ಪ್ರತಿಭಟನಾ ಮೆರವಣಿಗೆಯ ವೇಳೆ ಹೈಡ್ರಾಮಾ ನಡೆದಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀತಿ ಆಯೋಗದ ಕಚೇರಿಯ ಬಳಿ ಪೊಲೀಸರು ಹಾಕಿದ್ದ ಕಬ್ಬಿಣದ ಬ್ಯಾರಿಕೇಡ್‌ಗಳ ಮೇಲೇರಿ ತ್ರಿವರ್ಣ ಧ್ವಜವನ್ನು ಬೀಸಿದರು. ಕೂಡಲೆ ಅಲ್ಲಿ ಸೇರಿದ್ದ ಪ್ರತಿಭಟನಾಕಾರರು ಜೋರಾಗಿ ಹರ್ಷೋದ್ಘಾರ ಮಾಡಿದರು. ಈ ವೇಳೆ ಸಮಾಜವಾದಿ ಪಾರ್ಟಿ ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್ ಹಾಗೂ ಇತರ ಸಂಸದರು ಸಹ ಬ್ಯಾರಿಕೇಡ್‌ಗಳ ಮೇಲೆ ಹತ್ತಿ ಪ್ರತಿಭಟನೆ ನಡೆಸಿದರು.
ನವದೆಹಲಿ, ಅಕ್ಟೋಬರ್ 6: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ ಕಳವು ನಡೆಸಿದ್ದಾರೆ ಎಂದು ಆರೋಪಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ಇಂದು ನವದೆಹಲಿಯಲ್ಲಿ ನಡೆಸಿದ ಭಾರಿ ಪ್ರತಿಭಟನಾ ಮೆರವಣಿಗೆಯ ವೇಳೆ ಹೈಡ್ರಾಮಾ ನಡೆದಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀತಿ ಆಯೋಗದ ಕಚೇರಿಯ ಬಳಿ ಪೊಲೀಸರು ಹಾಕಿದ್ದ ಕಬ್ಬಿಣದ ಬ್ಯಾರಿಕೇಡ್‌ಗಳ ಮೇಲೇರಿ ತ್ರಿವರ್ಣ ಧ್ವಜವನ್ನು ಬೀಸಿದರು. ಕೂಡಲೆ ಅಲ್ಲಿ ಸೇರಿದ್ದ ಪ್ರತಿಭಟನಾಕಾರರು ಜೋರಾಗಿ ಹರ್ಷೋದ್ಘಾರ ಮಾಡಿದರು. ಈ ವೇಳೆ ಸಮಾಜವಾದಿ ಪಾರ್ಟಿ ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್ ಹಾಗೂ ಇತರ ಸಂಸದರು ಸಹ ಬ್ಯಾರಿಕೇಡ್‌ಗಳ ಮೇಲೆ ಹತ್ತಿ ಪ್ರತಿಭಟನೆ ನಡೆಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಮತ್ತು ಕಾರ್ಯಕರ್ತರು ದೆಹಲಿಯ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಪೊಲೀಸರು ತಡೆದಾಗ ನಾಯಕರು ನೀತಿ ಆಯೋಗದ ಕಚೇರಿ ಬಳಿ ಧರಣಿ ಕುಳಿತರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

