‘ಬುದ್ಧಿವಂತರು ಪ್ರೀತಿಸುತ್ತಾರೆ, ಮೂರ್ಖರು ಮದುವೆಯಾಗುತ್ತಾರೆ’; ರಾಮ್ ಗೋಪಾಲ್ ವರ್ಮ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ನೇರ ಮಾತುಗಳಿಂದ ಯಾವಾಗಲೂ ಚರ್ಚೆ ಆಗುತ್ತಾರೆ. ಅವರಿಗೆ ಹೀರೋಯಿನ್ಗಳ ಬಗ್ಗೆ ವಿಶೇಷ ಪ್ರೀತಿ. ಯುವ ನಾಯಕಿಯರ ಜೊತೆ ಅವರು ಬೋಲ್ಡ್ ಆಗಿ ಕಾಣಿಸಿಕೊಂಡ ಉದಾಹರಣೆ ಇದೆ. ಅವರ ವಿವಾಹದ ಬಗ್ಗೆ ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಲೇ ಇರುತ್ತದೆ.

ರಾಮ್ ಗೋಪಾಲ್ ವರ್ಮ (Ram Gopal Varma) ಅವರಿಗೆ ಇಂದು (ಏಪ್ರಿಲ್ 7) ಜನ್ಮದಿನ. ವಿವಾದದ ಮೂಲಕವೇ ಸದಾ ಸುದ್ದಿ ಆದವರು ರಾಮ್ ಗೋಪಾಲ್ ವರ್ಮಾ. ಆರ್ಜಿವಿ ಮಾಡಿಕೊಂಡ ವಿವಾದಗಳು ಒಂದೆರಡಲ್ಲ ಬಿಡಿ. ಆರ್ಜಿವಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿರಬಹುದು. ಆದರೆ, ವಿವಾದದ ಮೂಲಕ ಹೆಚ್ಚು ಸುದ್ದಿ ಆಗಲು ಅವರು ಇಷ್ಟಪಡುತ್ತಾರೆ ಎನ್ನಬಹುದು. ರಾಮ್ ಗೋಪಾಲ್ ವರ್ಮ ವಿವಾಹದ ಬಗ್ಗೆ ತಮ್ಮದೇ ಆದ ಆಲೋಚನೆ ಹೊಂದಿದ್ದಾರೆ. ಡಿವೋರ್ಸ್ ಹೊಂದಲು ಕೂಡ ಇದುವೇ ಕಾರಣ ಆಯಿತು.
ರಾಮ್ ಗೋಪಾಲ್ ವರ್ಮಾ ಅವರು ರತ್ನ ಹೆಸರಿನ ಯುವತಿಯನ್ನು ವಿವಾಹ ಆಗಿದ್ದರು. ಆ ಬಳಿಕ ಇವರು ವಿಚ್ಛೇದನ ಪಡೆದುಕೊಂಡರು. ಈ ದಂಪತಿಗೆ ಓರ್ವ ಮಗಳು ಇದ್ದಾಳೆ. ಅವರು ಕ್ಲಾಸಿಕಲ್ ಡ್ಯಾನ್ಸರ್. ರಾಮ್ ಗೋಪಾಲ್ ವರ್ಮಾ ಮದುವೆಯನ್ನು ಜೈಲು ಎಂದು ಕರೆದಿದ್ದರು. ಹೀಗಾಗಿ ಇದರಿಂದ ಅವರು ಹೊರ ಬಂದಿದ್ದಾರೆ
‘ಒಂದು ಮದುವೆಯಲ್ಲಿ ಪ್ರೀತಿ ಎಂಬುದು ಬಹಳ ಕಡಿಮೆ ದಿ ಇರುತ್ತದೆ. ಅವರು ಆಚರಿಸುವ ಮದುವೆ ದಿನಗಳಿಗಿಂತ ಕಡಿಮೆ ದಿನಗಳವರೆಗೆ ಪ್ರೀತಿ ಇರುತ್ತದೆ. ಅಂದರೆ ಪ್ರೀತಿ ಇರೋದು 3 ರಿಂದ 5 ದಿನಗಳು. ಬುದ್ಧಿವಂತ ಜನರು ಪ್ರೀತಿಸುತ್ತಾರೆ ಮತ್ತು ಮೂರ್ಖರು ಮದುವೆಯಾಗುತ್ತಾರೆ’ ಎಂದು ನೇರವಾಗಿ ಹೇಳಿದ್ದರು. ರಾಮ್ ಗೋಪಾಲ್ ವರ್ಮ ಅವರು ಉರ್ಮಿಳಾ ಮಾತೊಂಡ್ಕರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು. ಈ ಕಾರಣದಿಂದಲೇ ರತ್ನ ಜೊತೆ ಅವರು ವಿವಾಹ ಕೊನೆ ಮಾಡಿಕೊಂಡರು ಎನ್ನಲಾಗಿದೆ.
ಒಮ್ಮೆ ಸುಚಿತ್ರಾ ಕೃಷ್ಣಮೂರ್ತಿ ಅವರು ಹಾಸ್ಯಾಸ್ಪದವಾಗಿ ‘ನಾನು ಆರ್ಜಿವಿನ ಮದುವೆ ಆಗುತ್ತೇನೆ’ ಎಂದಿದ್ದರು. ಇದನ್ನು ಗಂಭೀರವಾಗಿ ಸ್ವೀಕರಿಸಿದ್ದ ಆರ್ಜಿವಿ, ಕಚೇರಿಗೆ ಅವರನ್ನು ಕರೆದು ಈ ಬಗ್ಗೆ ಗಂಭೀರವಾಗಿ ಮಾತನಾಡಿ, ಮದುವೆ ಬೇಡ ಎಂದಿದ್ದರಂತೆ.
‘ಒಂದೇ ವ್ಯಕ್ತಿಯೊಂದಿಗೆ ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುವ ಅಸಾಧಾರಣ ಸಾಮರ್ಥ್ಯವಿದ್ದರೆ ಮಾತ್ರ ಮದುವೆ ಯಶಸ್ವಿಯಾಗುತ್ತದೆ’ ಎಂದು ಅವರು ಸರಣಿ ಪೋಸ್ಟ್‌ಗಳಲ್ಲಿ ಬರೆದಿದ್ದರು.
ಇದನ್ನೂ ಓದಿ: ‘ನನಗೆ ತಾಯಿ ಅಷ್ಟೇ ಇಷ್ಟ, ಮಗಳಲ್ಲ’: ರಾಮ್ ಗೋಪಾಲ್ ವರ್ಮಾ ನೇರ ಮಾತು
ರಾಮ್ ಗೋಪಾಲ್ ವರ್ಮಾ ಅವರು ಅನೇಕ ಬಾರಿ ವಿವಾಹ ಟೀಕಿಸಿದ್ದಾರೆ. ಈಗ ಅವರು ಯುವ ಹೀರೋಯಿನ್ಗಳ ಜೊತೆ ಕಾಣಿಸಿಕೊಳ್ಳುತ್ತಾರೆ ಮತ್ತು ಅವರ ಜೊತೆ ಆಪ್ತವಾಗಿ ನಡೆದುಕೊಳ್ಳುತ್ತಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಟ್ರೋಲ್ ಆಗಿದ್ದೂ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.