AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲೀಲಾ ಶಾಕಿಂಗ್ ವಿಡಿಯೋ; ನಟಿಯನ್ನು ಬಲವಂತವಾಗಿ ಎಳೆದಾಡಿದ ಜನ

ನಟಿ ಶ್ರೀಲೀಲಾ ಜೊತೆ ಕೆಲವರು ಹದ್ದುಮೀರಿ ನಡೆದುಕೊಂಡಿದ್ದಾರೆ. ಬಲವಂತವಾಗಿ ನಟಿಯನ್ನು ಎಳೆದಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಎಲ್ಲರಿಗೂ ಶಾಕ್ ಆಗಿದೆ. ಶ್ರೀಲೀಲಾ ಅವರ ಸುರಕ್ಷತೆ ಬಗ್ಗೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಶ್ರೀಲೀಲಾ ಶಾಕಿಂಗ್ ವಿಡಿಯೋ; ನಟಿಯನ್ನು ಬಲವಂತವಾಗಿ ಎಳೆದಾಡಿದ ಜನ
Sreeleela
Follow us
ಮದನ್​ ಕುಮಾರ್​
|

Updated on: Apr 06, 2025 | 7:35 PM

ಕನ್ನಡದ ನಟಿ ಶ್ರೀಲೀಲಾ (Sreeleela) ಅವರು ಈಗ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ನಟ ಕಾರ್ತಿಕ್ ಆರ್ಯನ್ (Kartik Aaryan) ಜೊತೆ ಶ್ರೀಲೀಲಾ ಅವರು ಹೊಸ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ. ಈ ನಡುವೆ ಅವರ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ (Sreeleela Viral Video) ನೋಡಿ ಶ್ರೀಲೀಲಾ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಜನಜಂಗುಳಿ ಇರುವ ಪ್ರದೇಶದಲ್ಲಿ ನಡೆದುಕೊಂಡು ಬರುವಾಗ ಶ್ರೀಲೀಲಾ ಅವರನ್ನು ಕೆಲವರು ಬಲವಂತವಾಗಿ ಎಳೆದಾಡಿದ್ದಾರೆ! ಜನಪ್ರಿಯ ಸೆಲೆಬ್ರಿಟಿಗಳಿಗೇ ಈ ರೀತಿ ಆದರೆ ಸಾಮಾನ್ಯ ಮಹಿಳೆಯರ ಗತಿ ಏನು ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ಅವರು ಜೋಡಿಯಾಗಿ ನಟಿಸುತ್ತಿರುವ ಹೊಸ ಸಿನಿಮಾಗೆ ಇನ್ನೂ ಹೆಸರು ಇಟ್ಟಿಲ್ಲ. ಕೆಲವರು ಈ ಚಿತ್ರವನ್ನು ‘ಆಶಿಕಿ 3’ ಎನ್ನುತ್ತಿದ್ದಾರೆ. ಇನ್ನು ಕೆಲವರು ‘ತು ಮೇರಿ ಜಿಂದಗಿ ಹೈ’ ಎಂದು ಹೇಳುತ್ತಿದ್ದಾರೆ. ಅಧಿಕೃತ ಶೀರ್ಷಿಕೆ ಏನು ಎಂಬುದನ್ನು ಚಿತ್ರತಂಡದವರು ಹೇಳಿಲ್ಲ. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಈ ಚಿತ್ರದ ಬಗ್ಗೆ ಸುದ್ದಿ ಆಗುತ್ತಿದೆ.

ಇದನ್ನೂ ಓದಿ
Image
ಡ್ಯಾನ್ಸರ್ ಎಂದ ನಿರೂಪಕಿಗೆ ಜಾಡಿಸಿದ ನಟಿ ಶ್ರೀಲೀಲಾ
Image
ಶ್ರೀಲೀಲಾ ಬಗ್ಗೆ ತೆಲುಗು ನಿರ್ಮಾಪಕರ ಬೇಸರ, ಸಂಘಕ್ಕೆ ದೂರು ಸಾಧ್ಯತೆ
Image
ಇಬ್ಬರು ಮಕ್ಕಳ ದತ್ತು ಪಡೆದಿದ್ದಾರೆ ಶ್ರೀಲೀಲಾ: ಈ ವಿಚಾರ ಗೊತ್ತೇ?
Image
‘ಪುಷ್ಪ 2’ ತಂಡಕ್ಕೆ ಏಳು ಕೋಟಿ ಹಣ ಉಳಿಸಿದ ನಟಿ ಶ್ರೀಲೀಲಾ

ಜನರ ನಡುವೆ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಅವರು ನಡೆದುಬರುತ್ತಿದ್ದರು. ಶ್ರೀಲೀಲಾಗಿಂತ ಒಂದೆರಡು ಹೆಜ್ಜೆ ಮುಂದೆ ಕಾರ್ತಿಕ್ ಆರ್ಯಕ್ ಇದ್ದರು. ಇಬ್ಬರೂ ಫೇಮಸ್ ಕಲಾವಿದರಾದ ಕಾರಣ ಅವರನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಹಿಂದೆ ನಡೆದುಕೊಂಡ ಬರುತ್ತಿದ್ದ ಶ್ರೀಲೀಲಾ ಅವರ ಕೈಯನ್ನು ಹಿಡಿದು ಯಾರೋ ಎಳೆದಿದ್ದಾರೆ. ಅಲ್ಲದೇ, ತಮ್ಮ ಗುಂಪಿನ ಒಳಗೆ ನಟಿಯನ್ನು ಎಳೆದುಕೊಂಡಿದ್ದಾರೆ!

ಶ್ರೀಲೀಲಾ ವೈರಲ್ ವಿಡಿಯೋ :

ತಮ್ಮ ಹಿಂದೆ ಈ ರೀತಿ ಆಗಿದೆ ಎಂಬುದು ಕಾರ್ತಿಕ್ ಆರ್ಯನ್ ಅವರಿಗೆ ಗೊತ್ತಾಗಲೇ ಇಲ್ಲ. ತಕ್ಷಣಕ್ಕೆ ಶ್ರೀಲೀಲಾ ಅವರ ಬಾಡಿಗಾರ್ಡ್​ಗಳು ರಕ್ಷಣೆಗೆ ಮುಂದಾದರು. ಈ ಘಟನೆಯಿಂದ ಒಂದು ಕ್ಷಣ ಶ್ರೀಲೀಲಾ ವಿಚಲಿತರಾಗಿದ್ದು ನಿಜ. ಆದರೆ ಕೂಡಲೇ ಅವರು ನಗುನಗುತ್ತಾ ಮುಂದೆ ಸಾಗಿದರು. ಮುಂದೆ ಸಾಗುತ್ತಿದ್ದ ಕಾರ್ತಿಕ್ ಆರ್ಯನ್ ಅವರು ಹಿಂದೆ ತಿರುಗಿ ನೋಡುವಷ್ಟರಲ್ಲಿ ಇದೆಲ್ಲ ನಡೆದುಹೋಯಿತು.

ಇದನ್ನೂ ಓದಿ: ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್

ಈ ಘಟನೆ ಯಾವ ಲೊಕೇಷನ್​ನಲ್ಲಿ ನಡೆದಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಇನ್ನು, ಈ ಸಿನಿಮಾದ ಶೂಟಿಂಗ್ ವಿಡಿಯೋಗಳು ಕೂಡ ಕೆಲವೇ ದಿನಗಳ ಹಿಂದೆ ಲೀಕ್ ಆಗಿದ್ದವು. ಅದನ್ನು ನೋಡಿ ಅಭಿಮಾನಿಗಳಿಗೆ ಬೇಸರ ಆಗಿತ್ತು. ಈ ಚಿತ್ರಕ್ಕೆ ಅನುರಾಗ್ ಬಸು ಅವರು ನಿರ್ದೇಶನ ಮಾಡುತ್ತಿದ್ದಾರೆ. ಟೀಸರ್​ ಬಿಡುಗಡೆಯಾಗಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ