‘ದ್ರೌಪದಿ’ ಸಿನಿಮಾ ಮಾಡ ಹೊರಟಿದ್ದ ದೀಪಿಕಾ, ಹೃತಿಕ್ಗೆ ಕೃಷ್ಣನ ಪಾತ್ರ; ಏನಾಯಿತು?
Deepika Padukone: ನಟಿ ದೀಪಿಕಾ ಪಡುಕೋಣೆ ತಾಯಿಯಾಗಿದ್ದು ಸುಮಾರು ಒಂದು ವರ್ಷದಿಂದಲೂ ಚಿತ್ರೀಕರಣದಿಂದ ದೂರ ಉಳಿದಿದ್ದಾರೆ. ದೀಪಿಕಾರ ಕಮ್ ಬ್ಯಾಕ್ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲ ವರ್ಷಗಳ ಹಿಂದೆ ಮಹಾಭಾರತ ಸಿನಿಮಾ ಪ್ರಾಜೆಕ್ಟ್ ಸುದ್ದಿ ಹರಿದಾಡಿತ್ತು, ಸಿನಿಮಾದಲ್ಲಿ ದೀಪಿಕಾ, ದ್ರೌಪದಿಯ ಪಾತ್ರದಲ್ಲಿ ನಟಿಸುವವರಿದ್ದರು.

ದೀಪಿಕಾ ಪಡುಕೋಣೆ (Deepika Padukone) ಅವರು ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. 2019ರಲ್ಲಿ ಅವರು ಒಂದು ಸಿನಿಮಾ ನಿರ್ಮಾಣ ಮಾಡೋದಾಗಿ ಘೋಷಿಸಿದ್ದರು. ದ್ರೌಪದಿಯ ದೃಷ್ಟಿಯಿಂದ ಮಹಭಾರತವನ್ನು ಹೇಳುತ್ತೇನೆ ಎಂದು ಅವರು ಹೇಳಿದ್ದರು. ಈ ಚಿತ್ರವನ್ನು ನಿತೇಶ್ ತಿವಾರಿ (Nitesh Tiwari) ಅವರು ನಿರ್ದೇಶನ ಮಾಡಬೇಕಿತ್ತು. ದೀಪಿಕಾ ಪಡುಕೋಣೆ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈ ಚಿತ್ರವನ್ನು ಲೈಫ್ ಟೈಮ್ನಲ್ಲಿ ಸಿಗುವ ಅಪರೂಪದ ಪಾತ್ರ ಎಂದು ಹೇಳಿದ್ದರು. ಆದರೆ, ಈ ಚಿತ್ರ ಏನಾಯಿತು? ಆರು ವರ್ಷ ಆದರೂ ಇದರು ಸೆಟ್ಟೇರಿಲ್ಲ.
‘ದ್ರೌಪದಿ ಪಾತ್ರ ಮಾಡಲು ನನಗೆ ಖುಷಿ ಇದೆ. ಮಹಾಭಾರತವು ಪೌರಾಣಿಕ ಕಥೆಗಳು ಮತ್ತು ಸಾಂಸ್ಕೃತಿಕ ಪ್ರಭಾವಕ್ಕೆ ಜನಪ್ರಿಯವಾಗಿದ್ದರೂ, ಜೀವನದ ಅನೇಕ ಪಾಠಗಳು ಮಹಾಭಾರತದಿಂದ ಬಂದಿವೆ. ಆದರೆ ಹೆಚ್ಚಾಗಿ ಅದರ ಪುರುಷರಿಂದಲೂ ಬಂದಿವೆ. ಈ ಹೊಸ ದೃಷ್ಟಿಕೋನದಿಂದ ಅದನ್ನು ಹೇಳುವುದು ಆಸಕ್ತಿದಾಯಕ ಮಾತ್ರವಲ್ಲದೆ ಬಹಳ ಮಹತ್ವದ್ದಾಗಿರುತ್ತದೆ’ ಎಂದು ದೀಪಿಕಾ ಈ ಮೊದಲು ಹೇಳಿದ್ದರು.
‘ಮಹಾಭಾರತದ ಒಂದು ನಿರ್ದಿಷ್ಟ ನಿರೂಪಣೆಯಿಂದ ನಾವೆಲ್ಲರೂ ನೋಡುತ್ತಾ ಇದ್ದೇವೆ. ಬೇರೆಯದೇ ಮುಖ ಅಥವಾ ಬೇರೆ ದೃಷ್ಟಿಕೋನವನ್ನು ತೋರಿಸಬೇಕೆಂದು ಯೋಚಿಸಿದೆ’ ಎಂದು ದೀಪಿಕಾ ಹೇಳಿದ್ದರು. ಮೂರು ವರ್ಷಗಳ ಹಿಂದೆ ಮಾತನಾಡಿದ್ದ ದೀಪಿಕಾ, ‘ಈ ಯೋಜನೆ ಪೂರ್ವ-ನಿರ್ಮಾಣ ಹಂತದಲ್ಲಿದೆ ಮತ್ತು ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭಿಸುವುದಾಗಿ’ ಹೇಳಿದ್ದರು.
ಇದನ್ನೂ ಓದಿ:ದೀಪಿಕಾ ಪಡುಕೋಣೆ ಕಮ್ ಬ್ಯಾಕ್ ಯಾವಾಗ? ಯಾವ ಸಿನಿಮಾ ಮೂಲಕ ಎಂಟ್ರಿ
ಆದಾಗ್ಯೂ ಈ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಬದಿಲ್ಲ. ಚಿತ್ರವನ್ನು ಸ್ಥಗಿತಗೊಳಿಸಿರುವ ಸಾಧ್ಯತೆಯಿದೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ಕೃಷ್ಣನ ಪಾತ್ರ ಮಾಡುತ್ತಾರೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಮಧು ಮಂತೆನಾ ಕೂಡ ನಿರ್ಮಾಣದಲ್ಲಿ ಪಾಲುದಾರ ಆಗುತ್ತಾರೆ ಎಂದು ಹೇಳಲಾಗಿತ್ತು.
ದೀಪಿಕಾ ಪಡುಕೋಣೆ ಅವರು ಈ ಮೊದಲು ‘ಚಪಾಕ್’ ಹಾಗೂ ‘83’ ಸಿನಿಮಾ ನಿರ್ಮಾಣ ಮಾಡಿದ್ದರು. ಈಗ ಅವರು ಮೂರನೇ ಚಿತ್ರವಾಗಿ ‘ದ್ರೌಪದಿ’ ನಿರ್ಮಾಣ ಮಾಡಬೇಕಿತ್ತು. ಸದ್ಯ ಮಹಭಾರತದ ವಿಚಾರವಾಗಿ ಸಿನಿಮಾ ಮಾಡುವಾಗ ತುಂಬಾನೇ ಎಚ್ಚರಿಕೆ ಬೇಕು. ಸ್ವಲ್ಪ ವ್ಯತ್ಯಾಸ ಆದರೂ ವಿವಾದ ಆಗುತ್ತದೆ. ಹೀಗಾಗಿ, ತಂಡದವರು ಹಿಂದೆ ಸರಿದರೇ ಎನ್ನುವ ಪ್ರಶ್ನೆ ಮೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Sun, 6 April 25