AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?

Rashmika Mandanna: ನಟಿ ರಶ್ಮಿಕಾ ಮಂದಣ್ಣ, ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟಿ. ರಶ್ಮಿಕಾರ ಸಂಭಾವನೆ ಸಹ ಇತ್ತೀಚೆಗೆ ಏರಿಕೆ ಆಗಿದೆ. ಇದೀಗ ರಶ್ಮಿಕಾ ಮಂದಣ್ಣ ಹೊಸ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಎಷ್ಟು? ಕಾರಿನ ವಿಶೇಷತೆಗಳೇನು? ರಶ್ಮಿಕಾ ಬಳಿ ಎಷ್ಟು ಕಾರುಗಳಿವೆ? ಇಲ್ಲಿದೆ ನೋಡಿ ಮಾಹಿತಿ...

ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?
Rashmika Mandanna
ಮಂಜುನಾಥ ಸಿ.
|

Updated on:Mar 30, 2025 | 9:48 AM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟಿ. ರಶ್ಮಿಕಾ ಮಂದಣ್ಣ ನಟಿಸಿ, ಬಿಡುಗಡೆ ಆಗಿರುವ ಕಳೆದ ಮೂರು ಸಿನಿಮಾಗಳು ದಾಖಲೆ ಮೊತ್ತದ ಹಣವನ್ನು ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿದ್ದಾರೆ. ರಶ್ಮಿಕಾರ ಕಳೆದ ಮೂರು ಸಿನಿಮಾಗಳ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮೂರು ಸಾವಿರ ಕೋಟಿ. ಇದು ಸಾಮಾನ್ಯ ಸಾಧನೆಯಲ್ಲ. ಒಂದರ ಹಿಂದೊಂದು ಹಿಟ್ ಸಿನಿಮಾ ನೀಡಿದ ಬೆನ್ನಲ್ಲೆ ರಶ್ಮಿಕಾರ ಸಂಭಾವನೆ ಏರಿಕೆಯಾಗಿದೆ. ಅದಕ್ಕೆ ತಕ್ಕಂತೆ ನಟಿಯ ಜೀವನ ಶೈಲಿಯಲ್ಲಿಯೂ ಬದಲಾವಣೆ ಆಗಿದೆ. ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ತಮಗಾಗಿ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಮರ್ಸಿಡೀಸ್ ಎಸ್ 450 ಕಾರನ್ನು ಖರೀದಿ ಮಾಡಿದ್ದಾರೆ. ರಶ್ಮಿಕಾರ ಇಷ್ಟದ ಬಣ್ಣವಾದ ಕಪ್ಪು ಬಣ್ಣದ ಕಾರನ್ನೇ ರಶ್ಮಿಕಾ ಖರೀದಿ ಮಾಡಿದ್ದು, ಸೆಡಾನ್ ಮಾದರಿಯ ಕಾರು ಇದಾಗಿದೆ. ಅಂದಹಾಗೆ ಮರ್ಸಿಡೀಸ್ ಎಸ್ 450 ಕಾರಿನ ಬೆಲೆ ಸುಮಾರು 2.25 ಕೋಟಿ ರೂಪಾಯಿಗಳಿವೆ. ಈ ಐಶಾರಾಮಿ ಕಾರಿನಲ್ಲಿ ಹಲವು ಅತ್ಯುತ್ತಮ ಸೌಲಭ್ಯಗಳು, ಸೌಕರ್ಯಗಳು ಹಾಗೂ ಸೇಫ್ಟಿ ಫೀಚರ್ಸ್​ ಬರುತ್ತವೆ. ಜೊತೆಗೆ ಒಂದು ಸುಖಕರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ ಈ ಕಾರು ಅದೇ ಕಾರಣಕ್ಕೆ ರಶ್ಮಿಕಾ ಈ ಕಾರು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ಎಲ್ಲೇ ಇದ್ದರು, ಹೇಗೆ ಇದ್ದರು ಇದೊಂದು ವಿಷಯ ಮರೆಯೊಲ್ಲ ರಶ್ಮಿಕಾ ಮಂದಣ್ಣ

ಇದನ್ನೂ ಓದಿ
Image
ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?
Image
ರಶ್ಮಿಕಾಗೆ ಹಿಂದಿ ಕಲಿಯಲು ಆಗಲ್ಲ, ಕಾರಣ ಹೇಳಿದ ಸಲ್ಮಾನ್ ಖಾನ್
Image
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
Image
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಈ ಐಶಾರಾಮಿ ಕಾರಿನಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನವಿದೆ. ಆರಾಮದಾಯಕ ಪ್ರಯಾಣಕ್ಕೆ ಸೀಟ್ ರಿಕ್ಲೈನರ್, ಇನ್​ಬಿಲ್ಟ್ ಫ್ರಿಡ್ಜ್, ಹಿಂದಿನ ಸೀಟಿಗೆ ಟಿವಿ, ವಿಶಾಲವಾದ ಲೆಗ್ ರೂಂ, ಆಟೋಮ್ಯಾಟಿಕ್ ಡೋರ್​ಗಳು, ಅತ್ಯುತ್ತಮ ಭದ್ರತೆ, ಹೀಟೆಡ್, ವೆಂಟಿಲೇಟೆಡ್ ಸೀಟ್​ಗಳು ಇನ್ನೂ ಹಲವು ಅತ್ಯುತ್ತಮ ಸೌಲಭ್ಯಗಳು ಈ ಐಶಾರಾಮಿ ಕಾರಿನಲ್ಲಿದೆ.

ಅಂದಹಾಗೆ ರಶ್ಮಿಕಾ ಬಳಿ ಇನ್ನೂ ಕೆಲವು ಐಶಾರಾಮಿ ಕಾರುಗಳಿವೆ. ಕೆಲ ವರ್ಷದ ಹಿಂದಷ್ಟೆ ಕಪ್ಪು ಬಣ್ಣದ ಲ್ಯಾಂಡ್ ರೋವರ್ ಕಾರೊಂದನ್ನು ರಶ್ಮಿಕಾ ಮಂದಣ್ಣ ಖರೀದಿ ಮಾಡಿದ್ದರು. ಅದಾದ ಬಳಿಕ ಇನ್ನೋವಾ ಕ್ರಿಸ್ಟಾ ಕಾರೊಂದನ್ನು ಸಹ ಖರೀದಿ ಮಾಡಿದರು. ಒಂದು ಮಿನಿ ಕೂಪರ್ ಕಾರು ಸಹ ರಶ್ಮಿಕಾ ಮಂದಣ್ಣ ಬಳಿ ಇದೆಯಂತೆ. ಅವರ ತಂದೆಗೆ ಒಂದು ಇನ್ನೋವಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಇದೀಗ 2.25 ಕೋಟಿ ಮೌಲ್ಯದ ಕಾರು ಖರೀದಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:38 am, Sun, 30 March 25