AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ತಂಡಕ್ಕೆ ಏಳು ಕೋಟಿ ಹಣ ಉಳಿಸಿದ ನಟಿ ಶ್ರೀಲೀಲಾ

Pushpa 2: 2023 ರಲ್ಲಿ ಬಿಡುಗಡೆ ಆಗಿದ್ದ ‘ಪುಷ್ಪ’ ಸಿನಿಮಾದ ‘ಊ ಅಂಟಾವ’ ಐಟಂ ಹಾಡು ಭಾರಿ ಹಿಟ್ ಆಗಿತ್ತು. ಪುಷ್ಪ 2 ಸಿನಿಮಾದಲ್ಲಿಯೂ ಐಟಂ ಹಾಡಿನ ಬಗ್ಗೆ ವಿಶೇಷ ಕಾಳಜಿವಹಿಸಲಾಗಿದ್ದು, ಶ್ರೀಲೀಲಾ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಶ್ರೀಲೀಲಾರಿಂದ ಚಿತ್ರತಂಡಕ್ಕೆ ಏಳು ಕೋಟಿ ಹಣ ಉಳಿದಿದೆ ಹೇಗೆ?

‘ಪುಷ್ಪ 2’ ತಂಡಕ್ಕೆ ಏಳು ಕೋಟಿ ಹಣ ಉಳಿಸಿದ ನಟಿ ಶ್ರೀಲೀಲಾ
Follow us
ಮಂಜುನಾಥ ಸಿ.
|

Updated on: Nov 15, 2024 | 11:49 AM

‘ಪುಷ್ಪ 2’ ಸಿನಿಮಾ ಇನ್ನು 20 ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಇನ್ನೆರಡು ದಿನಕ್ಕೆ ಅಂದರೆ ನವೆಂಬರ್ 17ರಂದು ಬಹು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಮಾಹಿತಿಯಂತೆ ಸಿನಿಮಾದ ಭಾಗಷಃ ಚಿತ್ರೀಕರಣ ಮುಗಿದಿದೆ. ಸ್ವತಃ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ತಮ್ಮ ಡಬ್ಬಿಂಗ್ ಮುಗಿಸಿದ್ದಾರೆ. ಸಿನಿಮಾದ ಐಟಂ ಹಾಡಿನ ಚಿತ್ರೀಕರಣ ಇನ್ನೂ ಪೂರ್ಣವಾಗಿಲ್ಲ ಎನ್ನಲಾಗುತ್ತಿದೆ. ಐಟಂ ಹಾಡಿಗೆ ಹಲವು ನಟಿಯರನ್ನು ಪರಿಗಣಿಸಿದ್ದ ನಿರ್ದೇಶಕ ಸುಕುಮಾರ್, ಕೊನೆಗೆ ಕನ್ನಡತಿ ಶ್ರೀಲೀಲಾರನ್ನು ಆಯ್ಕೆ ಮಾಡಿದ್ದಾರೆ. ನಟಿ ಶ್ರೀಲೀಲಾ ಇಂದ ಚಿತ್ರತಂಡಕ್ಕೆ ಬರೋಬ್ಬರಿ ಏಳು ಕೋಟಿ ರೂಪಾಯಿ ಹಣ ಉಳಿದಿದೆ.

2021 ರಲ್ಲಿ ಬಿಡುಗಡೆ ಆಗಿದ್ದ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ಐಟಂ ಹಾಡಿನಲ್ಲಿ ಕುಣಿದಿದ್ದರು. ಈ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಬಿಡುಗಡೆಗೆ ಮುಂಚೆ ಬಿಡುಗಡೆ ಆಗಿದ್ದ ಈ ಹಾಡು, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಹಾಗಾಗಿ ‘ಪುಷ್ಪ 2’ ಸಿನಿಮಾದ ಐಟಂ ಹಾಡಿನ ಬಗ್ಗೆಯೂ ಸಹ ಚಿತ್ರತಂಡ ಗಂಭೀರವಾಗಿ ಪರಿಗಣಿಸಿದ್ದು, ಸ್ಟಾರ್ ನಾಯಕಿಯನ್ನು ಐಟಂ ಹಾಡಿಗೆ ಕರೆತರಲು ಸಾಕಷ್ಟು ಪ್ರಯತ್ನ ನಡೆಸಿತ್ತು.

ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್, ಕಿಯಾರಾ ಅಡ್ವಾಣಿ ಇನ್ನೂ ಕೆಲವರನ್ನು ಕೇಳಲಾಗಿತ್ತು. ಶ್ರದ್ಧಾ ಕಪೂರ್ ಬಹುತೇಕ ಫೈನಲ್ ಸಹ ಆಗಿತ್ತು. ಆದರೆ ಕೊನೆಗೆ ಮತ್ತೆ ಮನಸ್ಸು ಬದಲಾಯಿಸಿದ ಚಿತ್ರತಂಡ ಶ್ರೀಲೀಲಾರನ್ನೇ ಐಟಂ ಹಾಡಿಗೆ ಹಾಕಿಕೊಂಡಿತು. ಇದರಿಂದಾಗಿ ಚಿತ್ರತಂಡಕ್ಕೆ ಏಳು ಕೋಟಿ ರೂಪಾಯಿ ಹಣ ಉಳಿತಾಯವಾಗಿದೆಯಂತೆ. ಶ್ರದ್ಧಾ ಕಪೂರ್, ‘ಪುಷ್ಪ 2’ ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರಂತೆ. ಆದರೆ ಶ್ರೀಲೀಲಾ ಕೇವಲ ಒಂದು ಕೋಟಿ ಪಡೆದು ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:‘ಪುಷ್ಪ 2’ ಐಟಂ ಹಾಡಿನಿಂದ ಶ್ರೀಲೀಲಾಗೆ ಕಾದಿದೆಯಾ ಆಪತ್ತು?

ಶ್ರೀಲೀಲಾ ಅದ್ಭುತವಾದ ಡ್ಯಾನ್ಸರ್, ಯಾವುದೇ ಮಾದರಿಯ ಡ್ಯಾನ್ಸ್ ಅನ್ನೂ ಸಹ ಲೀಲಾಜಾಲವಾಗಿ ಮಾಡಬಲ್ಲರು. ಅಲ್ಲು ಅರ್ಜುನ್ ಅಂಥಹಾ ಉತ್ತಮ ಡ್ಯಾನ್ಸರ್ ಜೊತೆಗೆ ಅವರ ಎನರ್ಜಿಗೆ ಮ್ಯಾಚ್ ಆಗುವ ನಟಿ ಎಂಬ ಕಾರಣಕ್ಕೆ ಶ್ರೀಲೀಲಾರನ್ನು ಚಿತ್ರತಂಡ ಆಯ್ಕೆ ಮಾಡಿದೆ. ಶ್ರೀಲೀಲಾ ತೆಲುಗು, ಈಗ ಬಾಲಿವುಡ್​ನಲ್ಲೂ ತೊಡಗಿಕೊಂಡಿರುವ ಕಾರಣ ಸಿನಿಮಾಕ್ಕೆ ಒಳ್ಳೆಯ ಪ್ರಚಾರವೂ ಆಗುತ್ತದೆ ಎಂಬ ಲೆಕ್ಕಾಚಾರವೂ ಇದರ ಹಿಂದೆ ಇದೆ.

‘ಪುಷ್ಪ 2’ ಸಿನಿಮಾ ಡಿಸೆಂಬರ್ 5 ಕ್ಕೆ ಬಿಡುಗಡೆ ಆಗುತ್ತಿದೆ. ಭಾರಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗಿದೆ. ಸುಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾ, ಈವರೆಗೆ ಬಿಡುಗಡೆ ಆಗಿರುವ ಎಲ್ಲ ಸಿನಿಮಾಗಳ ದಾಖಲೆಯನ್ನು ಪುಡಿಗಟ್ಟಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾವನ್ನು ಅಮೆರಿಕ, ಯುಎಇ, ರಷ್ಯಾ, ಜಪಾನ್ ಇನ್ನೂ ಕೆಲವು ದೇಶಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ