Oscars 2026: ಈ ಬಾರಿ ಆಸ್ಕರ್ ಅವಾರ್ಡ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
Oscar 2026 Winner‘s Full List: 98ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಎಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಬಾಚಿಕೊಂಡರೆ, ಲಿಯನಾರ್ಡೋ ಡಿಕ್ಯಾಪ್ರಿಯೋ ನಟನೆಯ ಈ ಚಿತ್ರಕ್ಕೆ ಪೌಲ್ ಥಾಮಸ್ ಆ್ಯಂಡ್ರಿಸನ್ ಅತ್ಯುತ್ತಮ ನಿರ್ದೇಶಕರಾಗಿ ಹೊರಹೊಮ್ಮಿದರು. ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ ಹಾಗೂ ಮೈಕಲ್ ಬಿ ಜೋರ್ಡನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.

98ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದ ಲಾಸ್ ಎಂಜಲೀಸ್ನಲ್ಲಿರುವ ಹಾಲಿವುಡ್ ಸ್ಟುಡಿಯೋದ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದೆ. ಹಾಲಿವುಡ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇದು ಹಾಲಿವುಡ್ ಚಿತ್ರರಂಗದ ಪಾಲಿಗೆ ವಿಶೇಷ ಎನಿಸಿಕೊಂಡಿದೆ. ಭಾರತದ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಇಲ್ಲಿ ಭಾಗಿ ಆಗಿದ್ದರು. ಈ ವೇಳೆ ವಿವಿಧ ಸಿನಿಮಾಗಳಿಗೆ ಅವಾರ್ಡ್ ನೀಡಲಾಯಿತು.
‘ಸಿನ್ನರ್ಸ್’ ಸಿನಿಮಾ ಬರೋಬ್ಬರಿ 16 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಆಸ್ಕರ್ ಅವಾರ್ಡ್ ಇತಿಹಾಸದಲ್ಲಿ ಚಿತ್ರವೊಂದು ಇಷ್ಟು ನಾಮಿನೇಟ್ ಆಗಿದ್ದು ಇದೇ ಮೊದಲು. ‘ಆಲ್ ಅಬೌಟ್ ಈವ್’ ಸಿನಿಮಾ 14 ವಿಭಾಗಗಳಲ್ಲಿ ನಾಮಿನೇಟ್ ಆಗಿ ದಾಖಲೆ ಮಾಡಿತ್ತು. ‘ಸಿನ್ನರ್ಸ್’ ಸಿನಿಮಾ ಕೆಲವು ವಿಭಾಗಗಳಲ್ಲಿ ಅವಾರ್ಡ್ ಪಡೆಯಲು ಯಶಸ್ವಿ ಆಗಿದೆ. ಅಮೆರಿಕದ ಕಾಲ ಮಾನದ ಪ್ರಕಾರ ಭಾನುವಾರ ಸಂಜೆ ಈ ವಾರ್ಡ್ ಕಾರ್ಯಕ್ರಮ ನಡೆದಿದೆ. ಭಾರತದ ಕಾಲಮಾನದ ಪ್ರಕಾರ, ಸೋಮವಾರ ಬೆಳಿಗ್ಗೆ 5.30ಕ್ಕೆ ಅವಾರ್ಡ್ ಕಾರ್ಯಕ್ರಮ ಪ್ರಸಾರ ಆರಂಭಿಸಿತ್ತು.
‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾ ಅತ್ಯುತ್ತಮ ಸಿನಿಮಾ ಅವಾರ್ಡ್ ಬಾಚಿಕೊಂಡಿತು. ಈ ಸಿನಿಮಾದಲ್ಲಿ ‘ಟೈಟಾನಿಕ್’ ಖ್ಯಾತಿಯ ಲಿಯನಾರ್ಡೋ ಡಿಕ್ಯಾಪ್ರರಿಯೋ ಹೀರೋ. ಪೌಲ್ ಥಾಮಸ್ ಆ್ಯಂಡ್ರಿಸನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದದಾರೆ. ಅವರಿಗೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಕೂಡ ಸಿಕ್ಕಿದೆ. ಈ ಚಿತ್ರ ಒಟ್ಟೂ ಆರು ಅವಾರ್ಡ್ ಗೆದ್ದಿದ್ದು, ಜಿಯೋ ಹಾಟ್ಸ್ಟಾರ್ ಅಲ್ಲಿ ವೀಕ್ಷಣೆಗೆ ಲಭ್ಯವಿದೆ.
ಇದನ್ನೂ ಓದಿ: ಆಸ್ಕರ್ ಅವಾರ್ಡ್ಗೆ ಇರಾನ್ ಡ್ರೋನ್ ದಾಳಿ ಭೀತಿ; ಎಚ್ಚರಿಸಿದ ಪೊಲೀಸರು
ಜೆಸ್ಸಿ ಬಕ್ಲಿ ಅವರು ‘ಹ್ಯಾಮ್ನೆಟ್’ ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ಅವಾರ್ಡ್ ಪಡೆದರು. ‘ಸಿನ್ನರ್ಸ್’ ಸಿನಿಮಾ ನಟನೆಗೆ ಮೈಕಲ್ ಬಿ ಜೋರ್ಡನ್ ಅವರು ಅತ್ಯುತ್ತಮ ನಟ ಅವಾರ್ಡ್ ಪಡೆದರು.
ಅತ್ಯುತ್ತಮ ಸಿನಿಮಾ: ‘ಒನ್ ಬ್ಯಾಟಲ್ ಆಫ್ಟರ್ ಅನದರ್ ಅತ್ಯುತ್ತಮ ನಟಿ: ಜೆಸ್ಸಿ ಬಕ್ಲಿ (‘ಹ್ಯಾಮ್ನೆಟ್’) ಅತ್ಯುತ್ತಮ ನಟ: ಮೈಕಲ್ ಬಿ ಜೋರ್ಡನ್ (ಸಿನ್ನರ್ಸ್) ಅತ್ಯುತ್ತಮ ಒರಿಜಿನಲ್ ಸಾಂಗ್: ಗೋಲ್ಡನ್ ಅತ್ಯುತ್ತಮ ಛಾಯಾಗ್ರಹಣ: ಸಿನ್ನರ್ಸ್ ಅತ್ಯುತ್ತಮ ಸಿನಿಮಾ ಎಡಿಟಿಂಗ್: ಒನ್ ಬ್ಯಾಟಲ್ ಆಫ್ಟರ್ ಅನದರ್ ಅತ್ಯುತ್ತಮ ಸೌಂಡ್ ಸಿನಿಮಾ: ಎಫ್1 ಅತ್ಯುತ್ತಮ ಸಂಗೀತ ಸಂಯೋಜನೆ: ಸಿನ್ನರ್ಸ್ ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ಸ್: ಆಲ್ ದಿ ಎಂಪ್ಟಿ ರೂಂ ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ಅವತಾರ್: ಫೈಯರ್ ಆ್ಯಂಡ್ ಆ್ಯಶ್
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




