ಯಶ್ ಜೊತೆಗಿನ ವಿಡಿಯೋ ಹಂಚಿಕೊಂಡ ಹಾಲಿವುಡ್ ನಟಿ, ಜೊತೆಯಲ್ಲಿ ವಿಶ್ವಚಾಂಪಿಯನ್

Yash: ಯಶ್​ರ ‘ಟಾಕ್ಸಿಕ್’ ಸಿನಿಮಾನಲ್ಲಿ ಕೆಲವು ಹಾಲಿವುಡ್ ನಟ, ನಟಿಯರು ನಟಿಸುತ್ತಿದ್ದಾರೆ. ಇದೀಗ ಹಾಲಿವುಡ್ ನಟಿಯೊಬ್ಬರು ಯಶ್​ ಜೊತೆಗಿನ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಮತ್ತೊಬ್ಬ ಲೆಜೆಂಡ್ ಸಹ ಇದ್ದಾರೆ.

ಯಶ್ ಜೊತೆಗಿನ ವಿಡಿಯೋ ಹಂಚಿಕೊಂಡ ಹಾಲಿವುಡ್ ನಟಿ, ಜೊತೆಯಲ್ಲಿ ವಿಶ್ವಚಾಂಪಿಯನ್
Follow us
ಮಂಜುನಾಥ ಸಿ.
|

Updated on: Nov 15, 2024 | 12:14 PM

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾದಲ್ಲಿ ಭಾರತದ ದೊಡ್ಡ ಸ್ಟಾರ್​ ನಟ-ನಟಿಯರು ನಟಿಸುತ್ತಿದ್ದಾರೆ. ಹಾಲಿವುಡ್ ನಟರೂ ಸಹ ಇದ್ದಾರೆ. ಜೊತೆಗೆ ಹಾಲಿವುಡ್​ನ ಕೆಲ ಅತ್ಯುತ್ತಮ ತಂತ್ರಜ್ಞರನ್ನು ಕರೆಸಿಕೊಳ್ಳಲಾಗಿದೆ. ಹಾಲಿವುಡ್ ಖ್ಯಾತ ಸ್ಟಂಟ್​ಮ್ಯಾನ್ ಜೆಜೆ ಪೆರ್ರಿ ಅವರು ‘ಟಾಕ್ಸಿಕ್’ ಸಿನಿಮಾಕ್ಕೆ ಆಕ್ಷನ್ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಅವರು ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆ ಹಾಲಿವುಡ್ ನಟಿಯೊಬ್ಬರು ಯಶ್ ಜೊತೆಗೆ ಹಳೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಪ್ರೀ ಪ್ರೊಡಕ್ಷನ್ ಸಂದರ್ಭದಲ್ಲಿ 2022 ರ ಸೆಪ್ಟೆಂಬರ್ ತಿಂಗಳಲ್ಲಿ ಯಶ್ ಅಮೆರಿಕಕ್ಕೆ ತೆರಳಿದ್ದರು. ಆಗ ಅಲ್ಲಿನ ಶೂಟಿಂಗ್ ಯಾರ್ಡ್ ಒಂದರಲ್ಲಿ ಯಶ್ ಶೂಟಿಂಗ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋನಲ್ಲಿ ಜೆಜೆ ಪೆರ್ರಿ ಮತ್ತು ಇನ್ನೂ ಕೆಲವರಿದ್ದರು. ಅದರಲ್ಲಿ ಒಬ್ಬರು ಹಾಲಿವುಡ್ ನಟಿ ಟಿಟಿಯಾನಾ ಗೈಡರ್. ಆಕ್ಷನ್ ಅಸಿಸ್ಟೆಂಟ್ ಸಹ ಆಗಿರುವ ಟಿಟಿಯಾನಾ ಇದೀಗ ಯಶ್ ಜೊತೆಗಿನ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮತ್ತೊಬ್ಬ ಲೆಜೆಂಡ್, ಎಫ್​1 ರೇಸ್ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಸಹ ಇದ್ದಾರೆ.

ಟಿಟಿಯಾನಾ ಗೈಡರ್, ಅದೇ ಶೂಟಿಂಗ್ ಯಾರ್ಡ್​ನಲ್ಲಿ ಶೂಟಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದ ನಡುವೆ ಯಶ್​ರ ‘ಕೆಜಿಎಫ್ 2’ ಸಿನಿಮಾದ ದೃಶ್ಯಗಳನ್ನು ಸಹ ಸೇರಿಸಿದ್ದಾರೆ. ವಿಡಿಯೋನಲ್ಲಿ ಫಾರ್ಮುಲಾ ರೇಸ್ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಸಹ ಇದ್ದು, ಟಿಟಿಯಾನಾ ಗೈಡರ್ ಅವರ ಅದ್ಭುತ ಶೂಟಿಂಗ್ ಸ್ಕಿಲ್​ಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ನಟ ಯಶ್ ಸಹ ಟಿಟಿಯಾನಾರ ಸ್ಕಿಲ್ ನೋಡಿ ಭೇಷ್ ಎಂದಿದ್ದಾರೆ.

ಇದನ್ನೂ ಓದಿ:ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್, ಡಾಲಿ

ಟಿಟಿಯಾನಾ ಹಂಚಿಕೊಂಡಿರುವುದು ಹಳೆಯ ವಿಡಿಯೋ ಆಗಿದೆ. ಆದರೆ ಈಗ ಜೆಜೆ ಪೆರ್ರಿ, ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಅಮೆರಿಕದಿಂದ ಮುಂಬೈಗೆ ಬಂದಿಳಿದಿರುವ ನಟ ಸಿನಿಮಾದ ಆಕ್ಷನ್ ದೃಶ್ಯಗಳನ್ನು ಕಂಪೋಸ್ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ಸಿನಿಮಾದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಮುಗಿದಿದೆ. ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಮತ್ತು ನಟಿ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ನಟ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ