AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಗಾಯಕ ದಿಲ್ಜಿತ್ ದೊಸ್ಸಾಂಜ್​ಗೆ ನೊಟೀಸ್ ನೀಡಿದ ತೆಲಂಗಾಣ ಸರ್ಕಾರ

ಜನಪ್ರಿಯ ಪಂಜಾಬಿ ಸಂಗೀತಗಾರ ಮತ್ತು ನಟ ದಿಲ್ಜೀತ್ ದೊಸ್ಸಾಂಜ್​ಗೆ ತೆಲಂಗಾಣ ಸರ್ಕಾರ ನೋಟೀಸ್ ನೀಡಿದೆ. ದಿಲ್ಜೀತ್​ ಲೈವ್ ಕಾನ್ಸರ್ಟ್​ ಇಂದು ಹೈದರಾಬಾದ್​ನಲ್ಲಿದ್ದು, ದಿಲ್ಜೀತ್ ಕೆಲವು ಹಾಡುಗಳನ್ನು ಹಾಡಬಾರದೆಂದು ಸರ್ಕಾರ ಸೂಚನೆ ನೀಡಿದೆ.

ಖ್ಯಾತ ಗಾಯಕ ದಿಲ್ಜಿತ್ ದೊಸ್ಸಾಂಜ್​ಗೆ ನೊಟೀಸ್ ನೀಡಿದ ತೆಲಂಗಾಣ ಸರ್ಕಾರ
ಮಂಜುನಾಥ ಸಿ.
|

Updated on: Nov 15, 2024 | 10:49 AM

Share

ದಿಲ್ಜೀತ್ ದೊಸ್ಸಾಂಜ್, ಭಾರತ ಮಾತ್ರವಲ್ಲ ವಿಶ್ವ ಸಂಗೀತ ಕ್ಷೇತ್ರದಲ್ಲಿ ಗಟ್ಟಿಯಾಗಿ ಕೇಳಿ ಬರುತ್ತಿರುವ ಹೆಸರು ಇದು. ಹಾಲಿವುಡ್ ಪಾಪ್ ತಾರೆಯರ ರೀತಿಯಲ್ಲಿ ದಿಲ್ಜೀತ್ ದೊಸ್ಸಾಂಜ್ ಅವರ ಲೈವ್ ಕಾನ್ಸರ್ಟ್​ಗಳು ನಡೆಯುತ್ತಿವೆ. ಆಸ್ಟ್ರೇಲಿಯಾ, ಲಂಡನ್, ನ್ಯೂಯಾರ್ಕ್​ ಇನ್ನಿತರೆ ಮಹಾನಗರಗಳಲ್ಲಿ ಸಹ ದಿಲ್ಜಿತ್​ರ ಲೈವ್ ಕಾನ್ಸರ್ಟ್ ನೋಡಲು ಲಕ್ಷಾಂತರ ಮಂದಿ ಬರುತ್ತಿದ್ದಾರೆ. ಭಾರತದಲ್ಲಂತೂ ದಿಲ್ಜೀತ್​ರ ಕಾನ್ಸರ್ಟ್​ ಟಿಕೆಟ್​ಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿವೆ. ಇದೀಗ ದಿಲ್ಜೀತ್​ ದೊಸ್ಸಾಂಜ್​ಗೆ ತೆಲಂಗಾಣ ಸರ್ಕಾರ ನೊಟೀಸ್ ನೀಡಿದೆ.

ದಿಲ್ಜಿತ್ ದೊಸ್ಸಾಂಜ್, ‘ದಿಲ್ಲುಮಿನಾಟಿ’ ಹೆಸರಿ ಲೈವ್ ಕಾನ್ಸರ್ಟ್ ಟೂರ್ ಮಾಡುತ್ತಿದ್ದಾರೆ. ಭಾರತದ ಹಲವು ನಗರಗಳಲ್ಲಿ ತಮ್ಮ ಶೋ ನಡೆಸಿಕೊಡಲಿದ್ದಾರೆ. ಇದೀಗ ತೆಲಂಗಾಣದ ಹೈದರಾಬಾದ್​ನಲ್ಲಿ ದಿಲ್ಜಿತ್ ದೊಸ್ಸಾಂಗ್ ಶೋ ನಡೆಸಿಕೊಡಲಿದ್ದು, ಶೋಗೆ ಮುನ್ನ, ತೆಲಂಗಾಣ ಸರ್ಕಾರ ದಿಲ್ಜಿತ್​ಗೆ ನೊಟೀಸ್ ನೀಡಿದ್ದು, ಕೆಲವು ಹಾಡುಗಳನ್ನು ಹಾಡದಂತೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಹಾಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ.

ನವೆಂಬರ್ 15 ಅಂದರೆ ಇಂದು ರಾತ್ರಿ ದಿಲ್ಜೀತ್​ರ ಶೋ ಹೈದರಾಬಾದ್​ನಲ್ಲಿ ನಡೆಯಲಿದ್ದು, ಶೋಗೆ ಮುನ್ನ ಸರ್ಕಾರ ನೊಟೀಸ್ ನೀಡಿದ್ದು, ಡ್ರಗ್ಸ್, ಮದ್ಯ, ಹಿಂಸೆಯ ಕುರಿತಾದ ಹಾಡುಗಳನ್ನು ವೇದಿಕೆಯಲ್ಲಿ ಹಾಡುವಂತಿಲ್ಲ ಎಂದು ದಿಲ್ಜಿತ್ ದೊಸ್ಸಾಂಗ್​ಗೆ ತೆಲಂಗಾಣ ಸರ್ಕಾರ ಹೇಳಿದೆ. ಅಲ್ಲದೆ, ವೇದಿಕೆ ಮೇಲೆ ಮಕ್ಕಳನ್ನು ಕರೆತರುವಂತಿಲ್ಲ, ಇದು ಡಬ್ಲುಎಚ್​ಓ ನಿಯಮಕ್ಕೆ ವಿರುದ್ಧ ಆಗಿರಲಿದೆ ಎಂದು ಸಹ ಸರ್ಕಾರ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:ಪುಟ್ಟ ಬಾಲಕಿಗೆ ಫ್ರೀ ಟಿಕೆಟ್ ನೀಡಿದ ಗಾಯಕ ದಿಲ್ಜಿತ್ ದೊಸಾಂಜ್; ವಿಡಿಯೋ ವೈರಲ್

ಈ ಹಿಂದೆ ದಿಲ್ಜಿತ್ ದೊಸ್ಸಾಂಗ್, ದೆಹಲಿ, ಜೈಪುರ ಹಾಗೂ ಚಂಡೀಘಡಗಳಲ್ಲಿ ಶೋ ಮಾಡಿದ್ದು, ಆ ಶೋಗಳಲ್ಲಿ ಡ್ರಗ್ಸ್, ಮದ್ಯ, ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು ಹಾಡಿದ್ದರು. ಈ ಬಗ್ಗೆ ಟ್ವಿಟ್ಟರ್ ಬಳಕೆದಾರರೊಬ್ಬರು ವಿಡಿಯೋ ಮಾಡಿ ಅಪ್​ಲೋಡ್ ಮಾಡಿದ್ದರು. ಇದು ವೈರಲ್ ಆಗಿದ್ದು, ಟ್ವಿಟ್ಟರ್​ನಲ್ಲಿ ವಿರೋಧಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಮುಂಚಿತವಾಗಿ ಎಚ್ಚೆತ್ತುಕೊಂಡಿರುವ ತೆಲಂಗಾಣ ಸರ್ಕಾರ, ಮಾದಕ ವಸ್ತು, ಮದ್ಯ ಸೇವನೆ ಮತ್ತು ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು ಹಾಡಬಾರದೆಂದು ಎಚ್ಚರಿಕೆ ನೀಡಿದೆ. ಒಂದೊಮ್ಮೆ ಹಾಡು ಹಾಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ.

ಅಕ್ಟೋಬರ್ 26 ರಿಂದ ದಿಲ್ಜೀತ್​ರ ಇಂಡಿಯಾ ಟೂರ್ ಪ್ರಾರಂಭ ಆಗಿದೆ. ಹೈದರಾಬಾದ್​ನಲ್ಲಿ ಇಂದು ಶೋ ನಡೆಯುತ್ತಿದ್ದು, ಮುಂದಿನ ಶೋ ಬೆಂಗಳೂರಿನಲ್ಲಿ ನಡೆಯಲಿದೆ. ಹೈದರಾಬಾದ್​ನ ಶೋ ಟಿಕೆಟ್​ಗಳು ಮುಂಚಿತವಾಗಿಯೇ ಪೂರ್ಣವಾಗಿ ಮಾರಾಟಗೊಂಡಿದ್ದವು. ಇಂದು ಸಹ ಸಾವಿರಾರು ಮಂದಿ ಅಭಿಮಾನಿಗಳು ದಿಲ್ಜೀತ್​ರ ಶೋಗೆ ಹಾಜರಾಗುವ ನಿರೀಕ್ಷೆ ಇದೆ. ದಿಲ್ಜಿತ್, ಸ್ಥಳೀಯ ಗಾಯಕರೊಬ್ಬರೊಟ್ಟಿಗೆ ಸೇರಿಕೊಂಡು ಈ ಶೋಗಳನ್ನು ನಡೆಸಿಕೊಡುತ್ತಾರೆ. ಇಂದು ಯಾರು ದಿಲ್ಜೀತ್ ಶೋಗೆ ಜೊತೆ ಆಗುತ್ತಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು