ಶ್ರೀಲೀಲಾ ಬಗ್ಗೆ ತೆಲುಗು ನಿರ್ಮಾಪಕರ ಬೇಸರ, ಸಂಘಕ್ಕೆ ದೂರು ಸಾಧ್ಯತೆ
Sreeleela: ಕನ್ನಡ ಚಿತ್ರರಂಗದಿಂದ ಬೆಳಕಿಗೆ ಬಂದು ಇದೀಗ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ ನಟಿ ಶ್ರೀಲೀಲಾ. ಇತ್ತೀಚೆಗೆ ಬಾಲಿವುಡ್ ಮತ್ತು ತಮಿಳು ಚಿತ್ರರಂಗಕ್ಕೂ ಸಹ ಶ್ರೀಲೀಲಾ ಕಾಲಿಟ್ಟಿದ್ದು, ಅಲ್ಲಿಯೂ ಹವಾ ಎಬ್ಬಿಸುತ್ತಿದ್ದಾರೆ. ಹೆಚ್ಚು ಜನಪ್ರಿಯ ಆದಷ್ಟೂ ಶ್ರೀಲೀಲಾಗೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಿರ್ಮಾಪಕರೊಬ್ಬರು ಶ್ರೀಲೀಲಾ ವಿರುದ್ಧ ದೂರು ನೀಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ಕನ್ನಡ ಚಿತ್ರರಂಗದಿಂದ ಬೆಳಕಿಗೆ ಬಂದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಒಂದರ ಹಿಂದೊಂದರಂತೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುತ್ತಿದ್ದಾರೆ ನಟಿ ಶ್ರೀಲೀಲಾ. ಇದೀಗ ಬಾಲಿವುಡ್ ಮತ್ತು ತಮಿಳು ಚಿತ್ರರಂಗಕ್ಕೂ ಸಹ ಶ್ರೀಲೀಲಾ ಕಾಲಿಟ್ಟಿದ್ದಾರೆ. ಈಗ ಪ್ರಸ್ತುತ ಶ್ರೀಲೀಲಾ ಕೈಯಲ್ಲಿ ಸುಮಾರು ಆರು ಸಿನಿಮಾಗಳಿವೆ. ಆದರೆ ಬೇಡಿಕೆ ಹೆಚ್ಚಾದಷ್ಟು ಶ್ರೀಲೀಲಾಗೆ ಸಮಸ್ಯೆಗಳು ಸಹ ಶುರುವಾಗಿವೆ. ಒಬ್ಬ ನಿರ್ಮಾಪಕರಂತೂ ಶ್ರೀಲೀಲಾ ವಿರುದ್ಧ ತೆಲುಗು ಸಿನಿಮಾ ನಿರ್ಮಾಪಕರ ಸಂಘಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಅಷ್ಟಕ್ಕೂ ಶ್ರೀಲೀಲಾ ಮಾಡಿರುವ ತಪ್ಪೇನು?
ಶ್ರೀಲೀಲಾ ಒಂದೇ ಸಮಯದಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದರಿಂದಾಗಿ ಅವರಿಗೆ ಡೇಟ್ಸ್ ಸಮಸ್ಯೆ ಎದುರಾಗಿದ್ದು, ಒಪ್ಪಿಕೊಂಡ ಎಲ್ಲ ಸಿನಿಮಾಗಳಿಗೆ ಸರಿಯಾಗಿ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಕೆಲ ತಿಂಗಳ ಮುಂಚೆ ರವಿತೇಜ ನಟನೆಯ ‘ಮಾಸ್ ಜಾತರ’ ಹೆಸರಿನ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾ ಒಪ್ಪಿಕೊಂಡಿದ್ದರು. ಸಿನಿಮಾದ ಕೆಲ ಹಂತದ ಚಿತ್ರೀಕರಣವೂ ಮುಗಿದಿತ್ತು. ಆದರೆ ಈಗ ಶ್ರೀಲೀಲಾ ಚಿತ್ರೀಕರಣಕ್ಕೆ ಬರುತ್ತಿಲ್ಲ ಎನ್ನಲಾಗುತ್ತಿದೆ. ಇನ್ನು 20 ದಿನಗಳ ಚಿತ್ರೀಕರಣ ಬಾಕಿ ಇದೆ ಆದರೆ ಶ್ರೀಲೀಲಾ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣದಿಂದಾಗಿ ‘ಮಾಸ್ ಜಾತರ’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲವಂತೆ.
ಶ್ರೀಲೀಲಾ ನಟಿಸಿರುವ ಹಲವು ದೃಶ್ಯಗಳ ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದು, ಇನ್ನು 20 ದಿನಗಳ ಚಿತ್ರೀಕರಣ ಮಾತ್ರವೇ ಬಾಕಿ ಇದೆ. ಹೀಗಾಗಿ ಈ ಹಂತದಲ್ಲಿ ಶ್ರೀಲೀಲಾ ಅವರನ್ನು ಬದಲಾಯಿಸಿ ಮತ್ತೊಬ್ಬ ನಟಿಯನ್ನು ಹಾಕಿಕೊಳ್ಳುವುದು ಬಹಳ ನಷ್ಟದ ವಿಚಾರ ಆಗಲಿದೆ. ಹಾಗಾಗಿ ಸಿನಿಮಾದ ನಿರ್ಮಾಪಕ ಭಾನು ಬೋಗವರ್ಪು ಅವರು ತಲೆ ಕೆಡಿಸಿಕೊಂಡಿದ್ದು, ತೆಲುಗು ಸಿನಿಮಾ ನಿರ್ಮಾಪಕರ ಸಂಘಕ್ಕೆ ಹಾಗೂ ಮಾ ಅಸೋಸಿಯೇಷನ್ಗೆ ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಶ್ರೀಲೀಲಾರನ್ನು ತಮ್ಮ ಸಿನಿಮಾದಿಂದ ಹೊರಗಿಟ್ಟರೆ ತಮಿಳಿನ ಸ್ಟಾರ್ ನಟ, ಕಾರಣ ಏನು?
ರವಿತೇಜ ಜೊತೆಗೆ ಈ ಹಿಂದೆಯೂ ಶ್ರೀಲೀಲಾ ನಟಿಸಿದ್ದು, ರವಿತೇಜ ಪಾಲಿಗೆ ಶ್ರೀಲೀಲಾ ಲಕ್ಕಿ ನಾಯಕಿ ಎಂಬ ಕಾರಣಕ್ಕೆ ‘ಮಾಸ್ ಜಾತರ’ ಸಿನಿಮಾಕ್ಕೆ ಶ್ರೀಲೀಲಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಬಾಲಿವುಡ್ ಸಿನಿಮಾ ಹಾಗೂ ತಮಿಳಿನ ಒಂದು ಪ್ರಮುಖ ಸಿನಿಮಾದಲ್ಲಿ ಅವಕಾಶ ಸಿಕ್ಕಿದ ಕಾರಣ ಎಲ್ಲ ಡೇಟ್ಸ್ ಅನ್ನು ಆ ಸಿನಿಮಾಗಳಿಗೆ ನೀಡಿರುವ ಶ್ರೀಲೀಲಾ ‘ಮಾಸ್ ಜಾತರ’ ಸಿನಿಮಾಕ್ಕೆ ಕೈ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಶ್ರೀಲೀಲಾ ಬರುವಿಕೆಗಾಗಿ ‘ಮಾಸ್ ಜಾತರ’ ಚಿತ್ರತಂಡ ಕಾಯುತ್ತಾ ಕೂತಿದೆ. ಆದರೆ ಆ ದಿನ ಎಂದು ಬರುವುದೋ…?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ