29 ವರ್ಷಗಳ ಬಳಿಕ ಯಾಣಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಇಲ್ಲಿವೆ ಫೋಟೋಸ್

ಬರೋಬ್ಬರಿ 29 ವರ್ಷಗಳ ನಂತರ ‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್​ ಅವರು ಯಾಣಗೆ ಭೇಟಿ ನೀಡಿ ಖುಷಿಪಟ್ಟಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಜೊತೆ ಪತ್ನಿ ಗೀತಾ ಕೂಡ ಯಾಣಗೆ ತೆರಳಿದ್ದಾರೆ. ಕ್ಯಾನ್ಸರ್​ಗೆ ಅಮೆರಿಕದಲ್ಲಿ ಟ್ರೀಟ್​ಮೆಂಟ್ ಪಡೆದು ಬಂದ ಅವರು ಸಿನಿಮಾ ಕೆಲಸಗಳಿಂದ ಬಿಡುವು ಪಡೆದಿದ್ದಾರೆ.

ಮದನ್​ ಕುಮಾರ್​
|

Updated on: Feb 02, 2025 | 5:56 PM

ನಟ ಶಿವರಾಜ್​ಕುಮಾರ್​ ಅವರು ಕ್ಯಾನ್ಸರ್​ನಿಂದ ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ವಾಪಸ್ ಬಂದಿರುವ ಅವರು ತಮ್ಮ ಇಷ್ಟದ ಕೆಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈಗ ಅವರು ಯಾಣಗೆ ತೆರಳಿದ್ದಾರೆ.

1 / 5
ಶಿವಣ್ಣ, ರಮೇಶ್ ಅರವಿಂದ್, ಪ್ರೇಮಾ ನಟಿಸಿದ್ದ ‘ನಮ್ಮೂರ ಮಂದಾರ ಹೂವೇ’ ಸಿನಿಮಾದ ಚಿತ್ರೀಕರಣವನ್ನು ಯಾಣದಲ್ಲಿ ಮಾಡಲಾಗಿತ್ತು. ಈಗ ಅವರು ಮತ್ತೆ ಅದೇ ಜಾಗಕ್ಕೆ ಭೇಟಿ ನೀಡಿ ಶಿವಣ್ಣ ಖುಷಿಪಟ್ಟಿದ್ದಾರೆ.

2 / 5
ಆ ದಿನಗಳನ್ನು ಶಿವರಾಜ್​ಕುಮಾರ್​ ಅವರು ನೆನಪು ಮಾಡಿಕೊಂಡಿದ್ದಾರೆ. ‘ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ’ ಎಂದು ಶಿವಣ್ಣ ಈ ಫೋಟೋ ಹಂಚಿಕೊಂಡಿದ್ದಾರೆ.

3 / 5
ಪತ್ನಿ ಗೀತಾ ಶಿವರಾಜ್​ಕುಮಾರ್​ ಅವರು ಕೂಡ ಸಾಥ್ ನೀಡಿದ್ದಾರೆ. ಜನರು ಈ ಫೋಟೋ ನೋಡಿ ಕಮೆಂಟ್ ಮಾಡಿದ್ದಾರೆ. ‘ನೀವು ಕೂಡ ಈ ಬಂಡೆಯಂತೆ ಗಟ್ಟಿ’ ಎಂದು ಶಿವಣ್ಣನಿಗೆ ಅಭಿಮಾನಿಗಳು ಹೇಳಿದ್ದಾರೆ.

Shivarajkumar (39)

4 / 5
‘ಬಾಳಿನ ಬೆನ್ನು ಹತ್ತಿ, ನೂರಾರು ಊರು ಸುತ್ತಿ, ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು’ ಎಂದು ಹಾಡಿನ ಸಾಲುಗಳ ಮೂಲಕ ಕರುನಾಡಿನ ಸೌಂದರ್ಯವನ್ನು ಶಿವರಾಜ್​ಕುಮಾರ್​ ಅವರು ಬಣ್ಣಿಸಿದ್ದಾರೆ.

5 / 5
Follow us