AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾಗಿ ತಿಂದ್ರೆ ಮಾತ್ರ ಬೊಜ್ಜು ಬರುತ್ತೆ ಅಂತಾ ಅಂದ್ಕೊಂಡ್ ಇದ್ದೀರಾ? ಇಲ್ಲಿದೆ ನೋಡಿ ಅಚ್ಚರಿ ಮಾಹಿತಿ

ಬೊಜ್ಜು ಅಥವಾ ಸ್ಥೂಲಕಾಯತೆಯನ್ನು ನಿರ್ಲಕ್ಷಿಸುವುದು ಅನೇಕ ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಬಹುತೇಕ ಜನ ಅತಿಯಾಗಿ ತಿನ್ನುವುದೇ ಈ ಸಮಸ್ಯೆಯ ಹೆಚ್ಚಳಕ್ಕೆ ಕಾರಣ ಎಂದು ತಿಳಿದಿರುತ್ತಾರೆ. ಆದರೆ ಈ ಸಮಸ್ಯೆ ಪ್ರತಿಯೊಬ್ಬರಿಗೂ ಒಂದೇ ರೀತಿಯಾಗಿ ಪರಿಣಾಮ ಬೀರುವುದಿಲ್ಲ. ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ಹಾಗಾದರೆ ಈ ಸಮಸ್ಯೆ ಹೆಚ್ಚಾಗುವುದಕ್ಕೆ ಕಾರಣವೇನು, ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಅತಿಯಾಗಿ ತಿಂದ್ರೆ ಮಾತ್ರ ಬೊಜ್ಜು ಬರುತ್ತೆ ಅಂತಾ ಅಂದ್ಕೊಂಡ್ ಇದ್ದೀರಾ? ಇಲ್ಲಿದೆ ನೋಡಿ ಅಚ್ಚರಿ ಮಾಹಿತಿ
Weight Gain ReasonsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Mar 04, 2026 | 8:09 PM

Share

ಇತ್ತೀಚಿನ ದಿನಗಳಲ್ಲಿ ಒಬೆಸಿಟಿ (ಬೊಜ್ಜು) ಅಥವಾ ಸ್ಥೂಲಕಾಯತೆ (Obesity) ಹೆಚ್ಚಾಗುತ್ತಿದ್ದು ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಕೆಲವರು ಅತಿಯಾಗಿ ತಿನ್ನುವುದೇ ಈ ಸಮಸ್ಯೆ ಕಾರಣ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಈ ಸಮಸ್ಯೆ ಪ್ರತಿಯೊಬ್ಬರಿಗೂ ಒಂದೇ ರೀತಿಯಾಗಿ ಪರಿಣಾಮ ಬೀರುವುದಿಲ್ಲ. ವಿಶೇಷವಾಗಿ ಮೆಟಾಬಾಲಿಸಂ ಸರಿಯಾಗಿರದವರಲ್ಲಿ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಇದರ ಹೊರತಾಗಿಯೂ ಇನ್ನೂ ಹಲವು ಕಾರಣಗಳಿವೆ. ಅವುಗಳನ್ನು ತಿಳಿದುಕೊಂಡರೆ ಸ್ಥೂಲಕಾಯವನ್ನು ಅಂದರೆ ಬೊಜ್ಜನ್ನು ಸರಿಯಾಗಿ ನಿಯಂತ್ರಿಸಬಹುದಾಗಿದೆ.

ಡಾ. ದೀಪಕ್ ಕುಮಾರ್ ಸುಮನ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಹೆಚ್ಚು ತಿನ್ನುವುದು ಸ್ಥೂಲಕಾಯಕ್ಕೆ ಕಾರಣವಾದರೂ, ಕೆಲವರು ಕಡಿಮೆ ಆಹಾರ ಸೇವನೆ ಮಾಡಿದರೂ ತೂಕ ಹೆಚ್ಚಾಗುತ್ತದೆ. ಇದಕ್ಕೆ ಹಾರ್ಮೋನ್ ಅಸಮತೋಲನ, ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆ ಪ್ರಮುಖ ಕಾರಣಗಳಾಗಿವೆ. ಕೆಲವರಲ್ಲಿ ಥೈರಾಯ್ಡ್ ಸಮಸ್ಯೆ, ಪಿಸಿಓಎಸ್ (PCOS) ಅಥವಾ ಇನ್ಸುಲಿನ್ ರೆಸಿಸ್ಟೆನ್ಸ್‌ನಿಂದ ತೂಕ ವೇಗವಾಗಿ ಹೆಚ್ಚಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಥೈರಾಯ್ಡ್ ಹಾಗೂ ಇನ್ಸುಲಿನ್ ರೆಸಿಸ್ಟೆನ್ಸ್‌ನಿಂದ ತೂಕ ಹೆಚ್ಚಾಗುವ ರೋಗಿಗಳ ಸಂಖ್ಯೆ ಕೂಡ ಅಧಿಕವಾಗಿದೆ ಎಂದು ತಿಳಿಸಿದ್ದಾರೆ.

ನಿದ್ರಾಹೀನತೆ ಮತ್ತು ಬೊಜ್ಜಿಗಿರುವ ಸಂಬಂಧ:

ಡಾ. ದೀಪಕ್ ಅವರ ಪ್ರಕಾರ, ದಿನಕ್ಕೆ 5 ಗಂಟೆಗಳಿಗಿಂತಲೂ ಕಡಿಮೆ ನಿದ್ರೆ ಮಾಡುವವರಲ್ಲಿ ಘ್ರೆಲಿನ್ (Ghrelin) ಹಾರ್ಮೋನ್ ಮಟ್ಟದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಈ ಹಾರ್ಮೋನ್ ಹಸಿವನ್ನು ಹೆಚ್ಚಿಸುತ್ತದೆ. ಹಸಿವು ಹೆಚ್ಚಾದಾಗ ವ್ಯಕ್ತಿ ಹೆಚ್ಚು ಆಹಾರ ಸೇವಿಸುತ್ತಾನೆ, ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ. ನಿದ್ರೆ ಪೂರ್ತಿಯಾಗದವರಲ್ಲಿ ಕ್ರಮೇಣ ಸ್ಥೂಲಕಾಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪ್ರತಿಯೊಬ್ಬರಲ್ಲೂ ಇದೇ ರೀತಿಯ ಪರಿಣಾಮ ಕಾಣಿಸಿಕೊಳ್ಳುವುದಿಲ್ಲ. ಅಷ್ಟು ಮಾತ್ರವಲ್ಲ, ಬೊಜ್ಜಿಗೆ ಮಾನಸಿಕ ಒತ್ತಡವೂ ಕಾರಣವಾಗುತ್ತದೆ. ಏಕೆಂದರೆ ಒತ್ತಡ ದೇಹದಲ್ಲಿ ಕಾರ್ಟಿಸೋಲ್ (Cortisol) ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಈ ಹಾರ್ಮೋನ್ ಹೆಚ್ಚಾದಾಗ ಹೊಟ್ಟೆ ಸುತ್ತಲಿನ ಕೊಬ್ಬು ಹೆಚ್ಚಾಗುತ್ತದೆ. ಈ ರೀತಿಯ ಕೊಬ್ಬು ಅನೇಕ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಸರಿಯಾದ ಜೀವನಶೈಲಿ ಮತ್ತು ಸಮಯೋಚಿತ ವೈದ್ಯಕೀಯ ಸಲಹೆಯಿಂದ ತೂಕವನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಮುಖ್ಯವಾಗಿದೆ.

ಇದನ್ನೂ ಓದಿ: ಬೊಜ್ಜಿಗೆ ಕಾರಣವೇನು? ಯೋಗಾಸನದ ಮೂಲಕ ಈ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುತ್ತಾರೆ ಡಾ. ವಂದನಾ

ಬೊಜ್ಜನ್ನು ತಡೆಗಟ್ಟಲು ಸಲಹೆ:

  • ಆಹಾರ ಪದ್ಧತಿಯಲ್ಲಿ ನಿಯಂತ್ರಣ ಇಟ್ಟುಕೊಳ್ಳಿ
  • ಮಾನಸಿಕ ಒತ್ತಡದಿಂದ ದೂರವಿರಿ
  • ಪ್ರತಿದಿನ ವ್ಯಾಯಾಮ ಮಾಡಿ
  • ತೂಕ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us