ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್
ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್ ಮತ್ತು ನಟಿ ಶ್ರೀಲೀಲಾ ಅವರ ಫೋಟೋ ವೈರಲ್ ಆಗಿದೆ. ಅಭಿಮಾನಿಗಳಿಗೆ ಅನುಮಾನ ಹೆಚ್ಚಾಗಿದೆ. ಹೊಸ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಅವರು ಒಂದು ರೊಮ್ಯಾಂಟಿಕ್ ಆದ ಫೋಟೋ ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ನಟಿ ಶ್ರೀಲೀಲಾ ಅವರು ಈಗ ಕನ್ನಡಕ್ಕೆ ಮಾತ್ರ ಸೀಮಿತ ಆಗಿಲ್ಲ. ರಶ್ಮಿಕಾ ಮಂದಣ್ಣ ರೀತಿಯೇ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿದ್ದಾರೆ. ತೆಲುಗಿನಲ್ಲಿ ಮಿಂಚಿದ ಬಳಿಕ ಅವರಿಗೆ ಬಾಲಿವುಡ್ನಿಂದಲೂ ಆಫರ್ಗಳು ಬರುತ್ತಿವೆ. ಹಿಂದಿ ಚಿತ್ರರಂಗದ ಸ್ಟಾರ್ ಹೀರೋ ಕಾರ್ತಿಕ್ ಆರ್ಯನ್ (Karthik Aaryan) ಜೊತೆ ಶ್ರೀಲೀಲಾ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಇವರಿಬ್ಬರು ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಕಾರ್ತಿಕ್ ಆರ್ಯನ್ ಅವರು ಶ್ರೀಲೀಲಾ (Sreeleela) ಜೊತೆಗಿನ ಒಂದು ಫೋಟೋ ಹಂಚಿಕೊಂಡು ‘ತು ಮೇರಿ ಜಿಂದಗಿ ಹೈ’ (ನೀನೇ ನನ್ನ ಜೀವನ) ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದರಿಂದ ಒಂದಷ್ಟು ಗುಸುಗುಸು ಹಬ್ಬಿದೆ.
ಕಾರ್ತಿಕ್ ಕಾರ್ಯನ್ ಮತ್ತು ಶ್ರೀಲೀಲಾ ಅವರು ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಅವರಿಬ್ಬರ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ಅವರು ಜೊತೆಯಾಗಿ ಕಾಣಿಸಿಕೊಳ್ಳಲಿರುವ ಹೊಸ ಸಿನಿಮಾದ ಟೀಸರ್ ಕೂಡ ಇತ್ತೀಚೆಗೆ ಬಿಡುಗಡೆಯಾಗಿ ಸಖತ್ ವೈರಲ್ ಆಗಿದೆ. ಈ ಟೀಸರ್ನಲ್ಲಿ ‘ತು ಮೇರಿ ಜಿಂದಗಿ ಹೈ’ ಹಾಡು ಬಳಕೆ ಆಗಿದೆ.
ಈ ಜೋಡಿಯ ಸಿನಿಮಾಗೆ ಅನುರಾಗ್ ಬಸು ಅವರು ನಿರ್ದೇಶನ ಮಾಡಲಿದ್ದಾರೆ. ‘ಆಶಿಕಿ 3’ ಎಂದು ಈ ಚಿತ್ರಕ್ಕೆ ಹೆಸರು ಇಡಲಾಗುವುದು ಎಂದು ಆರಂಭದಲ್ಲಿ ಸುದ್ದಿ ಹಬ್ಬಿತ್ತು. ಆದರೆ ಆ ಟೈಟಲ್ ಪಡೆಯಲು ಕಾನೂನಿನ ತೊಡಕು ಉಂಟಾಗಿದ್ದರಿಂದ ಚಿತ್ರತಂಡ ಬೇರೆ ಟೈಟಲ್ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಆಗಿದೆ. ಅಂತಿಮವಾಗಿ ಯಾವ ಶೀರ್ಷಿಕೆ ಫಿಕ್ಸ್ ಆಗಲಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.
View this post on Instagram
ಶ್ರೀಲೀಲಾ ಜೊತೆ ಕಾರ್ತಿಕ್ ಆರ್ಯನ್ ಅವರು ಹಂಚಿಕೊಂಡ ಫೋಟೋ ತುಂಬ ರೊಮ್ಯಾಂಟಿಕ್ ಆಗಿದೆ. ‘ಶೂಟಿಂಗ್ ಮಾಡುತ್ತಾ ಮಾಡುತ್ತಾ ಕಾರ್ತಿಕ್ ಆರ್ಯನ್ ಅವರು ಲವ್ ಮಾಡಲು ಶುರು ಮಾಡಿದ್ದಾರೆ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಿಜವಾಗಿಯೂ ಕಾರ್ತಿಕ್ ಆರ್ಯನ್ ಅವರಿಗೆ ಶ್ರೀಲೀಲಾ ಮೇಲೆ ಪ್ರೀತಿ ಚಿಗುರಿದೆಯಾ ಎಂಬುದನ್ನು ಅವರೇ ಹೇಳಬೇಕು.
ಶ್ರೀಲೀಲಾ-ನಿತಿನ್-ಡೇವಿಡ್ ವಾರ್ನರ್ ನಟನೆಯ ‘ರಾಬಿನ್ಹುಡ್’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
ಈ ಮೊದಲು ನಟಿ ಸಾರಾ ಅಲಿ ಖಾನ್ ಜೊತೆ ಕಾರ್ತಿಕ್ ಆರ್ಯನ್ ಹೆಸರು ತಳುಕು ಹಾಕಿಕೊಂಡಿತ್ತು. ಅವರಿಬ್ಬರು ಜೊತೆಯಾಗಿ ಸುತ್ತಾಡಿದ್ದರು. ಆದರೆ ನಂತರ ಅವರು ಬ್ರೇಕಪ್ ಮಾಡಿಕೊಂಡರು. ಬಾಲಿವುಡ್ನಲ್ಲಿ ಕಾರ್ತಿಕ್ ಆರ್ಯನ್ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ‘ಭೂಲ್ ಬುಲಯ್ಯ 3’ ರೀತಿಯ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.