ತೆರೆಮೇಲೆ ತಂದೆ ಪಾತ್ರ ಮಾಡಿದ ಹೀರೋನೆ ಮದುವೆ ಆಗಲು ಹೊರಟಿದ್ದ ನಟಿ
Poonam Dhillon: ಪೂನಂ ಡಿಲ್ಲೋನ್ ಅವರು 1978ರಲ್ಲಿ ಮಿಸ್ ಯಂಗ್ ಇಂಡಿಯಾ ಪ್ರಶಸ್ತಿ ಪಡೆದ ನಂತರ ಬಾಲಿವುಡ್‌ನಲ್ಲಿ ಯಶಸ್ವಿಯಾದರು. 'ತ್ರಿಶೂಲ್', 'ಕರ್ಮ' ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 'ಲೈಲಾ' ಚಿತ್ರದಲ್ಲಿ ಸುನೀಲ್ ದತ್ ಅವರೊಂದಿಗಿನ ಅವರ ಬಾಂಧವ್ಯದ ಬಗ್ಗೆ ಆಸಕ್ತಿಕರ ಘಟನೆಗಳಿವೆ. ಅವರು 1988ರಲ್ಲಿ ಅಶೋಕ್ ತಾಕೇರಿಯಾ ಅವರನ್ನು ಮದುವೆಯಾದರು ಮತ್ತು ನಂತರ ವಿಚ್ಛೇದನ ಪಡೆದರು.

ಹಲವು ಕಲಾವಿದರು ತೆರೆಮೇಲೆ ಸಹೋದರ-ಸಹೋದರಿಯ ಪಾತ್ರ ಆ ಬಳಿಕ ಪತಿ-ಪತ್ನಿ ಪಾತ್ರ ಮಾಡಿದ ಉದಾಹರಣೆ ಸಾಕಷ್ಟು ಇದೆ. ಆದರೆ, ಕೆಲವರು ಇದಕ್ಕೆ ಭಿನ್ನ. ಉದಾಹರಣೆಗೆ ಹೇಳಬೇಕು ಎಂದರೆ ವಿಜಯ್ ಸೇತುಪತಿ. ಅವರು ‘ಉಪ್ಪೇನಾ’ ಸಿನಿಮಾದಲ್ಲಿ ಕೃತಿ ಶೆಟ್ಟಿ ಅವರ ತಂದೆಯ ಪಾತ್ರ ಮಾಡಿದ್ದರು. ಆದರೆ, ಮುಂಬರುವ ಸಿನಿಮಾಗಳಲ್ಲಿ ಅವರು ಕೃತಿ ಜೊತೆ ನಾಯಕಿ ಆಗಿ ನಟಿಸಲ್ಲ ಎಂದಿದ್ದರು. ಆದರೆ, ಇಲ್ಲೋರ್ವ ನಟಿ ತಂದೆ ಪಾತ್ರ ಮಾಡಿದ ವ್ಯಕ್ತಿ ಜೊತೆ ವಿವಾಹಕ್ಕೆ ಮುಂದಾಗಿದ್ದರು. ಅವರು ಬೇರಾರೂ ಅಲ್ಲ ಪೂನಂ ದಿಲ್ಲೋನ್.
ಪೂನಂ ದಿಲ್ಲೋನ್ ಅವರು 1978ರಲ್ಲಿ ‘ಮಿಸ್ ಯಂಗ್ ಇಂಡಿಯಾ’ ಅವಾರ್ಡ್ ಪಡೆದರು. ಅಲ್ಲಿಂದ ಅವರಿಗೆ ಅದೃಷ್ಟ ಖುಲಾಯಿಸಿತು. ಖ್ಯಾತ ನಿರ್ಮಾಪಕ ಯಶ್ ಚೋಪ್ರಾ ಅವರು ನಟಿಯನ್ನು ಗುರುತಿಸಿ ಅವಕಾಶ ನೀಡಿದರು. ಅವರು 80 ಹಾಗೂ 90ರ ದಶಕದಲ್ಲಿ ಬೇಡಿಕೆಯ ನಟಿ ಆಗಿದ್ದರು. ‘ತ್ರಿಶೂಲ್’, ‘ಕರ್ಮ’ ರೀತಿಯ ಸಿನಿಮಾಗಳನ್ನು ಅವರು ಮಾಡಿದ್ದರು. ನಂತರ ಅವರ ಕಿರುತೆರೆಯತ್ತ ಮುಖ ಮಾಡಿದರು. ಅಲ್ಲಿಯೂ ಮೆಚ್ಚುಗೆ ಪಡೆದರು.
ಪೂನಂ ಅವರು ‘ಲೈಲಾ’ ಹೆಸರಿನ ಸಿನಿಮಾ ಮಾಡಿದ್ದರು. ಈ ಸಿನಿಮಾದಲ್ಲಿ ಸುನೀಲ್ ದತ್ ಅವರು ಪೂನಂ ತಮದೆ ಪಾತ್ರ ಮಾಡಿದ್ದರು. ಸೆಟ್ನಲ್ಲಿ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಈ ವೇಳೆ ಪೂನಂ ಅವರು ‘ನೀವು ಯಂಗ್ ಆಗಿದ್ದರೆ ನಾನು ನಿಮ್ಮ ಮದುವೆ ಆಗುತ್ತಿದ್ದೆ’ ಎಂದಿದ್ದರು. ಅವರ ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿತ್ತು. ಇದು ಫನ್ಗಾಗಿ ಹೇಳಿದ್ದು ಅನ್ನೋದು ಆ ಬಳಿಕ ತಿಳಿಯಿತು. ಪೂನಂ ಅವರು ಚಿತ್ರರಂಗದಿಂದ ದೂರವೇ ಇದ್ದಾರೆ. ಆದಾಗ್ಯೂ ಅವರಿಗೆ ಬಾಲಿವುಡ್‌ನಲ್ಲಿ ಹಲವು ಆಪ್ತರಿದ್ದಾರೆ. ರೇಖಾ ಸೇರಿದಂತೆ ಅನೇಕರ ಜೊತೆ ಅವರಿಗೆ ಗೆಳೆತನ ಇದೆ.
ಇದನ್ನೂ ಓದಿ:ಕೀರ್ತಿ ಸುರೇಶ್ಗೆ ಬಾಲಿವುಡ್‌ನಲ್ಲಿ ಸಿಕ್ಕಿತು ಬಡಾ ಅವಕಾಶ, ಸೂಪರ್ ಸ್ಟಾರ್ ಜೊತೆ ಸಿನಿಮಾ
ಚಿತ್ರಕಥೆ ಬರಹಗಾರರಾದ ಸಲೀಮ್ ಹಾಗೂ ಜಾವೇದ್ ಮನೆಗೆ ಪೂನಂ ಅವರು ಆಗಾಗ ಭೇಟಿ ನೀಡುತ್ತಲೇ ಇರುತ್ತಿದ್ದರು. ಆಗ ಸಲ್ಮಾನ್ ಖಾನ್ ಅವರು ಇನ್ನೂ ಚಿಕ್ಕವರಾಗಿದ್ದರು. ಸಲ್ಮಾನ್ ಖಾನ್ ಇಷ್ಟು ದೊಡ್ಡ ಹೀರೋ ಆಗಬಹುದು ಎಂದು ಅವರು ಅಂದುಕೊಂಡಿರಲಿಲ್ಲವಂತೆ. ‘ಸಲ್ಮಾನ್ ಖಾನ್ ಕೆಲ ವರ್ಷ ಸಣ್ಣವರು. ಅವರು ಇಷ್ಟು ದೊಡ್ಡ ಸ್ಟಾರ್ ಆಗಬಹುದು ಎಂದು ನಾನು ಭಾವಿಸಿರಲಿಲ್ಲ’ ಎಂದಿದ್ದಾರೆ ಅವರು.
1988ರಲ್ಲಿ ಪೂನಂ ಅವರು ಅಶೋಕ್ ತಾಕೇರಿಯಾ ಅವರನ್ನು ವಿವಾಹ ಆದರು. ಅವರ ಮದುವೆ 9 ವರ್ಷಗಳ ಬಳಿಕ ಕೊನೆ ಆಯಿತು. ಇವರು ವಿಚ್ಛೇದನ ಪಡೆದರು. ಇವರು ಸದ್ಯ ತಮ್ಮ ಇಬ್ಬರು ಮಕ್ಕಳ ಜೊತೆ ವಾಸವಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ