AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಮಂದಿರ ಎಡಿಷನ್ ವಾಚ್​ ಧರಿಸಿದ ಸಲ್ಮಾನ್ ಖಾನ್; ‘ಹರಾಮ್’ ಎಂದು ಕರೆದ ಮುಸ್ಲಿಮರು

ಸಲ್ಮಾನ್ ಖಾನ್ ರಾಮ ಜನ್ಮಭೂಮಿ ಆವೃತ್ತಿಯ ಗಡಿಯಾರ ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಂ ಧರ್ಮಗುರುಗಳು ಇದನ್ನು 'ಹರಾಮ್' ಎಂದು ಖಂಡಿಸಿದ್ದಾರೆ ಮತ್ತು ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ. ಸಲ್ಮಾನ್ ಖಾನ್ ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ ಎಂದು ಅವರ ಬೆಂಬಲಿಗರು ವಾದಿಸಿದ್ದಾರೆ. ಸಲ್ಮಾನ್ ಸಿನಿಮಾ ರಿಲೀಸ್ ಸಂದರ್ಭದಲ್ಲೇ ಈ ವಿವಾದ ಆಗಿದೆ.

ರಾಮ ಮಂದಿರ ಎಡಿಷನ್ ವಾಚ್​ ಧರಿಸಿದ ಸಲ್ಮಾನ್ ಖಾನ್; ‘ಹರಾಮ್’ ಎಂದು ಕರೆದ ಮುಸ್ಲಿಮರು
ಸಲ್ಮಾನ್
Follow us
ರಾಜೇಶ್ ದುಗ್ಗುಮನೆ
|

Updated on: Mar 29, 2025 | 7:35 AM

ನಟ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ವಿಶೇಷ ವಾಚ್ ಧರಿಸಿ ಪೋಸ್ ಕೊಟ್ಟಿದ್ದರು. ಈ ವಾಚ್ ‘ರಾಮ ಜನ್ಮಭೂಮಿ ಎಡಿಷನ್’ ವಾಚ್ ಆಗಿತ್ತು. ಇದು ಅನೇಕರ ಕಣ್ಣು ಕುಕ್ಕಿದೆ. ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಈ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಸಲ್ಮಾನ್ ಖಾನ್ (Salman Khan) ‘ಹರಾಮ್’ ಮಾಡಿದ್ದಾರೆ ಎಂದು ದೂರಿದ್ದಾರೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಜೋರಾಗುತ್ತಿವೆ. ಅವರು ಕ್ಷಮೆ ಕೇಳಬೇಕು ಎನ್ನುವ ಆಗ್ರಹವೂ ವ್ಯಕ್ತವಾಗಿದೆ.

ಸಲ್ಮಾನ್ ಖಾನ್ ಅವರು ಮುಸ್ಲಿಂ ಸಮುದಾಯಕ್ಕೆ ಸೇರದವರಾಗಿರಬಹುದು, ಆದರೆ, ಅವರು ಎಲ್ಲಾ ಧರ್ಮದವರನ್ನು ಗೌರವಿಸುತ್ತಾರೆ. ಸಿನಿಮಾಗಳಲ್ಲಿ ಭಜರಂಗಿ ಪಾತ್ರವನ್ನು ಅವರು ಮಾಡುತ್ತಾರೆ. ಅದೇ ರೀತಿ ನಿಜ ಜೀವನದಲ್ಲೂ ಅವರು ಎಲ್ಲಾ ದೇವರುಗಳನ್ನು ಸಮಾನವಾಗಿ ಕಾಣುತ್ತಾರೆ. ಇದೇ ಮನಸ್ಥಿತಿಯಲ್ಲಿ ಅವರು ರಾಮ ಜನ್ಮಭೂಮಿ ದೇವಾಲಯ ಇರುವ ವಾಚ್ ಧರಿಸಿದ್ದಕ್ಕೆ ಟೀಕೆ ಎದುರಿಸಬೇಕಾಗಿದೆ.

ಇದನ್ನೂ ಓದಿ
Image
ಒಂದು ಕಾಲದಲ್ಲಿ ಬೇಡಿಕೆಯ ಹೀರೋ ಆಗಿದ್ದ ಅಜಯ್​ ರಾವ್​ಗೆ ಈಗ ಕೋಟಿ ರೂ. ಸಾಲ
Image
ಉತ್ತಮ TRP ಮಧ್ಯೆಯೂ ಕೊನೆಯಾಗಲಿದೆ ಕಲರ್ಸ್​ನ ಈ ಸೂಪರ್ ಹಿಟ್ ಧಾರಾವಾಹಿ?
Image
ದಂಡಿಗೆ, ದಾಳಿಗೆ ಹೆದರಲಿಲ್ಲ, ಹಲ್ಲಿಗೆ ಹೆದರೋದಾ; ಪಾಪ ಗೌತಮಿ ಸ್ಥಿತಿ ನೋಡಿ
Image
ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ, ದೇವರಿಗೆ ಬಿಟ್ಟಿದ್ದು: ಸಲ್ಮಾನ್ ಖಾನ್

‘ಸಲ್ಮಾನ್ ಖಾನ್ ಅವರು ರಾಮ ಮಂದಿರದ ಪ್ರಚಾರಕ್ಕಾಗಿ ತಯಾರಿಸಿದ ರಾಮ ಮಂದಿರ ಆವೃತ್ತಿಯ ವಾಚ್ ಧರಿಸಿದ್ದಾರೆ. ಮುಸ್ಲಿಂ ಆಗಿರುವಾಗ ಕೈಯಲ್ಲಿ ಅಂತಹ ಗಡಿಯಾರವನ್ನು ಧರಿಸುವುದು ಹರಾಮ್’ ಎಂದು ಆಲ್ ಇಂಡಿಯಾ ಮುಸ್ಲಿಂ ಜಮಾತ್​ನ ಮೌಲಾನಾ ಶಹಾಬುದ್ದೀನ್ ರಾಜ್ವಿ ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

‘ಸಲ್ಮಾನ್ ಖಾನ್ ಭಾರತದ ಜನಪ್ರಿಯ ವ್ಯಕ್ತಿ. ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಲ್ಮಾನ್ ಖಾನ್ ಕೂಡ ಮುಸ್ಲಿಂ. ಹೀಗಿರುವಾಗ ಈ ರೀತಿ ವಾಚ್ ಧರಿಸೋದು ಎಷ್ಟು ಸರಿ? ಸಲ್ಮಾನ್ ಖಾನ್ ಆಗಿರಲಿ ಅಥವಾ ಇನ್ಯಾವುದೇ ಮುಸ್ಲಿಂ ಆಗಿರಲಿ, ರಾಮ ಮಂದಿರ ಅಥವಾ ಯಾವುದೇ ಇತರ ಮುಸ್ಲಿಮೇತರ ವಿಷಯವನ್ನು ಪ್ರಚಾರ ಮಾಡುತ್ತಿದ್ದರೆ ಅದನ್ನು ಕಾನೂನುಬಾಹಿರ ಮತ್ತು ಹರಾಮ್ ಎಂದು ಪರಿಗಣಿಸಲಾಗುತ್ತದೆ. ಸಲ್ಮಾನ್ ಖಾನ್ ಅವರು ಶರಿಯತ್ ತತ್ವಗಳನ್ನು ಅನುಸರಿಸಬೇಕೆಂದು ನಾನು ಒತ್ತಾಯಿಸುತ್ತೇನೆ’ ಎಂದು ಮೌಲಾನಾ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ, ದೇವರಿಗೆ ಬಿಟ್ಟಿದ್ದು: ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಧರಿಸಿರುವುದು ಜಾಕೋಬ್ ಆ್ಯಂಡ್ ಕೋ ಅವರ ಎಪಿಕ್ ರಾಮ್ ಜನ್ಮಭೂಮಿ ಟೈಟಾನಿಯಮ್ ಎಡಿಷನ್ 2 ವಾಚ್ ಇದಾಗಿದೆ. ಇದರ ಬೆಲೆ 34 ಲಕ್ಷ ರೂಪಾಯಿ. ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಮಾರ್ಚ್ 30ರಂದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
VIDEO: ಮೈದಾನದಲ್ಲೇ ಹೊಡೆದಾಟ... ಬಾಂಗ್ಲಾ ಆಟಗಾರನಿಗೆ ಪಂಚ್
VIDEO: ಮೈದಾನದಲ್ಲೇ ಹೊಡೆದಾಟ... ಬಾಂಗ್ಲಾ ಆಟಗಾರನಿಗೆ ಪಂಚ್
ಗದಗ: ಶಾಲೆ ಆರಂಭದ ದಿನವೇ ಶಾಲಾ ವಾಹನ ಪಲ್ಟಿ, ತಪ್ಪಿದ ದುರಂತ
ಗದಗ: ಶಾಲೆ ಆರಂಭದ ದಿನವೇ ಶಾಲಾ ವಾಹನ ಪಲ್ಟಿ, ತಪ್ಪಿದ ದುರಂತ
ರಸ್ತೆಯಲ್ಲಿ ನೀರು, ಮಳೆ ಹೊರತಾಗಿಯೂ ಓಡಾಡುತ್ತಿರುವ ವಾಹನ ಮತ್ತು ಜನ
ರಸ್ತೆಯಲ್ಲಿ ನೀರು, ಮಳೆ ಹೊರತಾಗಿಯೂ ಓಡಾಡುತ್ತಿರುವ ವಾಹನ ಮತ್ತು ಜನ