AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ಟಿಆರ್​ಪಿ ಮಧ್ಯೆಯೂ ಕೊನೆಯಾಗಲಿದೆ ಕಲರ್ಸ್​ನ ಟಾಪ್ 1 ಧಾರಾವಾಹಿ?

ಕಲರ್ಸ್​ನ ಧಾರಾವಾಹಿಯೊಂದು ಶೀಘ್ರದಲ್ಲೇ ಕೊನೆಗೊಳ್ಳುವ ಸುದ್ದಿ ಹರಡುತ್ತಿದೆ. ಇದು ಕಲರ್ಸ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಆದಾಗ್ಯೂ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ವಾಹಿನಿಯಿಂದ ಇನ್ನೂ ಅಧಿಕೃತ ಘೋಷಣೆ ಬಂದಿಲ್ಲವಾದರೂ, ಅಭಿಮಾನಿಗಳಲ್ಲಿ ಕಳವಳ ಮೂಡಿದೆ. ಆ ಬಗ್ಗೆ ವಾಹಿನಿ ಕಡೆಯಿಂದ ಪ್ರಕಟಣೆ ಬಂದರೆ ಫ್ಯಾನ್ಸ್​ಗೆ ಸ್ಪಷ್ಟನೆ ಸಿಕ್ಕಂತಾಗುತ್ತದೆ.

ಉತ್ತಮ ಟಿಆರ್​ಪಿ ಮಧ್ಯೆಯೂ ಕೊನೆಯಾಗಲಿದೆ ಕಲರ್ಸ್​ನ ಟಾಪ್ 1 ಧಾರಾವಾಹಿ?
ಕಲರ್ಸ್ ಧಾರಾವಾಹಿ
ರಾಜೇಶ್ ದುಗ್ಗುಮನೆ
|

Updated on: Mar 28, 2025 | 8:11 AM

Share

ಕಿರುತೆರೆಯಲ್ಲಿ ಧಾರಾವಾಹಿಗಳ ಟಿಆರ್​ಪಿ (TRP) ತುಂಬಾನೇ ಮುಖ್ಯವಾಗುತ್ತದೆ. ಇದರ ಆಧಾರಾದ ಮೇಲೆ ಧಾರಾವಾಹಿಯನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ನಿರ್ಧಾರವನ್ನು ಮಾಡಲಾಗುತ್ತದೆ. ಇನ್ನೂ ಕೆಲವೊಮ್ಮೆ ಉತ್ತಮ ಟಿಆರ್​ಪಿ ಹೊಂದಿರುವ ಧಾರಾವಾಹಿಯನ್ನು ಪೂರ್ಣಗೊಳಿಸಲಾಗುತ್ತದೆ. ಈಗ ಕಲರ್ಸ್​ನ ಟಾಪ್ 1 ಧಾರಾವಾಹಿ ಶೀಘ್ರವೇ ಕೊನೆ ಆಗಲಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಧಾರಾವಾಹಿ ತಂಡದವರಾಗಲಿ, ವಾಹಿನಿ ಕಡೆಯಿಂದಾಗಲಿ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆ ವಿಚಾರ ಗೊತ್ತಾದರೆ ಫ್ಯಾನ್ಸ್​ಗೆ ಸ್ಪಷ್ಟನೆ ಸಿಕ್ಕಂತಾಗುತ್ತದೆ.

ಹಾಗಾದರೆ ಕೊನೆ ಆಗುತ್ತಿರುವ ಧಾರಾವಾಹಿ ಯಾವುದು? ‘ಲಕ್ಷ್ಮೀ ಬಾರಮ್ಮ’. ಆರಂಭದಲ್ಲಿ ಅಕ್ಕ-ತಂಗಿ ಕಥೆಯನ್ನು ಒಟ್ಟಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ, ನಂತರ ಅಕ್ಕನ ಕಥೆ ಬೇರೆ ಹಾಗೂ ತಂಗಿಯ ಕಥೆಯನ್ನು ಬೇರೆ ಮಾಡಲಾಯಿತು. ಈಗ 7 ಗಂಟೆಗೆ ಭಾಗ್ಯನ ಕಥೆ ಇರುವ ‘ಭಾಗ್ಯಲಕ್ಷ್ಮೀ’ ಪ್ರಸಾರ ಕಂಡರೆ, 7.30ಕ್ಕೆ ‘ಲಕ್ಷ್ಮೀ ಬಾರಮ್ಮ ಪ್ರಸಾರ ಕಾಣುತ್ತಿದೆ.

ಹಾಗಾದರೆ, ‘ಲಕ್ಷ್ಮೀ ಬಾರಮ್ಮ’ ಟಿಆರ್​ಪಿ ಕುಸಿದು ಹೋಗಿದೆಯಾ? ಖಂಡಿತವಾಗಿಯೂ ಇಲ್ಲ. ಸದ್ಯ ಕಲರ್ಸ್ ಧಾರಾವಾಹಿಗಳನ್ನಷ್ಟೇ ನೋಡೋದಾದರೆ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯೇ ಟಾಪ್​ನಲ್ಲಿದೆ! ಹೌದು, 11ನೇ ವಾರದ ಟಿಆರ್​ಪಿ ಲೆಕ್ಕಾಚಾರದ ಪ್ರಕಾರ ಕಲರ್ಸ್ ಸೀರಿಯಲ್​ಗಳ ಪೈಕಿ ಅತಿ ಹೆಚ್ಚು ಟಿಆರ್​ಪಿ ಸಿಕ್ಕಿರೋದು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗೆ. ಆ ಬಳಿಕ ‘ನಿನಗಾಗಿ’, ‘ಭಾರ್ಗವಿ ಎಲ್​ಎಲ್​ಬಿ’ ಧಾರಾವಾಹಿಗಳು ಇವೆ.

ಇದನ್ನೂ ಓದಿ
Image
ದಂಡಿಗೆ, ದಾಳಿಗೆ ಹೆದರಲಿಲ್ಲ, ಹಲ್ಲಿಗೆ ಹೆದರೋದಾ; ಪಾಪ ಗೌತಮಿ ಸ್ಥಿತಿ ನೋಡಿ
Image
ಗಳಿಕೆಯಲ್ಲಿ ಇತಿಹಾಸ; ಮೊದಲ ದಿನ ಗರಿಷ್ಠ ಕಲೆಕ್ಷನ್ ಮಾಡಿದ ಎಲ್​2: ಎಂಪುರಾನ್
Image
ಚಿತ್ರಮಂದಿರದ ಬಾಗಿಲು, ಕಿಟಕಿ, ಕುರ್ಚಿ ಒಡೆದು ಹಾಕಿದ ದರ್ಶನ್ ಫ್ಯಾನ್ಸ್​
Image
ಐಶ್ವರ್ಯಾ ಕಾರು ಅಪಘಾತಕ್ಕೆ ಒಳಗಾಗಿದ್ದು ಹೇಗೆ? ವಿಡಿಯೋ ವೈರಲ್

ಹಾಗೆ ನೋಡೋದಾದರೆ ‘ಭಾಗ್ಯಲಕ್ಷ್ಮೀ’ ಧಾರಾವಾಹಿಗೆ ಟಿಆರ್​ಪಿ ಕಡಿಮೆ ಇದೆ. ಈ ಧಾರಾವಾಹಿ ಕಲರ್ಸ್ ಸೀರಿಯಲ್​ಗಳ ಪೈಕಿ ನಾಲ್ಕನೇ ಸ್ಥಾನದಲ್ಲಿ ಇದೆ. ಆದಾಗ್ಯೂ ವಾಹಿನಿಯವರು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯನ್ನೇ ಕೊನೆ ಮಾಡುವ ನಿರ್ಧಾರಕ್ಕೆ ಬಂದಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.

ಇದನ್ನೂ ಓದಿ: ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಹಲ್ಲಿಗೆ ಹೆದರೋದಾ; ಪಾಪ ಗೌತಮಿ ಸ್ಥಿತಿ ನೋಡಿ

ಸಿರಿಯಲ್ ಟಿಆರ್​ಪಿ:

11ನೇ ವಾರದ ಸೀರಿಯಲ್ ಟಿಆರ್​ಪಿ ಲೆಕ್ಕಾಚಾರ ನೋಡೋದಾದರೆ ಮೊದಲ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ, ನಾಲ್ಕನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಹಾಗೂ ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ