Gouthami Jadav: ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಹಲ್ಲಿಗೆ ಹೆದರೋದಾ; ಪಾಪ ಗೌತಮಿ ಸ್ಥಿತಿ ನೋಡಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ ರ ಸ್ಪರ್ಧಿ ಗೌತಮಿ ಜಾಧವ್ ಅವರು ಹಲ್ಲಿಗೆ ಭಯ ಬಿದ್ದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಬಿಗ್ ಬಾಸ್ ನಲ್ಲಿ ಧೈರ್ಯಶಾಲಿಯಾಗಿ ಕಾಣಿಸಿಕೊಂಡಿದ್ದ ಗೌತಮಿ, ಹಲ್ಲಿಯನ್ನು ನೋಡಿ ಭಯಭೀತರಾದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡವರು ಗೌತಮಿ ಜಾಧವ್ (Gouthami Jadav) . ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡರು. ಅವರು ಪಾಸಿಟಿವಿಟಿ ಬಗ್ಗೆ ಹೆಚ್ಚು ಗಮನ ಹರಿಸಿದರು. ಅವರು ಫಿನಾಲೆ ತಲುಪಲು ಸಾಧ್ಯವಾಗದೇ ಇರಬಹುದು. ಆದರೆ, ತಮ್ಮ ಪಯಣ ಅಭಿಮಾನಿಗಳ ನೆನಪಿನಲ್ಲಿ ಇರುವಂತೆ ಮಾಡಿದರು ಗೌತಮಿ. ಈಗ ಗೌತಮಿ ಜಾಧವ್ ಅವರ ವಿಡಿಯೋ ಒಂದು ವೈರಲ್ ಆಗಿದೆ. ಬಿಗ್ ಬಾಸ್ನಲ್ಲಿ ಎಲ್ಲರನ್ನೂ ಹೆದರಿಸಿದ್ದ ಅವರು ಹಲ್ಲಿಗೆ ಹೆದರಿ ಹೋಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಗೌತಮಿ ಜಾಧವ್ ಅವರು ಇತ್ತೀಚೆಗೆ ಧನರಾಜ್ ಅವರ ಮನೆಗೆ ಹೋಗಿದ್ದರು. ಆ ಸಂದರ್ಭದ ವಿಡಿಯೋ ತುಣುಕುಗಳನ್ನು ಟ್ರೋಲ್ ಪೇಜ್ಗಳು ವೈರಲ್ ಮಾಡುತ್ತಾ ಇದ್ದಾರೆ. ಈ ವೇಳೆ ಹಲ್ಲಿಯ ಕಥೆಯೂ ಒಂದು. ಧನರಾಜ್ ಮನೆಯ ಗೋಡೆ ಮೇಲೆ ಹಲ್ಲಿ ಇತ್ತು. ಈ ಹಲ್ಲಿಯನ್ನು ನೋಡಿ ಗೌತಮಿ ಭಯಗೊಂಡಿದ್ದಾರೆ.
‘ಹಲ್ಲಿ ಇದೆ..’ ಎಂದಾಗ ‘ನಿಜವಾಗಲೂ ಇದೆಯಾ’ ಎನ್ನುತ್ತಾ ಓಡಿಯೇ ಬಿಟ್ಟರು ಗೌತಮಿ. ‘ಹಲ್ಲಿಗಳು ಬರುತ್ತವೆ ಎನ್ನುವ ಕಾರಣಕ್ಕೆ ನಮ್ಮ ಮನೆಯ ಕಿಟಕಿ ಡೋರ್ಗಳನ್ನು ತೆಗೆಯೋದೆ ಇಲ್ಲ. ಒಂದೊಮ್ಮೆ ಹಲ್ಲಿ ಬಂದರೆ ಅಭಿಷೇಕ್ ಅದನ್ನು ಓಡಿಸಬೇಕು. ನಾನು ಭಯದಲ್ಲಿ ಅವರಿಗೆ ಪರಚಿದ್ದೂ ಇದೆ’ ಎಂದು ಇತಿಹಾಸ ಬಿಚ್ಚಿಟ್ಟರು ಗೌತಮಿ.
View this post on Instagram
ಗೌತಮಿ ಅವರು ಬಿಗ್ ಬಾಸ್ನಲ್ಲಿ ಘಟಾನುಘಟಿ ಸ್ಪರ್ಧಿಗಳನ್ನು ಹೆದರಿಸಿದ್ದಾರೆ. ಮಾತಿನ ಮೂಲಕ, ತಮ್ಮ ಗತ್ತಿನ ಮೂಲಕ ಎಲ್ಲರಲ್ಲೂ ನಡುಕ ಹುಟ್ಟಿಸಿದ್ದ ರಜತ್ ಅವರ ಮಾತಿಗೂ ಗೌತಮಿ ಬಗ್ಗಿರಲಿಲ್ಲ. ಇನ್ನು ಟಾಸ್ಕ್ ವಿಚಾರದಲ್ಲಂತೂ ಸೋಲುವ ಮಾತೇ ಇರಲಿಲ್ಲ. ಆದರೆ, ಒಂದು ಹಲ್ಲಿಗೆ ಅವರು ಭಯ ಬಿದ್ದಿದ್ದಾರೆ. ಇದೇ ಮಾತನ್ನು ಅನೇಕರು ಹೇಳಿ ನಕ್ಕಿದ್ದಾರೆ.
ಇದನ್ನೂ ಓದಿ: ಟ್ರೋಲ್ ಮಾಡಿದವರನ್ನ ಒಂದೇ ಫೋಟೋದಿಂದ ಗಪ್ ಚುಪ್ ಮಾಡಿದ ಗೌತಮಿ ಜಾಧವ್
ಗೌತಮಿ ಜಾಧವ್ ಅವರು ‘ಸತ್ಯ’ ಧಾರಾವಾಹಿ ಮೂಲಕ ಫೇಮಸ್ ಆದವರು. ಆ ಬಳಿಕ ಅವರಿಗೆ ಬಿಗ್ ಬಾಸ್ ಆಫರ್ ಬಂತು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು. ಅವರು ಹೊಸ ಸಿನಿಮಾ ಅಥವಾ ಧಾರಾವಾಹಿಗಳನ್ನು ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರನ್ನು ಗೌತಮಿ ಆಗಿಯೇ ಎಲ್ಲರೂ ಗುರುತಿಸುತ್ತಿರುವುದಕ್ಕೆ ಫ್ಯಾನ್ಸ್ಗೆ ಖುಷಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.