ಐಶ್ವರ್ಯಾ ಕಾರು ಅಪಘಾತಕ್ಕೆ ಒಳಗಾಗಿದ್ದು ಹೇಗೆ? ವಿಡಿಯೋ ವೈರಲ್
ಐಶ್ವರ್ಯಾ ರೈ ಅವರ ಲಕ್ಷುರಿ ಕಾರು ಮುಂಬೈನಲ್ಲಿ ಅಪಘಾತಕ್ಕೀಡಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಐಶ್ವರ್ಯಾ ರೈ ಅವರು ಅಪಘಾತದ ಸಮಯದಲ್ಲಿ ಕಾರಿನಲ್ಲೇ ಇರಲಿಲ್ಲ. ಈ ವಿಚಾರ ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅಪಘಾತದ ತೀವ್ರತೆ ಕಡಿಮೆ ಇತ್ತು ಮತ್ತು ಯಾರಿಗೂ ಗಾಯಗಳಾಗಿಲ್ಲ.

ನಟಿ ಐಶ್ವರ್ಯಾ ರೈ (Aishwarya Rai) ಅವರ 1.30 ಕೋಟಿ ರೂಪಾಯಿ ಬೆಲೆಯ ಲಕ್ಷುರಿ ಟೊಯಾಟೋ ವೆಲ್ಫೈಯರ್ ಕಾರು ಮುಂಬೈ ನಗರದಲ್ಲಿ ಅಪಘಾತಕ್ಕೆ ಒಳಗಾಗಿದೆ. ಈ ವೇಳೆ ಐಶ್ವರ್ಯಾ ರೈ ಅವರು ಕಾರಿನಲ್ಲಿ ಇದ್ದರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿತ್ತು. ಈಗ ತಿಳಿದು ಬಂದ ವಿಚಾರ ಏನೆಂದರೆ ಐಶ್ವರ್ಯಾ ರೈ ಅವರು ಆ ಕಾರಿನಲ್ಲಿ ಇರಲಿಲ್ಲ. ಹೀಗಾಗಿ, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕಾರು ಅಪಘಾತದ ಬಳಿಕ ಏನಾಯಿತು ಎಂಬುದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಶ್ವರ್ಯಾ ರೈ ಅವರು ಬಾಲಿವುಡ್ನಲ್ಲಿ ಬೇಡಿಕೆ ಹೊಂದಿದ್ದಾರೆ. ಇತ್ತೀಚೆಗೆ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಈ ಕಾರಣಕ್ಕೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕೂಡ ಕಡಿಮೆಯೇ. ಹೀಗಿರುವಾಗಲೇ ಐಶ್ವರ್ಯಾ ಕಾರು ಅಪಘಾತ ಆಗಿದೆ ಎಂದಾಗ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿತ್ತು. ಅಪಘಾತದ ವೇಳೆ ಐಶ್ವರ್ಯಾ ಕಾರಿನಲ್ಲಿ ಇರಲಿಲ್ಲ. ಅಲ್ಲದೆ, ಅಪಘಾತದ ತೀವ್ರತೆ ತುಂಬಾನೇ ಕಡಿಮೆ ಇದ್ದಿದ್ದರಿಂದ ಯಾರಿಗೂ ಯಾವ ತೊಂದರೆಯೂ ಆಗಿಲ್ಲ.
ಐಶ್ವರ್ಯಾ ರೈ ಅವರ ಕಾರಿನ ಸಂಖ್ಯೆ 5050. ಇದು ಅವರ ಅಭಿಮಾನಿಗಳಿಗೆ ತಿಳಿದಿದೆ. ಅಪಘಾತ ಆಗುತ್ತಿದ್ದಂತೆ ಅನೇಕ ಜನರು ಸೇರಿದ್ದಾರೆ. ಇದು ಐಶ್ವರ್ಯಾ ಕಾರು ಎಂದು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಕಾರಿನಲ್ಲಿ ಇದ್ದ ಬಾಡಿಗಾರ್ಡ್ಗಳು ಬಸ್ನ ಸೈಡ್ಗೆ ಹಾಕುವಂತೆ ಕೇಳಿ ಕೊಳ್ಳುತ್ತಿರುವುದು ವಿಡಿಯೋದಲ್ಲಿ ಇದೆ. ಇನ್ನು ಕಾರಿಗೆ ಯಾವುದೇ ತೊಂದರೆ ಆಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸಿದೆ.
Aishwarya Rai’s car gets hit by a bus in Mumbai.#AishwaryaRai #ViralVideo #Viral pic.twitter.com/S847hpgDui
— TIMES NOW (@TimesNow) March 26, 2025
ಐಶ್ವರ್ಯಾ ಅವರ ಕಾರು ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಅವರ ಆರೋಗ್ಯದ ಬಗ್ಗೆ ಅನೇಕರು ಆತಂಕ ಹೊರಹಾಕಿದ್ದರು. ಆದರೆ, ಅವರು ಕಾರಿನಲ್ಲಿ ಇಲ್ಲ ಎನ್ನುವ ವಿಚಾರ ಅವರ ಅಭಿಮಾನಿಗಳನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.
ಇದನ್ನೂ ಓದಿ: ಐಶ್ವರ್ಯಾ ರೈ ಬಚ್ಚನ್ ಕಾರಿಗೆ ಬಸ್ ಡಿಕ್ಕಿ? ಘಟನೆ ಬಗ್ಗೆ ಅಭಿಮಾನಿಗಳಿಗೆ ಆತಂಕ
ಸಿನಿಮಾ ವಿಚಾರಕ್ಕೆ ಬರೋದಾದರೆ 2023ರಲ್ಲಿ ರಿಲೀಸ್ ಆದ ‘ಪೊನ್ನಿಯೆನ್ ಸೆಲ್ವನ್ 2’ ಚಿತ್ರವೇ ಕೊನೆ. ಆ ಬಳಿಕ ಅವರ ನಟನೆಯ ಯಾವುದೇ ಸಿನಿಮಾಗಳು ರಿಲೀಸ್ ಆಗಿಲ್ಲ. ಅವರು ಸದ್ಯ ಯಾವುದೇ ಹೊಸ ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿಲ್ಲ. ಕೆಲವು ಸಮಸ್ಯೆಗಳಿಂದಾಗಿ ಅವರ ದೇಹದ ತೂಕ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Thu, 27 March 25