ಟ್ರೋಲ್ ಮಾಡಿದವರನ್ನ ಒಂದೇ ಫೋಟೋದಿಂದ ಗಪ್ ಚುಪ್ ಮಾಡಿದ ಗೌತಮಿ ಜಾಧವ್
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಗೌತಮಿ ಜಾಧವ್ ಮತ್ತು ಉಗ್ರಂ ಮಂಜು ಅವರ ಗೆಳೆತನವು ಅನೇಕರ ಗಮನ ಸೆಳೆಯಿತು. ಶೋ ಮುಗಿದ ನಂತರವೂ ಅವರ ಬಾಂಧವ್ಯ ಮುಂದುವರಿದಿದೆ. ಇತ್ತೀಚೆಗೆ ಅವರು ತಮ್ಮ ಪತಿ ಅಭಿಷೇಕ್ ಹಾಗೂ ಗೆಳೆಯ ಮಂಜು ಜೊತೆ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋ ಮೂಲಕ ಅವರ ನಡುವೆ ಯಾವುದೇ ಮನಸ್ತಾಪವಿಲ್ಲ ಎಂಬುದು ಸ್ಪಷ್ಟವಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೌತಮಿ ಜಾಧವ್ ಹಾಗೂ ಉಗ್ರಂ ಮಂಜು ಗೆಳೆತನ ಗಮನ ಸೆಳೆಯಿತು. ಇವರ ಗೆಳೆತನ ಬಿಗ್ ಬಾಸ್ ಆಟದ ಮೇಲೆ ಪರಿಣಾಮ ಬೀರಿದೆ. ಅವರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಈ ವಿಚಾರಗಳು ಇವರ ಗೆಳೆತನಕ್ಕೆ ಅಡ್ಡಿ ಆಗಿಲ್ಲ. ಹೊರಕ್ಕೆ ಬಂದ ಬಳಿಕವೂ ಗೌತಮಿ ಹಾಗೂ ಮಂಜು ಗೆಳೆತನ ಮುಂದುವರಿಸಿದ್ದಾರೆ. ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.
ಗೌತಮಿ, ಮಂಜು ಹಾಗೂ ಮೋಕ್ಷಿತಾ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ದಿನ ಕಳೆದಂತೆ ಮಂಜು ಹಾಗೂ ಗೌತಮಿ ಜೊತೆಗೆ ವೈಮನಸ್ಸು ಬೆಳೆದು ಮೋಕ್ಷಿತಾ ಈ ಗುಂಪಿನಿಂದ ಹೊರ ನಡೆದರು. ಆ ಬಳಿಕ ಗೌತಮಿ ಹಾಗೂ ಮಂಜು ಒಟ್ಟಾಗಿ ಇದ್ದರು. ಬರು ಬರುತ್ತಾ ಮಂಜುವಿನ ನಡೆ ಗೌತಮಿಗೆ ಇಷ್ಟ ಆಗಲಿಲ್ಲ. ಇಬ್ಬರೂ ಸಾಕಷ್ಟು ಬಾರಿ ಕಿತ್ತಾಡಿಕೊಂಡಿದ್ದು ಇದೆ. ಗೌತಮಿ ಫಿನಾಲೆಗೂ ಮೊದಲೇ ಹೊರ ಹೋದರೆ, ಮಂಜು ಅವರು ಫಿನಾಲೆಯಲ್ಲಿ ಕಪ್ ಗೆಲ್ಲಲಾಗದೆ ಹೊರ ಬಂದರು.
ಇವರ ಗೆಳೆತನವನ್ನು ಅನೇಕರು ಆಡಿಕೊಂಡಿದ್ದು ಇದೆ. ಗೌತಮಿ ಹಾಗೂ ಅವರ ಪತಿ ಅಭಿಷೇಕ್ ಮಧ್ಯೆ ಮಂಜು ಪ್ರವೇಶ ಎಂದೆಲ್ಲ ಟ್ರೋಲ್ ಮಾಡಿದ್ದರು. ‘ಆಂಟಿ-ಅಂಕಲ್ ಲವ್ಸ್ಟೋರಿ’ ಎಂದೆಲ್ಲ ಹೀಯಾಳಿಸಿದ್ದರು. ಆದರೆ, ಈ ರೀತಿಯ ಟ್ರೋಲ್ಗಳಿಗೆ ಗೌತಮಿ ಅವರು ಒಂದೇ ಒಂದು ಫೋಟೋ ಮೂಲಕ ಉತ್ತರ ಕೊಟ್ಟಿದ್ದಾರೆ.
ಗೌತಮಿ ಜಾಧವ್, ಅವರ ಪತಿ ಅಭಿಷೇಕ್ ಹಾಗೂ ಮಂಜು ಒಂದೆಡೆ ಸೇರಿದ್ದಾರೆ. ಈ ಮೂವರು ಈವರೆಗೆ ಒಟ್ಟಾಗಿ ಯಾವುದೇ ಫೋಟೋ ತೆಗೆಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಮೂವರು ಒಟ್ಟಾಗಿ ಸೇರಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಎಲ್ಲರ ಮೊಗದಲ್ಲೂ ನಗು ಇದೆ. ಅಭಿಷೇಕ್ ಹೆಗಲಮೇಲೆ ಮಂಜು ಕೈ ಹಾಕಿ ನಿಂತಿದ್ದಾರೆ. ಈ ಮೂಲಕ ಇವರ ಮಧ್ಯೆ ಯಾವುದೇ ಮನಸ್ತಾಪ ಇಲ್ಲ ಅನ್ನೋದು ಸ್ಪಷ್ಟವಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಗೆದ್ದರೂ ಕುರಿ ಕಾಯುವ ಕಾಯಕ ಮುಂದುವರಿಸಲಿದ್ದಾರೆ ಹನುಮಂತ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೌತಮಿ ಜಾಧವ್ ಫಿನಾಲೆಯಲ್ಲಿ ಇರಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಅದೇ ರೀತಿ ಮಂಜು ಕಪ್ ಗೆಲ್ಲಬೇಕು ಎಂದು ಕೆಲವರು ಬಯಸಿದ್ದರು. ಆದರೆ, ಅದ್ಯಾವುದೂ ಕೈಗೂಡಿಲ್ಲ ಅನ್ನೋದು ಬೇಸರದ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.