AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ತಾಯಿ ಅಷ್ಟೇ ಇಷ್ಟ, ಮಗಳಲ್ಲ’: ರಾಮ್ ಗೋಪಾಲ್ ವರ್ಮಾ ನೇರ ಮಾತು

Ram Gopal Varma: ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ತಮ್ಮ ಹೇಳಿಕೆಗಳು, ಟ್ವೀಟ್​ಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ರಾಮ್ ಗೋಪಾಲ್ ವರ್ಮಾ ಆಗ್ಗೆ ಶ್ರೀದೇವಿ ಬಗೆಗಿನ ತಮ್ಮ ಪ್ರೀತಿಯ ಬಗ್ಗೆ ಮಾತನಾಡುತ್ತಿರುತ್ತಾರೆ. ಇದೀಗ ಅವರ ಪುತ್ರಿ ಜಾನ್ಹವಿ ಕಪೂರ್ ಬಗ್ಗೆ ಮಾತನಾಡಿದ್ದಾರೆ.

‘ನನಗೆ ತಾಯಿ ಅಷ್ಟೇ ಇಷ್ಟ, ಮಗಳಲ್ಲ’: ರಾಮ್ ಗೋಪಾಲ್ ವರ್ಮಾ ನೇರ ಮಾತು
Ram Gopal Varma
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 07, 2025 | 6:35 PM

Share

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ನೇರ ಮಾತುಗಳಿಂದ ಯಾವಾಗಲೂ ಚರ್ಚೆ ಆಗುತ್ತಾರೆ. ಅವರಿಗೆ ಹೀರೋಯಿನ್​ಗಳ ಬಗ್ಗೆ ವಿಶೇಷ ಪ್ರೀತಿ. ಯುವ ನಾಯಕಿಯರ ಜೊತೆ ಅವರು ಬೋಲ್ಡ್ ಆಗಿ ಕಾಣಿಸಿಕೊಂಡ ಉದಾಹರಣೆ ಇದೆ. ಅವರು ಈಗ ಜಾನ್ವಿ ಕಪೂರ್ ಬಗ್ಗೆ ನೇರ ಹೇಳಿಕೆ ಕೊಟ್ಟಿದ್ದಾರೆ. ‘ನನಗೆ ತಾಯಿ ಇಷ್ಟವೇ ಹೊರತು ಮಗಳಲ್ಲ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಶ್ರೀದೇವಿ ಅವರನ್ನು ಕಂಡರೆ ರಾಮ್ ಗೋಪಾಲ್ ವರ್ಮಾಗೆ ವಿಶೇಷ ಪ್ರೀತಿ ಇತ್ತು. ಅವರನ್ನು ರಾಮ್ ಗೋಪಾಲ್ ವರ್ಮಾ ಆರಾಧಿಸುತ್ತಾ ಇದ್ದರು. ಈ ಬಗ್ಗೆ ಹಲವು ಬಾರಿ ಮಾತನಾಡಿದ್ದರು. ಕೆಲವರು ರಾಮ್ ಮಕ್ಕಳಲ್ಲಿ ತಾಯಿಯನ್ನು ಕಾಣುತ್ತಾರೆ. ಆದರೆ, ರಾಮ್ ಗೋಪಾಲ್ ವರ್ಮಾ ಆ ರೀತಿ ಅಲ್ಲವೇ ಅಲ್ಲ.

‘ನನಗೆ ಜಾನ್ವಿ ಕಪೂರ್ ಅವರಲ್ಲಿ ಶ್ರೀದೇವಿ ಕಾಣುತ್ತಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ.ಈ ಮೂಲಕ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬ ವಿಚಾರ ಸುಳ್ಳಾಗಿದೆ. ಈ ಮೊದಲು ಜೂನಿಯರ್ ಎನ್ಟಿಆರ್ ಅವರು ಜಾನ್ವಿ ಕಪೂರ್ನ ಶ್ರೀದೇವಿಗೆ ಹೋಲಿಕೆ ಮಾಡಿದ್ದರು. ಆದರೆ, ಹೋಲಿಕೆ ತಪ್ಪು ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಇದನ್ನೂ ಓದಿ:ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿ ಅರೆಸ್ಟ್ ಮಾಡ್ತಾರಾ? ಆರ್​ಜಿವಿ ಪ್ರಶ್ನೆ

‘ಶ್ರೀದೇವಿ ಅವರನ್ನು ಆರಾಧಿಸುವವರು ಹೆಚ್ಚಿದರು ಕಾರಣ ಅವರ ನಟನೆ ಹಾಗೂ ಕಲೆಯಿಂದ. ಅವರು ಹಲವು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಅವರ ಪರ್ಫಾರ್ಮೆನ್ಸ್ ನೋಡಿ ನಾನೊಬ್ಬ ನಿರ್ದೇಶಕ ಅನ್ನೋದು ನನಗೆ ಮರೆತೇ ಹೋಯಿತು. ನಾನು ಅವಳ ಪ್ರೇಕ್ಷಕನಾಗಿ ನೋಡಲು ಆರಂಭಿಸಿದೆ. ಇದು ಅವರ ರೇಂಜ್’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

‘ನನಗೆ ಅವಳ ಅಮ್ಮ ಇಷ್ಟ, ಮಗಳಲ್ಲ. ಇಂಡಸ್ಟ್ರಿಯಲ್ಲಿ ಅನೇಕರ ಜೊತೆ ನಾನು ಕನೆಕ್ಷನ್ ಬೆರೆಸಿಕೊಂಡಿಲ್ಲ. ಹೀಗಾಗಿ, ಜಾನ್ವಿ ಜೊತೆ ಸಿನಿಮಾ ಮಾಡುವ ಯಾವುದೇ ಉದ್ದೇಶ ನನಗೆ ಇಲ್ಲ’ ಎಂದಿದ್ದಾರೆ ಅವರು.

ಜಾನ್ವಿ ಕಪೂರ್ ಅವರು ಇಂಡಸ್ಟ್ರಿಗೆ ಬಂದು ಕೆಲ ವರ್ಷ ಕಳೆದಿದೆ. ಅವರ ನಟನೆಯ ಮೊದಲ ಸಿನಿಮಾ ‘ದಢಕ್’ ಹಿಟ್ ಆಗಿಲ್ಲ. ಅವರ ನಟನೆಯ ‘ದೇವರ’ ಕಳೆದ ವರ್ಷ ರಿಲೀಸ್ ಆಯಿತು. ಆದರೆ, ಅವರು ಒಂದು ಹಾಡು ಕೆಲವೇ ದೃಶ್ಯಗಳಿಗೆ ಸೀಮಿತ ಆದರು. ಈ ಕಾರಣಕ್ಕೆ ಅವರು ಟೀಕೆ ಕೂಡ ಎದುರಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ