ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿ ಅರೆಸ್ಟ್ ಮಾಡ್ತಾರಾ? ಆರ್ಜಿವಿ ಪ್ರಶ್ನೆ
ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರಿಗೆ ಅಸಮಾಧಾನ ಇದೆ. ಈ ಬಗ್ಗೆ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರೀಕರಣದ ವೇಳೆ ಶ್ರೀದೇವಿಯನ್ನು ನೋಡಲು ಬಂದಿದ್ದ ಲಕ್ಷಾಂತರ ಅಭಿಮಾನಿಗಳಲ್ಲಿ ಮೂವರು ಮೃತರಾಗಿದ್ದರು ಎಂಬುದನ್ನು ಕೂಡ ರಾಮ್ ಗೋಪಾಲ್ ವರ್ಮಾ ಅವರು ಈಗ ನೆನಪಿಸಿದ್ದಾರೆ.
‘ಪುಷ್ಪ 2’ ಸಿನಿಮಾದ ಪ್ರದರ್ಶನದ ವೇಳೆ ಕಾಲ್ತುಳಿತ ಉಂಟಾಗಿ ಅಭಿಮಾನಿ ಮೃತಪಟ್ಟಿದ್ದರಿಂದ ನಟ ಅಲ್ಲು ಅರ್ಜುನ್ ಮೇಲೆ ಕೇಸ್ ಹಾಕಲಾಯಿತು. ಅಲ್ಲದೇ, ಅವರನ್ನು ತೆಲಂಗಾಣ ಪೊಲೀಸರು ಅರೆಸ್ಟ್ ಕೂಡ ಮಾಡಿದರು. ಅದೇ ದಿನ ಮಧ್ಯಂತರ ಜಾಮೀನು ಪಡೆದ ಅಲ್ಲು ಅರ್ಜುನ್ ಬಿಡುಗಡೆ ಆದರು. ಈ ಘಟನೆಗೆ ಸಂಬಂಧಿಸಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಟಾಲಿವುಡ್ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಅವರು ಒಂದು ಮುಖ್ಯವಾದ ಪ್ರಶ್ನೆ ಎತ್ತಿದ್ದಾರೆ.
ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಜನಸಾಗರ ಸೇರುವುದು ಸಹಜ. ಆಗ ಉಂಟಾಗುವ ಅವಘಡಗಳಿಗೆ ಸೆಲೆಬ್ರಿಟಿಗಳನ್ನು ಹೊಣೆ ಮಾಡುವುದು ಸರಿಯಲ್ಲ ಎಂಬುದು ರಾಮ್ ಗೋಪಾಲ್ ವರ್ಮಾ ಅವರ ವಾದ. ಇದಕ್ಕೆ ಪೂರಕವಾಗಿ ಅವರು ಒಂದು ಉದಾಹರಣೆ ನೀಡಿದ್ದಾರೆ. ಶ್ರೀದೇವಿ ನಟನೆಯ ‘ಕ್ಷಣ ಕ್ಷಣಂ’ ಸಿನಿಮಾದ ಶೂಟಿಂಗ್ ವೇಳೆ ನಡೆದ ಘಟನೆಯನ್ನು ಈಗ ರಾಮ್ ಗೋಪಾಲ್ ವರ್ಮಾ ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ‘ಅಲ್ಲು ಅರ್ಜುನ್ ಯುದ್ಧ ಗೆದ್ದಿಲ್ಲ, ಸಿನಿಮಾ ಮಾಡಿ ಹಣ ಮಾಡಿಕೊಂಡಿದ್ದಾರೆ ಅಷ್ಟೇ’; ಸಿಎಂ ರೇವಂತ್ ರೆಡ್ಡಿ
‘ಅಲ್ಲು ಅರ್ಜುನ್ ಬಂಧನದ ವಿರುದ್ಧ ಪ್ರತಿಯೊಬ್ಬ ಸ್ಟಾರ್ ಕೂಡ ಪ್ರತಿಭಟನೆ ಮಾಡಬೇಕು. ಸಿನಿಮಾದವರು ಆಗಿರಬಹುದು ಅಥವಾ ರಾಜಕೀಯದವರು ಆಗಿರಬಹುದು. ತುಂಬ ಜನಪ್ರಿಯತೆ ಹೊಂದುವುದು ಅಪರಾಧವೇ? ನನ್ನ ಕ್ಷಣ ಕ್ಷಣಂ ಸಿನಿಮಾದ ಚಿತ್ರೀಕರಣದ ವೇಳೆ ಶ್ರೀದೇವಿಯನ್ನು ನೋಡಲು ಲಕ್ಷಾಂತರ ಜನರು ಬಂದಿದ್ದರು. 3 ಜನರು ಸಾವಿಗೀಡಾದರು. ಹಾಗಾದ್ರೆ ಈಗ ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿಯನ್ನು ಬಂಧಿಸುತ್ತಾರಾ’ ಎಂದು ರಾಮ್ ಗೋಪಾಲ್ ವರ್ಮಾ ಪ್ರಶ್ನೆ ಮಾಡಿದ್ದಾರೆ.
Every STAR should STRONGLY protest against @alluarjun ‘s ARREST because for any celebrity whether it’s a FILM STAR or a POLITICAL STAR , is it a crime for them to be ENORMOUSLY POPULAR???
3 people died in the lakhs of crowd who came to see SRIDEVI in the shooting of my film…
— Ram Gopal Varma (@RGVzoomin) December 19, 2024
ರಾಮ್ ಗೋಪಾಲ್ ವರ್ಮಾ ಅವರು ಹಲವಾರು ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಅವರು ಪೋಸ್ಟ್ಗಳು ಹೆಚ್ಚು ವಿಡಂಭನೆಯಿಂದ ಕೂಡಿರುತ್ತವೆ. ಹಾಗಾಗಿ ಬಹುತೇಕರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗಿದ್ದರೂ ಕೂಡ ಅವರು ಈಗ ಅಲ್ಲು ಅರ್ಜುನ್ ಬಗ್ಗೆ ಮಾಡಿರುವ ಪೋಸ್ಟ್ ತೂಕಬದ್ಧವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲು ಅರ್ಜುನ್ ಬಂಧನದ ಹಿಂದೆ ರಾಜಕೀಯದ ಕೈವಾಡ ಇದೆ ಎಂದು ಕೂಡ ಹಲವರು ಟೀಕಿಸಿದ್ದಾರೆ. ರೇವಂತ್ ರೆಡ್ಡಿ ಸರ್ಕಾರವನ್ನು ಖಂಡಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.