ಸ್ಟಾರ್ ನಿರ್ದೇಶಕರು ‘ಯುಐ’ ಸಿನಿಮಾಕ್ಕೆ ಕಾಯುತ್ತಿರುವುದು ಏಕೆ? ಉಪ್ಪಿ ಕೊಟ್ಟರು ಉತ್ತರ

Upendra: ಉಪೇಂದ್ರ ನಿರ್ದೇಶನ ಮಾಡಿ, ನಟನೆ ಮಾಡಿರುವ ‘ಯುಐ’ ಸಿನಿಮಾ ಇಂದು (ಡಿಸೆಂಬರ್ 20) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಸಿನಿಮಾ ಬಗ್ಗೆ ರಾಣಾ ದಗ್ಗುಬಾಟಿ ಉಪ್ಪಿಯ ಸಂದರ್ಶನ ಮಾಡಿದ್ದರು. ಈ ವೇಳೆ ಸ್ಟಾರ್ ನಿರ್ದೇಶಕರು ನಿಮ್ಮ ಸಿನಿಮಾ ನೋಡಲು ಕಾಯುತ್ತಿದ್ದಾರೆ ಎಂಬ ರಾಣಾರ ಮಾತಿಗೆ ಉಪ್ಪಿ ಸಖತ್ ಉತ್ತರ ನೀಡಿದ್ದಾರೆ.

ಸ್ಟಾರ್ ನಿರ್ದೇಶಕರು ‘ಯುಐ’ ಸಿನಿಮಾಕ್ಕೆ ಕಾಯುತ್ತಿರುವುದು ಏಕೆ? ಉಪ್ಪಿ ಕೊಟ್ಟರು ಉತ್ತರ
Upendra Rana Daggubati
Follow us
ಮಂಜುನಾಥ ಸಿ.
|

Updated on: Dec 20, 2024 | 3:05 PM

ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಇಂದು (ಡಿಸೆಂಬರ್ 20) ಬಿಡುಗಡೆ ಆಗಿದೆ. ಸಿನಿಮಾದ ಪ್ರಚಾರವನ್ನು ಬಲು ಜೋರಾಗಿ ಮಾಡಿದ್ದರು ಉಪ್ಪಿ. ಪರಭಾಷೆಗಳಿಗೆ ಹೋಗಿ ಅಲ್ಲಿನ ಸ್ಟಾರ್ ನಟರನ್ನು ಭೇಟಿಯಾಗಿ ಅವರಿಂದ ಸಿನಿಮಾದ ಪ್ರಚಾರ ಮಾಡಿಸಿದ್ದರು. ಆಮಿರ್ ಖಾನ್, ನಾಗಾರ್ಜುನ್ ಇನ್ನೂ ಕೆಲವರು ಉಪ್ಪಿಯ ಸಿನಿಮಾದ ಪ್ರಚಾರ ಮಾಡಿದ್ದರು. ತೆಲುಗಿನ ಸ್ಟಾರ್ ನಟ, ನಿರ್ಮಾಪಕ ರಾಣಾ ದಗ್ಗುಬಾಟಿ ಸಹ ಉಪೇಂದ್ರ ಅವರ ಸಿನಿಮಾದ ಪ್ರಚಾರ ಮಾಡಿದ್ದರು. ರಾಣಾ ಅವರು ಉಪ್ಪಿ ಅವರ ಸಂದರ್ಶನ ನಡೆಸಿಕೊಟ್ಟಿದ್ದರು.

ಸಂದರ್ಶನದ ವೇಳೆ ಉಪೇಂದ್ರ ಅವರ ನಿರ್ದೇಶನ ಪ್ರತಿಭೆಯನ್ನು ಕೊಂಡಾಡಿದ ರಾಣಾ ದಗ್ಗುಬಾಟಿ, ‘ನಾನು ಹಲವು ನಿರ್ದೇಶಕರ ಬಳಿ ಮಾತನಾಡಿದೆ ಎಲ್ಲರೂ ನಿಮ್ಮ ಸಿನಿಮಾ ಬಿಡುಗಡೆಗೆ ಕಾಯುತ್ತಿರುವುದಾಗಿ ಹೇಳುತ್ತಿದ್ದಾರೆ. ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್, ಸಂದೀಪ್ ರೆಡ್ಡಿ ವಂಗಾ, ರಾಮ್ ಗೋಪಾಲ್ ವರ್ಮಾ ಇನ್ನೂ ಕೆಲವು ದೊಡ್ಡ ನಿರ್ದೇಶಕರು, ನಿಮ್ಮ ಸಿನಿಮಾ ನೋಡಲು ಕಾಯುತ್ತಿರುವುದಾಗಿ ಹೇಳುತ್ತಿದ್ದಾರೆ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.

ರಾಣಾರ ಈ ಮಾತಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ ಉಪೇಂದ್ರ, ‘ಅವರೆಲ್ಲ ನನ್ನ ಸಿನಿಮಾಕ್ಕಾಗಿ ಕಾಯುತ್ತಿರುವುದು ನಿಜ, ಏಕೆ ಕಾಯುತ್ತಿದ್ದಾರಂತೆ. ನನ್ನ ಸಿನಿಮಾ ನೋಡಿ, ಈ ರೀತಿ ಸಿನಿಮಾ ಮಾಡಬಾರದು ಎಂದು ಅವರು ನಿರ್ಣಯ ಮಾಡುತ್ತಾರೆ. ಸಿನಿಮಾ ಒಂದನ್ನು ಹೇಗೆ ಮಾಡಬಾರದು ಎಂದು ತಿಳಿದುಕೊಳ್ಳಲು ಅವರು ನನ್ನ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ ಉಪೇಂದ್ರ.

ಇದನ್ನೂ ಓದಿ:UI Movie Review: ಯುಐ ಸಿನಿಮಾದಲ್ಲಿ ಉಪೇಂದ್ರ ವಿಚಾರಗಳ ಓವರ್​ ಡೋಸ್​

ಅಂದಹಾಗೆ ಉಪೇಂದ್ರಗೆ ತೆಲುಗು ಚಿತ್ರರಂಗದಲ್ಲಿಯೂ ದೊಡ್ಡ ಅಭಿಮಾನಿ ವರ್ಗವೇ ಇದೆ. ತೆಲುಗಿನ ಹಲವು ಸಿನಿಮಾಗಳಲ್ಲಿ ಉಪ್ಪಿ ನಟಿಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಅಲ್ಲು ಅರ್ಜುನ್ ಸೇರಿದಂತೆ ಕೆಲವು ಸ್ಟಾರ್ ಹೀರೋಗಳ ಜೊತೆಗೂ ಉಪ್ಪಿ ನಟಿಸಿದ್ದಾರೆ. ತೆಲುಗಿನಲ್ಲಿ ಕೆಲ ಸಿನಿಮಾಗಳನ್ನು ನಿರ್ದೇಶನ ಸಹ ಮಾಡಿದ್ದಾರೆ ಉಪ್ಪಿ.

ಇಂದು (ಡಿಸೆಂಬರ್ 20) ಉಪೇಂದ್ರ ನಿರ್ದೇಶನ ಮಾಡಿ ನಟಿಸಿರುವ ‘ಯುಐ’ ಸಿನಿಮಾ ತೆರೆಗೆ ಬಂದಿದೆ. ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ತಮ್ಮದೇ ಆದ ಶೈಲಿಯಲ್ಲಿ ಈ ಸಿನಿಮಾವನ್ನು ಉಪ್ಪಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಲಹರಿ ವೇಲು ಮತ್ತು ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ