
Ram Gopal Varma RGV
ರಾಮ್ ಗೋಪಾಲ್ ವರ್ಮಾ ಜನಿಸಿದ್ದು 1962ರ ಏಪ್ರಿಲ್ 7ರಂದು. ಭಾರತೀಯ ಚಲನಚಿತ್ರೋದ್ಯಮದಲ್ಲಿ ಅವರು ವಿಶಿಷ್ಟ ಮತ್ತು ವಿವಾದಾತ್ಮಕ ಶೈಲಿಯ ಸಿನಿಮಾಗಳಿಂದ ಹೆಸರುವಾಸಿ ಆಗಿದ್ದಾರೆ. 1989ರಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಶಿವ’ ಸಿನಿಮಾದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, ತಮ್ಮ ಸಿನಿಮಾಗಳಲ್ಲಿ ವಿಶೇಷವಾಗಿ ಕಥೆ ಹೇಳುವಿಕೆ ಮತ್ತು ಹೊಸ ಬಗೆಯ ಛಾಯಾಗ್ರಹಣದ ಮೂಲಕ ಪ್ರಾಮುಖ್ಯತೆಯನ್ನು ಪಡೆದರು. ವರ್ಮಾ ಅವರು ಕ್ರೈಮ್, ಡ್ರಾಮಾ ಸೇರಿದಂತೆ ವಿವಿಧ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅವರ ಕೆಲವು ಗಮನಾರ್ಹ ಸಿನಿಮಾಗಳಲ್ಲಿ ‘ಸತ್ಯ’, ‘ರಂಗೀಲಾ’, ‘ಕಂಪನಿ’ ಮುಂತಾದವು ಸೇರಿವೆ. ಅಷ್ಟೆಲ್ಲ ಜನಪ್ರಿಯತೆ ಪಡೆದರೂ ಕೂಡ ಅವರ ನಂತರದ ಚಿತ್ರಗಳು ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದವು. ಅವರ ವೃತ್ತಿಜೀವನದಲ್ಲಿ ವಿವಾದಗಳು ಮತ್ತು ಏರಿಳಿತಗಳ ಹೊರತಾಗಿಯೂ, ರಾಮ್ ಗೋಪಾಲ್ ವರ್ಮಾ ಭಾರತೀಯ ಚಿತ್ರರಂಗದಲ್ಲಿ ಗಮನಾರ್ಹ ಮತ್ತು ಪ್ರಭಾವಶಾಲಿ ವ್ಯಕ್ತಿಯಾಗಿ ಉಳಿದಿದ್ದಾರೆ.
‘ಬುದ್ಧಿವಂತರು ಪ್ರೀತಿಸುತ್ತಾರೆ, ಮೂರ್ಖರು ಮದುವೆಯಾಗುತ್ತಾರೆ’; ರಾಮ್ ಗೋಪಾಲ್ ವರ್ಮ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ನೇರ ಮಾತುಗಳಿಂದ ಯಾವಾಗಲೂ ಚರ್ಚೆ ಆಗುತ್ತಾರೆ. ಅವರಿಗೆ ಹೀರೋಯಿನ್ಗಳ ಬಗ್ಗೆ ವಿಶೇಷ ಪ್ರೀತಿ. ಯುವ ನಾಯಕಿಯರ ಜೊತೆ ಅವರು ಬೋಲ್ಡ್ ಆಗಿ ಕಾಣಿಸಿಕೊಂಡ ಉದಾಹರಣೆ ಇದೆ. ಅವರ ವಿವಾಹದ ಬಗ್ಗೆ ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಲೇ ಇರುತ್ತದೆ.
- Shreelaxmi H
- Updated on: Apr 7, 2025
- 8:05 am
ಅರೆಸ್ಟ್ ಮಾಡಲು ಬಂದ ಪೊಲೀಸರು ನನ್ನ ಜತೆ ಎಣ್ಣೆ ಹೊಡೆದರು: ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ ಅವರು ಒಂದು ವಿಲಕ್ಷಣ ಘಟನೆಯನ್ನು ಈಗ ಮೆಲುಕು ಹಾಕಿದ್ದಾರೆ. ಅರೆಸ್ಟ್ ಮಾಡಲು ಬಂದಿದ್ದ ಪೊಲೀಸರು ತಮ್ಮ ಜೊತೆ ಕುಳಿತು ಡ್ರಿಂಕ್ಸ್ ಮಾಡಿ ವಾಪಸ್ಸು ಹೋಗಿದ್ದರು ಎಂದು ಆರ್ಜಿವಿ ಹೇಳಿದ್ದಾರೆ. ಅಂದು ಏನೆಲ್ಲ ನಡೆಯಿತು ಎಂಬುದನ್ನು ರಾಮ್ ಗೋಪಾಲ್ ವರ್ಮಾ ವಿವರಿಸಿದ್ದಾರೆ.
- Madan Kumar
- Updated on: Mar 31, 2025
- 5:52 pm
ಹುಡುಗಿಯರ ಖಾಸಗಿ ಭಾಗಕ್ಕೆ ಮಾರುಹೋದ ಆರ್ಜಿವಿ; ನಿರ್ದೇಶಕನ ಹೇಳಿಕೆಗೆ ತೀವ್ರ ಟೀಕೆ
ರಾಮ್ ಗೋಪಾಲ್ ವರ್ಮಾ ಅವರು ಯುವ ನಟಿಯರೊಂದಿಗೆ ಮಾಡಿದ ವಿಡಿಯೋಗಳು ಮತ್ತು ಹೇಳಿಕೆಗಳು ದೊಡ್ಡ ವಿವಾದಕ್ಕೆ ಕಾರಣವಾಗಿವೆ. ಪ್ರತ್ಯುಷಾ ಎಂಬ ನಟಿಯೊಂದಿಗಿನ ವಿಡಿಯೋದಲ್ಲಿ ಅವರ ಅಶ್ಲೀಲ ಹೇಳಿಕೆಗಳು ವ್ಯಾಪಕ ಟೀಕೆಗೆ ಒಳಗಾಗಿವೆ. ಇದರಿಂದಾಗಿ ಅವರ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
- Rajesh Duggumane
- Updated on: Mar 18, 2025
- 9:05 am
‘ಗೇಮ್ ಚೇಂಜರ್ ಬಾಕ್ಸ್ ಆಫೀಸ್ ಲೆಕ್ಕ ಸುಳ್ಳು’: ಹಿಗ್ಗಾಮುಗ್ಗ ಜಾಡಿಸಿದ ರಾಮ್ ಗೋಪಾಲ್ ವರ್ಮಾ
ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಜನವರಿ 10ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಘಟಾನುಘಟಿಗಳು ಇದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಆಗಿಲ್ಲ. ಆದರೆ ಚಿತ್ರತಂಡದ ಕಡೆಯಿಂದ ಸುಳ್ಳು ಬಾಕ್ಸ್ ಆಫೀಸ್ ಲೆಕ್ಕ ನೀಡಲಾಗಿದೆ ಎಂದು ರಾಮ್ ಗೋಪಾಲ್ ವರ್ಮಾ ಅವರು ಆರೋಪ ಮಾಡಿದ್ದಾರೆ.
- Madan Kumar
- Updated on: Jan 14, 2025
- 5:59 pm
ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿ ಅರೆಸ್ಟ್ ಮಾಡ್ತಾರಾ? ಆರ್ಜಿವಿ ಪ್ರಶ್ನೆ
ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರಿಗೆ ಅಸಮಾಧಾನ ಇದೆ. ಈ ಬಗ್ಗೆ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರೀಕರಣದ ವೇಳೆ ಶ್ರೀದೇವಿಯನ್ನು ನೋಡಲು ಬಂದಿದ್ದ ಲಕ್ಷಾಂತರ ಅಭಿಮಾನಿಗಳಲ್ಲಿ ಮೂವರು ಮೃತರಾಗಿದ್ದರು ಎಂಬುದನ್ನು ಕೂಡ ರಾಮ್ ಗೋಪಾಲ್ ವರ್ಮಾ ಅವರು ಈಗ ನೆನಪಿಸಿದ್ದಾರೆ.
- Madan Kumar
- Updated on: Dec 20, 2024
- 5:14 pm
‘ಸಲ್ಮಾನ್ ಖಾನ್ ತಿರುಗೇಟು ನೀಡಬೇಕು’: ಲಾರೆನ್ಸ್ ಬಿಷ್ಣೋಯ್ ವಿಚಾರಕ್ಕೆ ತಲೆ ಹಾಕಿದ ಆರ್ಜಿವಿ
ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆ ಹಿಂದೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕೈವಾಡ ಇದೆ ಎನ್ನಲಾಗಿದೆ. ಸಲ್ಮಾನ್ ಖಾನ್ಗೆ ಬಾಬಾ ಸಿದ್ಧಿಕಿ ಆಪ್ತವಾಗಿದ್ದರು. ಆ ಕಾರಣದಿಂದಲೇ ಹತ್ಯೆ ನಡೆಯಿತು ಎಂಬ ಮಾತು ಕೇಳಿಬಂದಿದೆ. ಈ ಎಲ್ಲ ವಿಚಾರಗಳ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಅನಿಸಿಕೆ ತಿಳಿಸಲು ಶುರು ಮಾಡಿದ್ದಾರೆ.
- Madan Kumar
- Updated on: Oct 16, 2024
- 10:09 pm
ರಾಮ್ ಗೋಪಾಲ್ ವರ್ಮಾ ಜೊತೆ ರಶ್ಮಿಕಾ ಮಂದಣ್ಣ? ಗಮನವಿಟ್ಟು ನೋಡಿ
Rashmika Mandanna: ಇದೇನಿದು ರಾಮ್ ಗೋಪಾಲ್ ವರ್ಮಾ ಜೊತೆಗೆ ರಶ್ಮಿಕಾ ಮಂದಣ್ಣ! ಇದು ಹೇಗೆ ಸಾಧ್ಯ? ಸ್ವಲ್ಪ ಗಮನವಿಟ್ಟು ನೋಡಿ...
- Manjunatha C
- Updated on: Feb 14, 2024
- 3:10 pm
ಸಿನಿಮಾ ಬಜೆಟ್ 2000, ಗಳಿಸಿದ್ದು 70 ಲಕ್ಷ: ಯಾವುದು ಆ ಸಿನಿಮಾ?
Movie Budget: ಸಿನಿಮಾ ಮೇಲೆ ನೂರು ಕೋಟಿ ಬಂಡವಾಳ ಹಾಕಿ 200 ಕೋಟಿ ಗಳಿಸುವುದನ್ನು ಬ್ಲಾಕ್ ಬಸ್ಟರ್ ಎಂದು ಕರೆಯಲಾಗುತ್ತಿದೆ. ಆದರೆ ಕೇವಲ 2000 ರೂಪಾಯಿ ಬಜೆಟ್ನ ಸಿನಿಮಾ ಒಂದು 70 ಲಕ್ಷ ರೂಪಾಯಿ ಗಳಿಸಿತ್ತು. ಯಾವುದು ಆ ಸಿನಿಮಾ?
- Manjunatha C
- Updated on: Feb 14, 2024
- 3:11 pm