ಹುಡುಗಿಯರ ಖಾಸಗಿ ಭಾಗಕ್ಕೆ ಮಾರುಹೋದ ಆರ್ಜಿವಿ; ನಿರ್ದೇಶಕನ ಹೇಳಿಕೆಗೆ ತೀವ್ರ ಟೀಕೆ
ರಾಮ್ ಗೋಪಾಲ್ ವರ್ಮಾ ಅವರು ಯುವ ನಟಿಯರೊಂದಿಗೆ ಮಾಡಿದ ವಿಡಿಯೋಗಳು ಮತ್ತು ಹೇಳಿಕೆಗಳು ದೊಡ್ಡ ವಿವಾದಕ್ಕೆ ಕಾರಣವಾಗಿವೆ. ಪ್ರತ್ಯುಷಾ ಎಂಬ ನಟಿಯೊಂದಿಗಿನ ವಿಡಿಯೋದಲ್ಲಿ ಅವರ ಅಶ್ಲೀಲ ಹೇಳಿಕೆಗಳು ವ್ಯಾಪಕ ಟೀಕೆಗೆ ಒಳಗಾಗಿವೆ. ಇದರಿಂದಾಗಿ ಅವರ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ರಾಮ್ ಗೋಪಾಲ್ ವರ್ಮಾ (Ram Gopal Varma) ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಅವರು ನೀಡುವ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಚೆಕ್ಬೌನ್ಸ್ ಕೇಸ್ನಲ್ಲಿ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಅವರಿಗೆ ಬಂಧನ ಭೀತಿ ಇದೆ. ಆದರೆ, ಅವರು ಮಾತ್ರ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ನಟಿ ಮಣಿಯರ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ. ಈಗ ಆರ್ಜಿವಿ ನೀಡಿದ ಹೇಳಿಕೆ ಒಂದು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅವರ ಹೇಳಿಕೆಗೆ ಅನೇಕರು ಟೀಕೆ ಹೊರಹಾಕಿದ್ದಾರೆ.
ಯುವ ಹೀರೋಯಿನ್ಗಳನ್ನು ಆರ್ಜಿವಿ ಹೆಚ್ಚೆಚ್ಚು ಆಕರ್ಷಿಸಿಕೊಳ್ಳುತ್ತಾರೆ. ಅವರ ಜೊತೆ ಲಲ್ಲೆ ಹೊಡೆಯುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಅವಕಾಶ ಸಿಗಬಹುದು ಎಂಬುದು ಯುವ ಹೀರೋಯಿನ್ಗಳ ಆಲೋಚನೆ ಇದ್ದರೂ ಇರಬಹುದು. ಹೀಗಾಗಿ, ಕೆಲ ನಟಿಯರು ಆರ್ಜಿವಿ ಜೊತೆ ಫಿಲ್ಟರ್ ಇಲ್ಲದೆ ಮಾತನಾಡುತ್ತಾರೆ. ಆರ್ಜಿವಿ ಏನೇ ಹೇಳಿದರೂ ಮುಜುಗರ ಮಾಡಿಕೊಳ್ಳದೆ ನಗುತ್ತಾರೆ.
View this post on Instagram
ಈಗ ಪ್ರತ್ಯುಷಾ ಎಂಬುವವರು ರಾಮ್ ಗೋಪಾಲ್ ವರ್ಮಾ ಜೊತೆ ವಿಡಿಯೋ ಒಂದನ್ನು ಮಾಡಿದ್ದಾರೆ. ಮೊದಲು ಆರ್ಜಿವಿ ಅವರು ಪ್ರತ್ಯುಷಾನ ಹಗ್ ಮಾಡಿಕೊಳ್ಳುತ್ತಾರೆ. ಆ ಬಳಿಕ ಪ್ರತ್ಯುಷಾ ಅವರು, ‘ಹುಡುಗಿಯರ ಯಾವ ಭಾಗ ಹೆಚ್ಚು ಇಷ್ಟ’ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸೋ ಆರ್ಜಿವಿ, ‘ಸುಳ್ಳು ಹೇಳಬೇಕಾ ಅಥವಾ ನಿಜ ಹೇಳಬೇಕಾ’ ಎಂದು ಕೇಳುತ್ತಾರೆ. ಆಗ ಪ್ರತ್ಯುಷಾ ಅವರು ನಿಜವನ್ನೇ ಹೇಳಬೇಕು ಎಂದು ಒತ್ತಾಯಿಸುತ್ತಾರೆ.
ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್, ಬಂಧನ ನಿಶ್ಚಿತ
‘ಎದೆ ಭಾಗ ಹಾಗೂ ಹಿಂಭಾಗ ನನಗೆ ತುಂಬಾನೇ ಇಷ್ಟ’ ಎಂದರು ಆರ್ಜಿವಿ. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. ‘ಬಿಗ್ ಬಾಸ್ ತೆಲುಗು ಸೀಸನ್ 9’ಕ್ಕೆ ಸ್ಪರ್ಧಿ ಸಿಕ್ಕರು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಆರ್ಜಿವಿ ಹೇಳಿಕೆಗೆ ಟೀಕೆ ಹೊರಹಾಕಿದ್ದಾರೆ. ಯುವ ನಟಿಯರನ್ನು ಅವರು ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:55 am, Tue, 18 March 25








