AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಗೋಪಾಲ್ ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್, ಬಂಧನ ನಿಶ್ಚಿತ

Ram Gopal Varma: ಖ್ಯಾತ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಹೇಳಿಕೆಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಕೆಲ ವಾರಗಳ ಹಿಂದೆ ಸಹ ವರ್ಮಾ ಬಂಧನಕ್ಕೆ ಆಂಧ್ರ ಪೊಲೀಸರು ಯತ್ನಿಸಿದ್ದರು. ಆದರೆ ಸಾಧ್ಯ ಆಗಿರಲಿಲ್ಲ. ಆದರೆ ಈಗ ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ಈ ಬಾರಿ ರಾಮ್ ಗೋಪಾಲ್ ವರ್ಮಾ ಬಂಧನ ಖಚಿತ ಎನ್ನಲಾಗುತ್ತಿದೆ.

ರಾಮ್ ಗೋಪಾಲ್ ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್, ಬಂಧನ ನಿಶ್ಚಿತ
Ram Gopal Varma
Follow us
ಮಂಜುನಾಥ ಸಿ.
|

Updated on: Mar 06, 2025 | 6:16 PM

ಖ್ಯಾತ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು, ವರ್ಮಾ ಬಂಧನ ನಿಶ್ಚಿತ ಎನ್ನಲಾಗುತ್ತಿದೆ. ರಾಮ್ ಗೋಪಾಲ್ ವರ್ಮಾ ವಿರುದ್ಧ ಹಲವು ಪ್ರಕರಣಗಳಿವೆ, ಆದರೆ ಯಾವುದರಲ್ಲೂ ಅವರನ್ನು ಬಂಧಿಸಲಾಗಿರಲಿಲ್ಲ. ಆದರೆ ಇದೀಗ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದ್ದು, ವರ್ಮಾ ಬಂಧನ ಪಕ್ಕಾ ಎನ್ನಲಾಗುತ್ತಿದೆ.

ಮುಂಬೈನ ಕೆಳಹಂತದ ನ್ಯಾಯಾಲಯವು ರಾಮ್ ಗೋಪಾಲ್ ವರ್ಮಾ ವಿರುದ್ಧ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಜನವರಿಯಲ್ಲಿ ವರ್ಮಾ ಅಪರಾಧಿ ಎಂದು ಘೋಷಿಸಿ 3 ತಿಂಗಳ ಸಾಧಾರಣ ಶಿಕ್ಷೆ ವಿಧಿಸಿದೆ. ಆದರೆ ವರ್ಮಾ ಈ ವರೆಗೆ ನ್ಯಾಯಾಲಯದ ಎದುರಾಗಲಿ, ಪೊಲೀಸರ ಎದುರಾಗಲಿ ಹಾಜರಾಗಿಲ್ಲ. ಹಾಗಾಗಿ ಇದೀಗ ನ್ಯಾಯಾಲಯವು ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

2018 ರಲ್ಲಿ ಮುಂಬೈ ಮೂಲಕ ಕಂಪೆನಿಯೊಂದು ರಾಮ್ ಗೋಪಾಲ್ ವರ್ಮಾ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮುಂಬೈನ ಕೆಳಹಂತದ ನ್ಯಾಯಾಲಯವೊಂದು ರಾಮ್ ಗೋಪಾಲ್ ವರ್ಮಾ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ವರ್ಮಾಗೆ ಮೂರು ತಿಂಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 3.72 ಲಕ್ಷ ರೂಪಾಯಿ ಹಣವನ್ನು ಮರುಪಾವತಿ ಮಾಡುವಂತೆ ಸೂಚಿಸಿತ್ತು. ಆದರೆ ವರ್ಮಾ, ಫೆಬ್ರವರು 15 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಶಿಕ್ಷೆಯನ್ನು ಕಡಿತಗೊಳಿಸುವಂತೆ ಮನವಿ ಮಾಡಿದ್ದರು. ಆದರೆ ವರ್ಮಾರ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.

ಇದನ್ನೂ ಓದಿ
Image
ಅನುಮತಿ ಇಲ್ಲದೆ ಚಿತ್ರೀಕರಣ, ರಾಣಾ ಸಿನಿಮಾ ಮೇಲೆ ಅರಣ್ಯ ಇಲಾಖೆಯಿಂದ ದಾಳಿ
Image
ಪ್ರಭಾಸ್ ಕಾರಣದಿಂದ ರಿಷಬ್ ಶೆಟ್ಟಿ ಸಿನಿಮಾ ಮೇಲೆ ಕರಿನೆರಳು
Image
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
Image
ಮೊಮ್ಮಗ ಮಾಡಿದ ಸಾಲದಿಂದ ಹರಾಜಿಗೆ ಬಂತು ಶಿವಾಜಿ ಗಣೇಶನ್ ಮನೆ

ಇದನ್ನೂ ಓದಿ:‘ನನಗೆ ತಾಯಿ ಅಷ್ಟೇ ಇಷ್ಟ, ಮಗಳಲ್ಲ’: ರಾಮ್ ಗೋಪಾಲ್ ವರ್ಮಾ ನೇರ ಮಾತು

ಕೆಲ ವಾರಗಳ ಹಿಂದೆಯೂ ಸಹ ವರ್ಮಾ ವಿರುದ್ಧ ವಾರೆಂಟ್ ಹೊರಡಿಸಲಾಗಿತ್ತು. ರಾಮ್ ಗೋಪಾಲ್ ವರ್ಮಾ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್ ಕಲ್ಯಾಣ್ ಬಗ್ಗೆ ಆಡಿದ್ದ ಮಾತುಗಳ ಬಗ್ಗೆ ಟಿಡಿಪಿ ಮುಖಂಡರೊಬ್ಬರ ದೂರು ಆಧರಿಸಿ ಎಫ್​ಐಆರ್ ದಾಖಲಿಸಿ, ವರ್ಮಾ ಅವರ ಬಂಧನಕ್ಕೆ ಯತ್ನಿಸಲಾಗಿತ್ತು. ಆದರೆ ವರ್ಮಾ, ನ್ಯಾಯಾಲಯದಿಂದ ಜಾಮೀನು ತೆಗೆದುಕೊಂಡು ಬಂಧನದಿಂದ ಬಚಾವಾಗಿದ್ದರು. ಆದರೆ ಈಗ ವರ್ಮಾ ವಿರುದ್ಧ ನಾನ್ ಬೇಲೆಬಲ್ ವಾರೆಂಟ್ ಹೊರಡಿಸಲಾಗಿದ್ದು, ಈ ಬಾರಿ ವರ್ಮಾ ಬಂಧನ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ