ನನಗೆ ಒಂದು ಕೋಟಿ, ಅವರಿಗೆ 5 ಕೋಟಿ: ಚಿತ್ರರಂಗದ ಅಸಮಾನತೆ ಬಗ್ಗೆ ರಮ್ಯಾ ಮಾತು
Actress Ramya: ಸಿನಿಮಾ ನಟರಿಗೆ ಕೊಟ್ಟಷ್ಟು ಸಂಭಾವನೆ ನಟಿಯರಿಗೆ ಕೊಡಲಾಗುವುದಿಲ್ಲ. ಈ ಬಗ್ಗೆ ಬಾಲಿವುಡ್ನಲ್ಲಿ ಚರ್ಚೆ ಆರಂಭವಾಗಿದೆ. ಇದೀಗ ನಟಿ ರಮ್ಯಾ ಕನ್ನಡ ಚಿತ್ರರಂಗದಲ್ಲಿಯೂ ಚರ್ಚೆ ಹುಟ್ಟುಹಾಕಿದ್ದಾರೆ. ತಮ್ಮದೇ ವೃತ್ತಿ ಬದುಕಿನ ಉದಾಹರಣೆಗಳನ್ನು ನೀಡುವ ಮೂಲಕ ಚರ್ಚೆ ಹುಟ್ಟುಹಾಕಿರುವ ರಮ್ಯಾ, ನಟರಿಗೆ ಹೋಲಿಸಿದರೆ ನಟಿಯರಿಗೆ ಬಹಳ ಕಡಿಮೆ ಸಂಭಾವನೆ ಕೊಡಲಾಗುತ್ತಿದೆ ಎಂದಿದ್ದಾರೆ.

ಸಿನಿಮಾ ರಂಗದಲ್ಲಿ ನಟಿಯರಿಗೆ, ನಟರಷ್ಟೆ ಸಮಾನ ಸಂಭಾವನೆ ಕೊಡಬೇಕು ಎಂಬ ಚರ್ಚೆ ಇತ್ತೀಚಿನ ಕೆಲ ವರ್ಷಗಳಿಂದಲೂ ನಡೆಯುತ್ತಿದೆ. ಈ ಚರ್ಚೆ ಕನ್ನಡ ಚಿತ್ರರಂಗಕ್ಕೆ ಬಂದಿರಲಿಲ್ಲ. ಆದರೆ ಇಂದು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (Bengaluru International Film Festival) ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ (Ramya), ಈ ವಿಷಯದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ತಮ್ಮದೇ ಉದಾಹರಣೆ ಮೂಲಕ, ಚಿತ್ರರಂಗದಲ್ಲಿ ವೇತನ ಅಸಮಾನತೆ ಬಗ್ಗೆ ಮಾತನಾಡಿದ್ದಾರೆ.
ನನ್ನೊಟ್ಟಿಗೆ ನಟನೆ ಮಾಡಿದ ಕೆಲವರು ಇವತ್ತು ಸೂಪರ್ ಸ್ಟಾರ್ಗಳಾಗಿದ್ದಾರೆ. ನನ್ನ ಜೊತೆಗೆ ಆರಂಭದಲ್ಲಿ ಸಿನಿಮಾ ಮಾಡುವಾಗ, ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟರು, ಆ ಒಂದು ಸಿನಿಮಾ ಹಿಟ್ ಆದ ಕೂಡಲೇ ಮುಂದಿನ ಸಿನಿಮಾಖ್ಕೆ ನನಗಿಂತ 5ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು, ಅವರಿಗೆ 5ಕೋಟಿ ನಟನ ಸಂಭಾವನೆ ಇದ್ದರೆ ನನಗೆ 1ಕೋಟಿ ಇರುತ್ತಿತ್ತು. ಅವರಷ್ಟೆ ಕೆಲಸ ನಾವೂ ಮಾಡುವಾಗ ನಮಗೆ ಕಡಿಮೆ ಸಂಭಾವನೆ ಅವರಿಗೆ ಹೆಚ್ಚು ಸಂಭಾವನೆ ಏಕೆ? ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ ನಟಿ ರಮ್ಯಾ, ‘ಕನ್ನಡದಲ್ಲಿ ಹೇಳಬೇಕಾದ ಕತೆಗಳು ಸಾಕಷ್ಟಿವೆ ಆದರೆ ಯಾರೂ ಹೇಳುವ ಧೈರ್ಯ ಮಾಡುತ್ತಿಲ್ಲ. ಈಗಲೂ ನಾವು ಮಹಿಳಾ ಪ್ರಧಾನ ಸಿನಿಮಾ ಎಂದರೆ ಮಹಿಳೆಯರು ಪೊಲೀಸ್ ಡ್ರೆಸ್ ಹಾಕಿಕೊಂಡು ರೌಡಿಗಳನ್ನು ಹೊಡೆಯುವ ಸಿನಿಮಾಗಳನ್ನೇ ಮಾಡುತ್ತಿದ್ದೇವೆ. ಇದು ಮಹಿಳಾ ಪ್ರಧಾನ ಸಿನಿಮಾ ಎನಿಸಿಕೊಳ್ಳುವುದಿಲ್ಲ. ಮಲಯಾಳಂ ಸಿನಿಮಾಗಳು ಅದ್ಭುತವಾದ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುತ್ತಿವೆ. ಕನ್ನಡದಲ್ಲಿ ಇತ್ತೀಚೆಗೆ ನನಗೆ ಇಷ್ಟವಾದ ಸಿನಿಮಾಗಳೆಂದರೆ ‘ಗಂಟುಮೂಟೆ’, ‘ಹದಿನೇಳೆಂಟು’, ‘ಸಪ್ತಸಾಗರದಾಚೆ ಎಲ್ಲೊ’ ಮತ್ತು ‘ಆಚಾರ್ಯ ಅಂಡ್ ಕೋ ’ ಎಂದಿದ್ದಾರೆ ರಮ್ಯಾ.
ಇದನ್ನೂ ಓದಿ:ನಟಿ ರಮ್ಯಾ ಅಂದ ಚಂದಕ್ಕೆ ಸರಿಸಾಟಿ ಯಾರಿಲ್ಲ..
ನಟಿಯರನ್ನು ಚಿತ್ರರಂಗ ಹೇಗೆ ನಡೆಸಿಕೊಳ್ಳುತ್ತದೆ ಎಂಬ ಬಗ್ಗೆ ಮಾತನಾಡಿದ ನಟಿ ರಮ್ಯಾ, ವಿದ್ಯಾ ಬಾಲನ್ ತುಂಬಾ ಟ್ಯಾಲೆಂಟ್ ನಟಿ, ಆದರೆ ದಕ್ಷಿಣ ಭಾರತದಲ್ಲಿ ಸದ್ದು ಮಾಡಲಿಲ್ಲ. ನಟಿಯರು ಒಂದರ ಹಿಂದೊಂದು ಹಿಟ್ ಸಿನಿಮಾ ಕೊಡಲಿಲ್ಲ ಅಂದರೆ ಅವರಿಗೆ ನೆಗೆಟಿವ್ ಟ್ಯಾಗ್ ಕೊಡ್ತಾರೆ. ಒಂದು ಸಿನಿಮಾ ಹಿಟ್ ಕೊಟ್ರೆ 10 ಪ್ರಾಜೆಕ್ಟ್ ನಮ್ಮನ್ನು ಹುಡುಕಿಕೊಂಡು ಬರುತ್ತವೆ’ ಎಂದರು. ಈಗಿನ ಕಾಲಘಟ್ಟದಲ್ಲಿ ನಟಿಯರು ಯಾಕೆ ಜನರ ಮನಸಲ್ಲಿ ಉಳಿಯುತ್ತಿಲ್ಲ..? ಅನ್ನೋ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ‘ತ್ರಿಷಾ, ನಯನತಾರಾ ಹಾಗೆ ಜನಪ್ರಿಯ ನಟಿ ಇವತ್ತು ಇಲ್ಲ ಅದಕ್ಕೆ ಕಾರಣ ಸಿನಿಮಾ ಆಯ್ಕೆ, ಕಥೆ, ಪಾತ್ರ, ಜನರೇಶನ್ ಚೇಂಜ್ ಆಗಿದೆ, ಅದಕ್ಕೆ ತಕ್ಕಂತೆ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದಿದ್ದಾರೆ ನಟಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ