AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​ಕುಮಾರ್ ಬಗ್ಗೆ ಆರ್​ಜಿವಿ ಅಲ್ಪಜ್ಞಾನದ ಹೇಳಿಕೆ ಸುಳ್ಳು; ಅಣ್ಣಾವ್ರ ಚಿತ್ರವನ್ನು ರಿಮೇಕ್ ಮಾಡಿದ್ದ ಅಮಿತಾಭ್

ತೆಲುಗು ನಿರ್ದೇಶಕ RGV ಅವರ ಅಲ್ಪಜ್ಞಾನದ ಹೇಳಿಕೆ ಸುಳ್ಳೆಂದು ಸಾಬೀತಾಗಿದೆ. ಅವರು ದಕ್ಷಿಣ ಭಾರತದ ನಟರು ಅಮಿತಾಭ್ ಬಚ್ಚನ್ ಚಿತ್ರಗಳನ್ನು ರಿಮೇಕ್ ಮಾಡಿ ಸ್ಟಾರ್ ಆದರು ಎಂದು ಹೇಳಿದ್ದರು. ಆದರೆ, ವಾಸ್ತವದಲ್ಲಿ ರಾಜ್ಕುಮಾರ್ ಅವರ ಚಿತ್ರವನ್ನು ಬಚ್ಚನ್ ಅವರೇ ರಿಮೇಕ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆದಿವೆ.

ರಾಜ್​ಕುಮಾರ್ ಬಗ್ಗೆ ಆರ್​ಜಿವಿ ಅಲ್ಪಜ್ಞಾನದ ಹೇಳಿಕೆ ಸುಳ್ಳು; ಅಣ್ಣಾವ್ರ ಚಿತ್ರವನ್ನು ರಿಮೇಕ್ ಮಾಡಿದ್ದ ಅಮಿತಾಭ್
ಆರ್​ಜಿವಿ
ರಾಜೇಶ್ ದುಗ್ಗುಮನೆ
|

Updated on:Jun 09, 2025 | 7:35 AM

Share

‘ರಾಜ್​ಕುಮಾರ್, ರಜನಿ ಸೇರಿದಂತೆ ದಕ್ಷಿಣದ ಅನೇಕ ಹೀರೋಗಳು ಅಮಿತಾಭ್ ಬಚ್ಚನ್ (Amitabh Bachchan) ಸಿನಿಮಾಗಳನ್ನು ರಿಮೇಕ್ ಮಾಡಿ ಸೂಪರ್ ಸ್ಟಾರ್​​ಗಳಾದರು’ ಎನ್ನುವ ಅಜ್ಞಾನದ ಹೇಳಿಕೆಯನ್ನು ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮ ಇತ್ತೀಚೆಗೆ ನೀಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ವಿಶೇಷ ಎಂದರೆ ರಾಜ್​ಕುಮಾರ್ ಚಿತ್ರವನ್ನೇ ಅಮಿತಾಭ್ ಅವರು ರಿಮೇಕ್ ಮಾಡಿದ್ದರು! ಈ ವಿಚಾರ ಗೊತ್ತಿಲ್ಲದೆ ಆರ್​ಜಿವಿ ಮಾತನಾಡಿದ್ದು ನಿಜಕ್ಕೂ ನಗು ತರಿಸುವ ಸಂಗತಿ.

ಆರ್​ಜಿವಿ ಹೇಳಿಕೆ ಏನು?

‘70 ಮತ್ತು 80ರ ದಶಕಗಳಲ್ಲಿ ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ದಕ್ಷಿಣದವರು ರಿಮೇಕ್ ಮಾಡಿದರು. ರಾಜ್​ಕುಮಾರ್, ರಜನಿಕಾಂತ್, ಚಿರಂಜೀವಿ, ಎನ್ ಟಿ ರಾಮರಾವ್ ಅವರಂತಹ ನಟರು ಈ ರಿಮೇಕ್‌ಗಳ ಮೂಲಕ ಭಾರಿ ಜನಪ್ರಿಯತೆಯನ್ನು ಗಳಿಸಿದರು. 90 ರ ದಶಕದಲ್ಲಿ ಬಚ್ಚನ್ ಐದು ವರ್ಷ ವಿರಾಮ ತೆಗೆದುಕೊಂಡರು. ಈ ವೇಳೆ ಮ್ಯೂಸಿಕ್ ಕಂಪನಿಗಳು ಬಂದವು. ಆ ಸಂದರ್ಭದಲ್ಲಿ ಬಾಲಿವುಡ್​ನವರು ಮ್ಯೂಸಿಕ್ ಓರಿಯೆಂಟೆಡ್ ಸಿನಿಮಾ ಮಾಡಲು ಆರಂಭಿಸಿದರು. ಆದರೆ, ಆದರೆ ದಕ್ಷಿಣದ ಸಿನಿಮಾ ನಿರ್ದೇಶಕರು ಮಾತ್ರ ಬಚ್ಚನ್ ಶೈಲಿಯಾದ ಮಾಸ್ ಮಸಾಲಾ ರೀತಿಯಲ್ಲಿ ಕಥೆ ಹೇಳುವುದನ್ನು ಮುಂದುವರಿಸಿದರು’ ಎಂದು ಆರ್​ಜಿವಿ ಹೇಳಿದ್ದರು.

ಇದನ್ನೂ ಓದಿ
Image
ಭಾನುವಾರವೇ ಅತೀ ಕಡಿಮೆ ಗಳಿಕೆ ಮಾಡಿದ ‘ಥಗ್ ಲೈಫ್’; ಕನ್ನಡಿಗರ ತಂಟೆಗೆ ಬಂದವರ
Image
ಕಚೇರಿಯಲ್ಲಿರುವ ಸಮಯವೂ ನಿಮ್ಮದೇ, ಎಂಜಾಯ್ ಮಾಡಿ; ಜಯಂತ್ ಕಾಯ್ಕಿಣಿ
Image
‘ಥಗ್ ಲೈಫ್’ ಸೋಲಿನಿಂದ ರಾಮ್ ಚರಣ್ ಚಿತ್ರಕ್ಕೂ ಶುರವಾಗಿದೆ ಭಯ; ಏನಿದು ನಂಟು?
Image
ಹಿತಾಳು ಅಂಬಿಕಾ ಮಗಳು ಅನ್ನೋದು ದುರ್ಗಾಗೆ ತಿಳಿದೇ ಹೋಯ್ತು

ಅಸಲಿಯತ್ತೇನು?

ರಾಜ್​ಕುಮಾರ್ ಹಿರಿಯರು. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 1954ರಲ್ಲಿ. ಅಮಿತಾಭ್ ಸಿನಿಮಾ ರಂಗಕ್ಕೆ ಬಂದಿದ್ದು 15 ವರ್ಷಗಳ ಬಳಿಕ. ಅಂದರೆ 1969ರಲ್ಲಿ ಅವರು ತಮ್ಮ ಮೊದಲ ಚಿತ್ರ ಮಾಡಿದರು. 60ರ ದಶಕದಲ್ಲೇ ರಾಜ್​ಕುಮಾರ್ ಸ್ಟಾರ್ ಹೀರೋ ಆಗಿ ಬಿಟ್ಟಿದ್ದರು. ಅವರಿಗೆ ಅಮಿತಾಭ್ ಬಚ್ಚನ್ ಚಿತ್ರಗಳನ್ನು ರಿಮೇಕ್ ಮಾಡಿ ಸ್ಟಾರ್ ಆಗಬೇಕು ಎನ್ನುವ ಯಾವುದೇ ಅನಿವಾರ್ಯತೆ ಇರಲಿಲ್ಲ.

ಇದನ್ನೂ ಓದಿ: ಕಮಲ್ ಹಾಸನ್ ಬಳಿಕ ಕನ್ನಡಕ್ಕೆ ಮಸಿ ಬಳಿಯಲು ಬಂದ ಆರ್​ಜಿವಿ; ಅಣ್ಣಾವ್ರ ಹೀಗಳೆದ ನಿರ್ದೇಶಕ

ಸಿನಿಮಾ ರಿಮೇಕ್ ಮಾಡಿದ್ದ ಬಚ್ಚನ್

1978ರಲ್ಲಿ ಬಂದ ರಾಜ್​ಕುಮಾರ್ ನಟನೆಯ ‘ಶಂಕರ್ ಗುರು’ ಚಿತ್ರ ಹಿಟ್ ಆಯಿತು. ವಿ. ಸೋಮಶೇಖರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದರು. ಈ ಸಿನಿಮಾ ತೆಲುಗು, ತಮಿಳು ಹಾಗೂ ಹಿಂದಿಗೆ ರಿಮೇಕ್ ಆಯಿತು. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಅವರು ಈ ಚಿತ್ರವನ್ನು ಮಾಡಿದ್ದರು.

ಸದ್ಯ ಆರ್​ಜಿವಿ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅವರ ಅಲ್ಪಜ್ಞಾನದ ಹೇಳಿಕೆಯನ್ನು ಎಲ್ಲರೂ ಖಂಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:23 am, Mon, 9 June 25

ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ