AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್ ಹಾಸನ್ ಬಳಿಕ ಕನ್ನಡಕ್ಕೆ ಮಸಿ ಬಳಿಯಲು ಬಂದ ಆರ್​ಜಿವಿ; ಅಣ್ಣಾವ್ರ ಹೀಗಳೆದ ನಿರ್ದೇಶಕ

ರಾಮ್ ಗೋಪಾಲ್ ವರ್ಮಾ ಅವರು ಸದಾ ವಿವಾದದ ಮೂಲಕ ಸುದ್ದಿ ಆಗುತ್ತಾರೆ. ಇತ್ತೀಚೆಗೆ ಅವರು ಅಮಿತಾಭ್ ಬಚ್ಚನ್ ಸಿನಿಮಾಗಳನ್ನು ರಿಮೇಕ್ ಮೂಲಕ ರಾಜ್ ಕುಮಾರ್ ಅವರು ಖ್ಯಾತಿ ಪಡೆದರು ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ಅವರ ಈ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಮಲ್ ಹಾಸನ್ ಬಳಿಕ ಕನ್ನಡಕ್ಕೆ ಮಸಿ ಬಳಿಯಲು ಬಂದ ಆರ್​ಜಿವಿ; ಅಣ್ಣಾವ್ರ ಹೀಗಳೆದ ನಿರ್ದೇಶಕ
ರಾಜ್​ಕುಮಾರ್-ಆರ್​ಜಿವಿ
ರಾಜೇಶ್ ದುಗ್ಗುಮನೆ
|

Updated on: Jun 07, 2025 | 10:39 AM

Share

ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಇತ್ತೀಚೆಗೆ ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿದ್ದರು. ‘ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಥಗ್​ ಲೈಫ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಅಂತ ಬೆದರಿಕೆ ಹಾಕುವುದು ಹೊಸ ಥರದ ಗೂಂಡಾಗಿರಿ’ ಎಂದು ರಾಮ್ ಗೋಪಾಲ್ ಹೇಳಿ ಕನ್ನಡಿಗರ ಕೋಪಕ್ಕೆ ಕಾರಣ ಆಗಿದ್ದರು. ಈಗ ಅವರು ಅಮಿತಾಭ್ ಬಚ್ಚನ್ ಹೊಗಳುವ ಭರದಲ್ಲಿ ಅಣ್ಣಾವ್ರನ್ನು ಹೀಗಳೆದಿದ್ದಾರೆ. ಇದನ್ನು ಸಹಿಸೋಕೆ ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದಾರೆ.

ರಾಮ್ ಗೋಪಾಲ್ ವರ್ಮಾ ನಿರ್ದೇಶಕ. ಆದರೆ, ಅವರು ನಿರ್ದೇಶನದ ಮೂಲಕ ಸುದ್ದಿ ಆಗುವುದು ಬಿಟ್ಟು ಅವರು ಸದಾ ವಿವಾದದ ಮೂಲಕ ಸುದ್ದಿ ಆಗುತ್ತಾರೆ. ವಿವಾದ ಮಾಡಿಕೊಳ್ಳಲು ಯಾವ ವಿಚಾರ ಸಿಗುತ್ತೆ ಎಂದು ನೋಡುತ್ತಾರೆ. ಇಷ್ಟೇ ಅಲ್ಲ, ತಮಗೆ ಸಂಬಂಧ ಇಲ್ಲದ ವಿಚಾರದಲ್ಲಿ ಕಡ್ಡಿ ಆಡಿಸಿ ಖುಷಿ ಪಡೆಯುತ್ತಾರೆ. ಈಗ ಅವರು ‘ಅಮಿತಾಭ್ ಬಚ್ಚನ್ ಅವರ ಚಿತ್ರಗಳನ್ನು ರಿಮೇಕ್ ಮಾಡಿ ರಾಜ್​ಕುಮಾರ್ ಯಶಸ್ಸು ಕಂಡರು’ ಎಂದು ಹೇಳಿ ಸುದ್ದಿ ಆಗಿದ್ದಾರೆ.

‘70 ಮತ್ತು 80ರ ದಶಕಗಳಲ್ಲಿ ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ರೀಮೇಕ್ ಮಾಡುವ ಮೂಲಕ ಅನೇಕರು ಖ್ಯಾತಿ ಪಡೆದರು. ರಜನಿಕಾಂತ್, ಚಿರಂಜೀವಿ, ಎನ್ ಟಿ ರಾಮರಾವ್ ಮತ್ತು ರಾಜ್‌ಕುಮಾರ್ ಅವರಂತಹ ನಟರು ಈ ರಿಮೇಕ್‌ಗಳ ಮೂಲಕ ಭಾರಿ ಜನಪ್ರಿಯತೆಯನ್ನು ಗಳಿಸಿದರು. 90 ರ ದಶಕದಲ್ಲಿ ಬಚ್ಚನ್ ಐದು ವರ್ಷಗಳ ವಿರಾಮ ತೆಗೆದುಕೊಂಡರು. ಈ ವೇಳೆ ಬಾಲಿವುಡ್ ನಿರ್ದೇಶಕರು ಕೂಡ ಜಾಗತಿಕವಾಗಿ ಹೆಚ್ಚು ಪ್ರಭಾವಿತರಾದರು. ಆದರೆ ದಕ್ಷಿಣದ ಸಿನಿಮಾ ನಿರ್ದೇಶಕರು ಮಾತ್ರ ಬಚ್ಚನ್ ಶೈಲಿಯಾದ ಮಾಸ್ ಮಸಾಲಾ ರೀತಿಯಲ್ಲಿ ಕಥೆ ಹೇಳುವುದನ್ನ ಮುಂದುವರಿಸಿದರು’ ಎಂದು ಆರ್​ಜಿವಿ ಹೇಳಿದ್ದಾರೆ.

ಇದನ್ನೂ ಓದಿ
Image
ಕಚೇರಿಯಲ್ಲಿರುವ ಸಮಯವೂ ನಿಮ್ಮದೇ, ಎಂಜಾಯ್ ಮಾಡಿ; ಜಯಂತ್ ಕಾಯ್ಕಿಣಿ
Image
‘ಥಗ್ ಲೈಫ್’ ಸೋಲಿನಿಂದ ರಾಮ್ ಚರಣ್ ಚಿತ್ರಕ್ಕೂ ಶುರವಾಗಿದೆ ಭಯ; ಏನಿದು ನಂಟು?
Image
ಒಂದಂಕಿಗೆ ಬಂತು ಥಗ್ ಲೈಫ್ ಕಲೆಕ್ಷನ್; ಕಮಲ್ ಚಿತ್ರಕ್ಕೆ ಕುಂಟೋಂದೋಂದೆ ಆಯ್ಕ
Image
ಹಿತಾಳು ಅಂಬಿಕಾ ಮಗಳು ಅನ್ನೋದು ದುರ್ಗಾಗೆ ತಿಳಿದೇ ಹೋಯ್ತು

ಇದನ್ನೂ ಓದಿ: ಹುಡುಗಿಯರ ಖಾಸಗಿ ಭಾಗಕ್ಕೆ ಮಾರುಹೋದ ಆರ್​ಜಿವಿ; ನಿರ್ದೇಶಕನ ಹೇಳಿಕೆಗೆ ತೀವ್ರ ಟೀಕೆ

ಸದ್ಯ ರಾಮ್ ಗೋಪಾಲ್ ವರ್ಮಾ ನೀಡಿರುವ ಹೇಳಿಕೆಯ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಅವರು ಈ ರೀತಿಯಲ್ಲಿ ಹೇಳಿಕೆ ನೀಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಏಕೆಂದರೆ ರಾಜ್​ಕುಮಾರ್ ಅವರು ಸಾಕಷ್ಟು ಪೌರಾಣಿಕ ಪಾತ್ರಗಳನ್ನು ಮಾಡಿದ್ದಾರೆ. ಇಲ್ಲಿನ ಮಣ್ಣಿನ ಕಥೆಯನ್ನು ಜನರ ಎದುರು ಇಟ್ಟಿದ್ದಾರೆ. ಈ ಕಾರಣಕ್ಕೆ ಅವರು ಎಲ್ಲರಿಗೂ ಇಷ್ಟ ಆದರೇ ಹೊರತು, ರಿಮೇಕ್ ಮಾಡಿ ಫೇಮಸ್ ಆದರು ಎಂಬುದರಲ್ಲಿ ಅರ್ಥವಿಲ್ಲ ಎಂದು ಅನೇಕರು ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ