ಒಂದಂಕಿಗೆ ಬಂತು ‘ಥಗ್ ಲೈಫ್’ ಕಲೆಕ್ಷನ್; ಕಮಲ್ ಚಿತ್ರಕ್ಕೆ ಕುಂಟೋಂದೋಂದೆ ಆಯ್ಕೆ
Thug Life Movie Collection: ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರವು ಕನ್ನಡದ ವಿರುದ್ಧದ ಹೇಳಿಕೆಗಳಿಂದಾಗಿ ತೀವ್ರ ವಿರೋಧ ಎದುರಿಸುತ್ತಿದೆ. ಈ ಸಿನಿಮಾ ನಿರೀಕ್ಷಿತ ಯಶಸ್ಸನ್ನು ಪಡೆಯದೆ, ಮೊದಲ ಎರಡು ದಿನಗಳಲ್ಲಿ ಕೇವಲ 23 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸಿದೆ. ಕನ್ನಡಿಗರ ಆಕ್ರೋಶ ಮತ್ತು ನಕಾರಾತ್ಮಕ ವಿಮರ್ಶೆಗಳು ಚಿತ್ರದ ಗಳಿಕೆಯ ಮೇಲೆ ನೇರ ಪರಿಣಾಮ ಬೀರಿವೆ.

ಕನ್ನಡಿಗರ ವಿರೋಧ ಕಟ್ಟಿಕೊಂಡು ‘ಥಗ್ ಲೈಫ್’ ಚಿತ್ರವನ್ನು (Thug Life Movie) ರಿಲೀಸ್ ಮಾಡುತ್ತೇನೆ ಎಂದು ಹೊರಟಿದ್ದ ಕಮಲ್ ಹಾಸನ್ಗೆ ತೀವ್ರ ಮುಖಭಂಗವಾಗಿದೆ. ‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂದು ಮಾತನಾಡುವ ಮೂಲಕ ಅವರು ನಮ್ಮ ರಾಜ್ಯದವರ ವಿರೋಧ ಕಟ್ಟಿಕೊಂಡರು. ಈ ವಿಚಾರಕ್ಕೆ ಸಂಬಂಧಿಸಿ ಅವರು ಯಾವುದೇ ಕ್ಷಮೆ ಕೂಡ ಕೇಳಿಲ್ಲ. ಈಗ ಅವರ ಸಿನಿಮಾದ ಹಣೆಬರಹವನ್ನು ತಮಿಳಿಗರು ಬರೆದಿದ್ದಾರೆ. ಈ ಚಿತ್ರ ಎರಡೇ ದಿನಕ್ಕೆ ಒಂದಂಕಿ ಕಲೆಕ್ಷನ್ ಮಾಡಿದೆ.
‘ಥಗ್ ಲೈಫ್’ ಸಿನಿಮಾ ಮೊದಲ ದಿನ ಕೇವಲ 15.5 ಕೋಟಿ ರೂಪಾಯಿ ಗಳಿಕೆ ಮಾಡಿತು. ಚಿತ್ರಕ್ಕೆ ಸಿಕ್ಕ ನೆಗೆಟಿವ್ ವಿಮರ್ಶೆಗಳಿಂದಲೇ ಸಿನಿಮಾದ ಗಳಿಕೆ ಕುಗ್ಗಿತು. ಆ ಬಳಿಕ ಶುಕ್ರವಾರ (ಜೂನ್ 6) ಸಿನಿಮಾದ ಕಲೆಕ್ಷನ್ನಲ್ಲಿ ಏರಿಕೆ ಕಾಣಬಹುದು ಎಂದು ಫ್ಯಾನ್ಸ್ ಊಹಿಸಿದ್ದರು. ಗಳಿಕೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಈ ಚಿತ್ರ ಎರಡನೇ ದಿನ ಕೇವಲ 7.50 ಕೋಟಿ ರೂಪಾಯಿ ಅಷ್ಟೇ ಗಳಿಸಲು ಸಾಧ್ಯವಾಗಿದೆ. ಈ ಮೂಲಕ ಚಿತ್ರದ ಗಳಿಕೆ ಎರಡು ದಿನಕ್ಕೆ 23 ಕೋಟಿ ರೂಪಾಯಿ ಆಗಿದೆ.
‘ಥಗ್ ಲೈಫ್’ ಸಿನಿಮಾದ ಗಳಿಕೆಗೆ ಹೊಡೆತ ಬೀಳಲು ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗದೇ ಇರುವುದು ಕೂಡ ಒಂದು ಪ್ರಮುಖ ಕಾರಣ. ಸಾಮಾನ್ಯವಾಗಿ ತಮಿಳು ಸಿನಿಮಾಗಳು ಕರ್ನಾಕಟದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಉತ್ತಮ ಪ್ರದರ್ಶನ ಕಾಣುತ್ತವೆ. ರಜನಿಕಾಂತ್ ನಟನೆಯ ‘ಜೈಲರ್’ ಹಾಗೂ ಕಮಲ್ ಹಾಸನ್ ಅವರೇ ನಟಿಸಿದ್ದ ‘ವಿಕ್ರಮ್’ ಇದಕ್ಕೆ ಒಳ್ಳೆಯ ಉದಾಹರಣೆ. ಈ ಎರಡೂ ತಮಿಳು ಚಿತ್ರಗಳು ಬೆಂಗಳೂರಿನಲ್ಲಿ ಭರ್ಜರಿ ಗಳಿಕೆ ಮಾಡಿದ್ದವು. ಆದರೆ, ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದಕ್ಕೆ ಕಮಲ್ ಹಾಸನ್ಗೆ ‘ಥಗ್ ಲೈಫ್’ ಚಿತ್ರವನ್ನು ಬೆಂಗಳೂರಿನಲ್ಲಿ ರಿಲೀಸ್ ಮಾಡಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ‘ಅತೀ ಕೆಟ್ಟ ಸಿನಿಮಾ’; ಕನ್ನಡಿಗರ ವಿರೋಧ ಕಟ್ಟಿಕೊಂಡ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ
ಸದ್ಯ ಪ್ರಕರಣ ಕೋರ್ಟ್ನಲ್ಲಿ ಇದೆ. ಜೂನ್ 10ರಂದು ಮುಂದಿನ ವಿಚಾರಣೆ ನಡೆಯಲಿದೆ. ಆದರೆ, ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆದರೂ ಈಗಿರುವ ವಿಮರ್ಶೆಯಿಂದ ಯಾರೊಬ್ಬರೂ ಸಿನಿಮಾ ನೋಡುವ ಸಾಹಸಕ್ಕೆ ಮುಂದಾಗೋದಿಲ್ಲ. ಹೀಗಾಗಿ, ಈ ಚಿತ್ರವನ್ನು ಕರ್ನಾಟಕದ ಮಂದಿ ನೋಡುವುದು ಅನುಮಾನವೇ. ಅನೇಕರು ಇದೇ ವಿಚಾರ ಇಟ್ಟುಕೊಂಡು ಮೀಮ್ ಮಾಡಿದ್ದಾರೆ. ‘ಕನ್ನಡಿಗರೇ ನೀವು ಈ ಸಿನಿಮಾ ನೋಡದೇ ಬವಾಚ್ ಆದಿರಿ’ ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Sat, 7 June 25








