AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಚೇರಿಯಲ್ಲಿರುವ ಸಮಯವೂ ನಿಮ್ಮದೇ, ಎಂಜಾಯ್ ಮಾಡಿ; ಜಯಂತ್ ಕಾಯ್ಕಿಣಿ

ಜಯಂತ್ ಕಾಯ್ಕಿಣಿ ಅವರು ಕೆಲಸದ ಸಮಯವನ್ನು ಸಹ ಆನಂದಿಸಬೇಕೆಂದು ಸಲಹೆ ನೀಡುತ್ತಾರೆ. ಕಚೇರಿಯ ಸಮಯವನ್ನು ನಮ್ಮದಲ್ಲ ಎಂದು ಭಾವಿಸುವುದು ತಪ್ಪು ಎನ್ನುತ್ತಾರೆ. 24 ಗಂಟೆಗಳೂ ನಮ್ಮದೇ ಎಂದು ಭಾವಿಸಿ ಜೀವನವನ್ನು ಆನಂದಿಸಬೇಕು ಎಂಬುದು ಅವರ ಅಭಿಪ್ರಾಯ. ವೀಕೆಂಡ್‌ಗೆ ಮಾತ್ರ ಜೀವನವನ್ನು ಸೀಮಿತಗೊಳಿಸಬಾರದು ಎಂದು ಅವರು ಒತ್ತಿ ಹೇಳುತ್ತಾರೆ.

ಕಚೇರಿಯಲ್ಲಿರುವ ಸಮಯವೂ ನಿಮ್ಮದೇ, ಎಂಜಾಯ್ ಮಾಡಿ; ಜಯಂತ್ ಕಾಯ್ಕಿಣಿ
ಜಯಂತ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Jun 07, 2025 | 7:42 AM

Share

ಸಾಮಾನ್ಯವಾಗಿ ಕಚೇರಿಯಲ್ಲಿ ಇರುವ ಸಮಯವು ನಮ್ಮದಲ್ಲ, ನಮ್ಮವರ ಜೊತೆ ಅಥವಾ ಮನೆಯಲ್ಲಿ ಕಳೆಯುವ ಸಮಯ ಮಾತ್ರ ನಮ್ಮದು ಎಂದು ಅನೇಕರು ಭಾವಿಸಿರುತ್ತಾರೆ. ಆದರೆ, ಈ ಭಾವನೆಯೇ ತಪ್ಪು ಎಂದು ಗೀತ ಸಾಹಿತಿ ಜಯಂತ್ ಕಾಯ್ಕಿಣಿ (Jayant Kaykini) ಅವರು ಹೇಳುತ್ತಾರೆ. ಅವರು ಈ ಮೊದಲು ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದರು. ಅನೇಕರು ಇದನ್ನು ಒಪ್ಪುತ್ತಾರೆ. ಈ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ಅನೇಕರು, ಅದರಲ್ಲೂ ಕೆಲಸ ಮಾಡುವವರು ಜೀವನವನ್ನು ಎಂಜಾಯ್ ಮಾಡೋದು ವೀಕೆಂಡ್​ನಲ್ಲಿ ಮಾತ್ರ. ಆ ರೀತಿ ಆಗಬಾರದು ಎಂಬುದು ಜಯಂತ್ ಕಾಯ್ಕಿಣಿ ಅವರ ಅಭಿಪ್ರಾಯ. ಕಚೇರಿಯಲ್ಲಿ  ಇರಲಿ ಅಥವಾ ಮನೆಯಲ್ಲಿ ಇರಲಿ ಅಥವಾ ಯಾರದ್ದೇ ಜೊತೆ ಇರಲಿ ಜೀವನದಲ್ಲಿ ಖುಷಿ ಕಂಡುಕೊಳ್ಳಬೇಕು ಎನ್ನುತ್ತಾರೆ ಅವರು.

ಇದನ್ನೂ ಓದಿ
Image
‘ಥಗ್ ಲೈಫ್’ ಸೋಲಿನಿಂದ ರಾಮ್ ಚರಣ್ ಚಿತ್ರಕ್ಕೂ ಶುರವಾಗಿದೆ ಭಯ; ಏನಿದು ನಂಟು?
Image
ಒಂದಂಕಿಗೆ ಬಂತು ಥಗ್ ಲೈಫ್ ಕಲೆಕ್ಷನ್; ಕಮಲ್ ಚಿತ್ರಕ್ಕೆ ಕುಂಟೋಂದೋಂದೆ ಆಯ್ಕ
Image
ಹಿತಾಳು ಅಂಬಿಕಾ ಮಗಳು ಅನ್ನೋದು ದುರ್ಗಾಗೆ ತಿಳಿದೇ ಹೋಯ್ತು
Image
ಹೊಸ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯಾ; ನೆಗೆಟಿವ್ ಪಾತ್ರ

‘ಮನೆಗೆ ಹೋದಮೇಲೆ ಜೀವನ ಶುರುವಾಗುತ್ತದೆ ಎಂದುಕೊಳ್ಳುತ್ತಾರೆ. ಕಚೇರಿಯಲ್ಲಿರುವ ಸಮಯವೂ ನಿಮ್ಮದೇ. ಅದು ನಿಮ್ಮದೇ ಜೀವನ. ಅದನ್ನೂ ಎಂಜಾಯ್ ಮಾಡಿ. ಯಾರದ್ದೋ ಆಫೀಸ್, ಸಂಬಳ ಕೊಡ್ತಿದ್ದಾರೆ ಎಂದು ಅಂದುಕೊಳ್ಳಬೇಡಿ. 24 ಗಂಟೆ ಕೂಡ ನಿಮ್ಮದೇ ಎಂದು ಬದುಕಬೇಕು’ ಎಂದು ಜಯಂತ್ ಕಾಯ್ಕಿಣಿ ಅವರು ಹೇಳಿದ್ದರು. ಇದನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಅವರ ಮಾತನ್ನು ಅಳವಡಿಸಿಕೊಳ್ಳಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಜಯಂತ್ ಕಾಯ್ಕಿಣಿ ಅವರು 1955ರ ಜನವರಿ 24ರಂದು ಜನಿಸಿದರು. ಅವರಿಗೆ ಈಗ 70 ವರ್ಷ ವಯಸ್ಸು. ಅವರು ಹುಟ್ಟಿದ್ದು ಗೋಕರ್ಣದಲ್ಲಿ. ಜಯಂತ್ ಅವರು, ‘ರಂಗದಿಂದೊಂದಷ್ಟು ದೂರ’, ‘ಕೋಠೀತೀರ್ಥ’ ರೀತಿಯ ಗೀತೆಗಳನ್ನು ಬರೆದಿದ್ದಾರೆ. ಅವರು ಬರೆದ ‘ತೀರ್ಥದಷ್ಟೇ ಬಾಗಿಲು’, ‘ತೂಫಾನ್ ಮೇಲ್’ ರೀತಿಯ ಸಿನಿಮಾಗಳನ್ನು ಅವರು ನೀಡಿದರು. ಅವರು ನಾಟಕಗಳನ್ನೂ ಬರೆದಿದ್ದಾರೆ.

ಇದನ್ನೂ ಓದಿ: ‘ಥಗ್ ಲೈಫ್’ ಸೋಲಿನಿಂದ ರಾಮ್ ಚರಣ್ ಚಿತ್ರಕ್ಕೂ ಶುರವಾಗಿದೆ ಭಯ; ಏನಿದು ನಂಟು?

ಅವರು ಬರೆದ ಹಾಡುಗಳು ಅನೇಕರಿಗೆ ಇಷ್ಟ. ಮೆಲೋಡಿ ಹಾಡುಗಳು ಜಯಂತ್ ಕಾಯ್ಕಿಣಿ ಲೇಖನಿಯಿಂದ ಮೂಡಿ ಬಂದಿವೆ. ‘ಈ ಸಂಜೆ ಯಾಕಾಗಿದೆ..’ ರೀತಿಯ ಹಾಡಿನಿಂದ ಹಿಡಿದು, ‘ಅನಿಸುತಿದೆ ಯಾಕೋ ಇಂದು..’ ‘ಕುಣಿದು ಕುಣಿದು ಬಾರೇ..’ ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳನ್ನು ಅವರು ನೀಡಿದ್ದಾರೆ. ಅವರು ಇತ್ತೀಚೆಗೆ ಹಾಡುಗಳ ಬರವಣಿಗೆ ಕಡಿಮೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:40 am, Sat, 7 June 25