AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಹಲವಾರು ಸಿನಿಮಾಗಳು: ಆಯ್ಕೆ ನಿಮ್ಮದು

OTT Release this week: ಈ ವಾರ ಒಟಿಟಿಗೆ ಹಲವಾರು ಸಿನಿಮಾಗಳು, ವೆಬ್ ಸರಣಿಗಳು ಬಂದಿವೆ. ಅದರಲ್ಲೂ ಈ ವಾರ ಹಾಲಿವುಡ್​​ನ ಕೆಲ ಪ್ರಮುಖ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಕನ್ನಡದ ಎರಡು ಸಿನಿಮಾ ಸೇರಿದಂತೆ ಇತರೆ ಭಾರತೀಯ ಭಾಷೆಗಳ ಹಲವಾರು ಸಿನಿಮಾಗಳು ಈ ವಾರ ಒಟಿಟಿಗೆ ಲಗ್ಗೆ ಇಟ್ಟಿವೆ, ಈ ವಾರ ಒಟಿಟಿ ಪ್ರಿಯರಿಗೆ ವೀಕ್ಷಿಸಲು ಸಾಕಷ್ಟು ಆಯ್ಕೆಗಳಿವೆ. ನಿಮ್ಮ ಆಯ್ಕೆ ಯಾವುದು?

ಮಂಜುನಾಥ ಸಿ.
|

Updated on:Feb 28, 2026 | 6:10 PM

Share
ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ, ಜಯದೀಪ್ ಅಲಾವತ್ ಮತ್ತು ದಿವಂಗತ ಧರ್ಮೇಂದ್ರ ಅವರು ನಟಿಸಿರುವ ಯುದ್ಧದ ಕುರಿತಾದ ಸಿನಿಮಾ ‘ಇಕ್ಕೀಸ್’ ಚಿತ್ರಮಂದಿರಗಳಲ್ಲಿ ಸಖತ್ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು ಅಮೆಜಾನ್ ಪ್ರೈಂನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಈ ಹಿಂದೆ ರೆಂಟ್​​ಗೆ ಮಾತ್ರವೇ ಲಭ್ಯವಿತ್ತು.

1 / 6
ಕನ್ನಡದ ಪ್ರತಿಭಾವಂತ ನಟ ನವೀನ್ ಶಂಕರ್ ನಟನೆಯ ‘ಕ್ಷೇತ್ರಪತಿ’ ಸಿನಿಮಾ ಕೊನೆಗೂ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಸಾಕಷ್ಟು ಮೆಚ್ಚುಗೆ ಗಳಿಸಿದ್ದ ಈ ರೈತಪರ ಸಿನಿಮಾ, ಮೂರು ವರ್ಷಗಳ ಬಳಿಕ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

2 / 6
5 ವರ್ಷಗಳ ಹಿಂದೆ ಸಾಕಷ್ಟು ಸದ್ದು ಮಾಡಿದ್ದ ಗಣೇಶ್ ಹೆಗಡೆ ನಿರ್ದೇಶನದ ‘ನೀಲಿ ಹಕ್ಕಿ’ ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಸಿದ್ಧ ಎಂಬ ಬಾಲಕನ ಕತೆ ಹೊಂದಿರುವ ಈ ಸಿನಿಮಾವನ್ನು ಸನ್ ನೆಕ್ಸ್ಟ್​​ನಲ್ಲಿ ಈ ವಾರದಿಂದ ವೀಕ್ಷಿಸಬಹುದಾಗಿದೆ.

3 / 6
ಲಿಯೊನಾರ್ಡೊ ಡಿಕ್ಯಾಪ್ರಿಯೊ ನಟಿಸಿರುವ ಹಲವು ಆಸ್ಕರ್ ನಾಮಿನೇಷನ್ ಪಡೆದಿರುವ ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾ ಈ ವಾರ ಭಾರತದ ಒಟಿಟಿಗೆ ಬಂದಿದೆ. ಈ ಹಿಂದೆಯೇ ವಿದೇಶದ ಕೆಲವು ಒಟಿಟಿಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈ ವಾರದಿಂದ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

4 / 6
1999 ರ ಸಮಯದಲ್ಲಿ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಗಡಿಯಲ್ಲಿ ನಡೆದ ನಿಜ ಘಟನೆಗಳನ್ನು ಆಧರಿಸಿದ ಕ್ರೈಂ ಥ್ರಿಲ್ಲರ್ ‘ತಡೆಯುಮ್’. ಸಮುದ್ರಕಿಣಿ ಪೊಲೀಸ್ ತನಿಖಾಧಿಕಾರಿಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿದ್ದು ಜೀ 5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

5 / 6
ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿರುವ ಹಾಲಿವುಡ್ ಆಕ್ಷನ್ ಸಿನಿಮಾ ‘ದಿ ಬ್ಲಫ್’ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿದೆ. 19ನೇ ಶತಮಾನದ ಆರಂಭದಲ್ಲಿ ನಡೆಯುವ ಸಮುದ್ರ ದರೋಡೆಕೋರರ ಕತೆಯನ್ನು ಸಿನಿಮಾ ಒಳಗೊಂಡಿದ್ದು, ಪ್ರಿಯಾಂಕಾ ಚೋಪ್ರಾ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

6 / 6

Published On - 4:23 pm, Sat, 28 February 26

Follow Us
ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು

ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?

ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ

ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ

ರಾಗಿಣಿ ಪ್ರಜ್ವಲ್ ಡ್ಯಾನ್ಸ್​​​ಗೆ ಅವರೇ ಸರಿಸಾಟಿ

ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ

ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಕುಂಭ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?

ಮಾ.03 ಚಂದ್ರಗ್ರಹಣ; ಮಕರ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?

ದರ್ಶನ್ ವಿರುದ್ದ ಸುಳ್ಳು ದಾಖಲೆ ಸೃಷ್ಟಿಸಿದ ಆರೋಪ; ಬೃಹತ್ ಪ್ರತಿಭಟನೆ

ಅಕ್ರಮ ರೆಸಾರ್ಟ್​​ ಮಾಲೀಕರಿಗೆ ಭರ್ಜರಿ ಶಾಕ್​​ ಕೊಟ್ಟ ಕೊಪ್ಪಳ ಜಿಲ್ಲಾಡಳಿತ