ಅಖಿಲ್ ಅಕ್ಕಿನೇನಿ ಮತ್ತು ಝೈನಬ್ ರೌಜಿ ವಿವಾಹ; ಇಲ್ಲಿವೆ ಸುಂದರ ಫೋಟೋಗಳು
ಟಾಲಿವುಡ್ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ವಿವಾಹ ಇತ್ತೀಚೆಗೆ ನಡೆಯಿತು. ಕಳೆದ ವರ್ಷ ಅವರ ಹಿರಿಯ ಮಗ ನಾಗ ಚೈತನ್ಯ ವಿವಾಹ ನೆರವೇರಿತ್ತು. ಈಗ ಸಣ್ಣ ಮಗನ ವಿವಾಹವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿದೆ.
Updated on: Jun 07, 2025 | 8:38 AM

ಅಕ್ಕಿನೇನಿ ನಾಗಾರ್ಜುನ ಅವರ ಮನೆಯಲ್ಲಿ ಮದುವೆ ಸಂಭ್ರಮ ನೆರವೇರಿದೆ. ಕಳೆದ ವರ್ಷಾಂತ್ಯಕ್ಕೆ ನಾಗ ಚೈತನ್ಯ ಹಾಗೂ ಶೋಭಿತಾ ವಿವಾಹ ನೆರವೇರಿತ್ತು. ಈಗ ನಾಗ ಚೈತನ್ಯ ಅವರ ಸಹೋದರ ಅಖಿಲ್ ಅಕ್ಕಿನೇನಿ ಮದುವೆ ಕಾರ್ಯ ನೆರವೇರಿದೆ.

ಅಖಿಲ್ ಹಾಗೂ ಝೈನಬ್ ರೌಜಿ ವಿವಾಹ ಸಮಾರಂಭ ಜೂನ್ 6ರ ಬೆಳಿಗ್ಗೆ 3 ಗಂಟೆಗೆ ನಡೆದಿದೆ ಅನ್ನೋದು ವಿಶೇಷ. ಈ ಸಂದರ್ಭದಲ್ಲಿ ಮುಹೂರ್ತ ಇದ್ದಿದ್ದರಿಂದ ಅಷ್ಟು ಬೆಳಿಗ್ಗೆ ಮದುವೆ ಮಾಡಬೇಕಾದ ಅನಿವಾರ್ಯತೆ ಬಂತು. ಸರಳವಾಗಿ ಈ ವಿವಾಹ ನೆರವೇರಿದೆ.

ಹೈದರಾಬಾದ್ನ ಜೂಬ್ಲಿ ಹಿಲ್ಸ್ನಲ್ಲಿ ನಾಗಾರ್ಜುನ ಅವರು ಮನೆ ಹೊಂದಿದ್ದಾರೆ. ಈ ನಿವಾಸದಲ್ಲಿಯೇ ಅಖಿಲ್ ಹಾಗೂ ಝೈನಬ್ ರೌಜಿ ಹಿಂದೂ ಸಂಪ್ರದಾಯದಂತೆ ವಿವಾಹ ಆಗಿದ್ದಾರೆ. ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ನೆರವೇರಿದೆ.

ಅಖಿಲ್ ಮತ್ತು ಝೈನಬ್ ರೌಜಿ ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು. ನಾಗ ಚೈತನ್ಯ ವಿವಾಹಕ್ಕೂ ಮೊದಲು ಅಂದರೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಆಗಿದ್ದಾರೆ.

ವಿವಹಾ ಸರಳವಾಗಿ ನಡೆದರೂ ಆರತಕ್ಷತೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ನಿರ್ಧರಿಸಲಾಗಿದೆ. ಈ ವೇಳೆ ರಾಜಕೀಯ ರಂಗದವರು ಹಾಗೂ ಚಿತ್ರರಂಗದವರು ಆಗಮಿಸುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



