‘ಸರಿಗಮಪ’ದಲ್ಲಿ ಇತಿಹಾಸ ನಿರ್ಮಿಸಿದ ಮಹಿಳಾ ಸ್ಪರ್ಧಿಗಳು; ವಿನ್ನರ್ ಯಾರು?
Saregamapa Winner: ‘ಜೀ ಕನ್ನಡದ ಸರಿಗಮಪ 21ನೇ ಸೀಸನ್‌ನ ಫೈನಲ್ ಶೂಟಿಂಗ್ ಮುಗಿದಿದ್ದು, ಜೂನ್ 7ರಂದು ಟಿವಿಯಲ್ಲಿ ಪ್ರಸಾರ ಆಗಲಿದೆ. ಅದಕ್ಕೂ ಮೊದಲು ಜೀ5 ಒಟಿಟಿಯಲ್ಲಿ ಫೈನಲ್ ಪ್ರಸಾರವಾಗಿದೆ. ವಿಶೇಷವೆಂದರೆ, ಟಾಪ್ 3 ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟಾಪ್ 3ನಲ್ಲಿ ಮೂವರು ಮಹಿಳಾ ಸ್ಪರ್ಧಿಗಳು ಸ್ಥಾನ ಪಡೆದಿದ್ದಾರೆ.

‘ಸರಿಗಮಪ’ ಫಿನಾಲೆ (Saregamapa Finale) ಜೀ ಕನ್ನಡ ವಾಹಿನಿಯಲ್ಲಿ ಜೂನ್ 7ರಂದು ಪ್ರಸಾರ ಆಗಲಿದೆ. ಅದಕ್ಕೂ ಮೊದಲೇ ಶೂಟ್ ನಡೆದಿದ್ದು, ಜೀ5 ಒಟಿಟಿಯಲ್ಲಿ ಪ್ರಸಾರ ಕಂಡಿದೆ. ಈ ವೇಳೆ ಟಾಪ್3ಗೆ ಆಯ್ಕೆ ಆದ ಎಲ್ಲರೂ ಮಹಿಳಾ ಸ್ಪರ್ಧಿಗಳೇ ಅನ್ನೋದು ವಿಶೇಷ. ಸರಿಗಮಪ ವಿನ್ನರ್ ಯಾರು ಎಂಬುದು ಕೂಡ ಘೋಷಣೆ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಟಾಪ್ 3ನಲ್ಲಿ ಮಹಿಳಾ ಸ್ಪರ್ಧಿಗಳು ಬಂದಿದ್ದು ಇದೇ ಮೊದಲು.
ಸಾಮಾನ್ಯವಾಗಿ ರಿಯಾಲಿಟಿ ಶೋಗಳ ಶೂಟಿಂಗ್ ಕೆಲವು ದಿನ ಮೊದಲೇ ನಡೆದಿರುತ್ತದೆ. ಆ ಬಳಿಕವಷ್ಟೇ ಅದನ್ನು ಪ್ರಸಾರ ಮಾಡಲಾಗುತ್ತದೆ. ಈಗ ‘ಸರಿಗಮಪ 21’ನೇ ಸೀಸನ್ ಕೂಡ ಅದೇ ರೀತಿ ಮಾಡಲಾಗಿದೆ. ಶೂಟ್ ಮಾಡಿದ ಬಳಿಕ ಜೀ 5ನಲ್ಲಿ ಲೈವ್ ಪ್ರಸಾರ ಮಾಡಲಾಗಿದೆ. ಈ ವೇಳೆ ವಿನ್ನರ್ ಯಾರು ಎಂಬುದನ್ನು ರಿವೀಲ್ ಮಾಡಲಾಗಿದೆ.
ವಿವಿಧ ಹಂತಗಳಲ್ಲಿ ‘ಸರಿಗಮಪ’ ಅಂತಿಮ ಸುತ್ತಿಗೆ ಬಂದಿದೆ. ಈ ಮೊದಲು ‘ಟಿಕೆಟ್ ಟು ಫಿನಾಲೆ’ ನಡೆಸಲಾಯಿತು. ಈ ಸುತ್ತಿನಲ್ಲಿ 13 ಸ್ಪರ್ಧಿಗಳು ಭಾಗವಹಿಸಿದ್ದರು. ದ್ಯಾಮೇಶ, ಬಾಳು ಬೆಳಗುಂದಿ, ಭೂಮಿಕಾ, ಮನೋಜ್, ಲಹರಿ, ಕಾರ್ತಿಕ್, ರಶ್ಮಿ ಡಿ, ಸುಧೀಕ್ಷಾ, ಅಮೋಘ ವರ್ಷ, ಆಗಮ ಶಾಸ್ತ್ರೀ, ದೀಪಕ್, ಶಿವಾನಿ ಮತ್ತು ಆರಾಧ್ಯ ರಾವ್ ನಡುವೆ ಹಣಾಹಣಿ ಇತ್ತು. ಈ ವೇಳೆ ಆರಾಧ್ಯಾ ಹಾಗೂ ಶಿವಾನಿ ಅವರಿಗೆ ನೇರವಾಗಿ ಫಿನಾಲೆ ಟಿಕೆಟ್ ಸಿಕ್ಕಿತ್ತು.
ಮೇ 24 ಮತ್ತು 25ರಂದು ಸೆಮಿ ಫೈನಲ್ ನಡೆಯಿತು. ಆಗ ರಶ್ಮಿ, ಬಾಳು ಬೆಳಗುಂದಿ, ದ್ಯಾಮೇಶ್ ಹಾಗೂ ಅಮೋಘ ವರ್ಷಗೆ ಫಿನಾಲೆಗೆ ಏರುವ ಅವಕಾಶ ಪಡೆದರು. ಅಂದರೆ ಫೈನಲ್ನಲ್ಲಿ ರಶ್ಮಿ ಡಿ, ಶಿವಾನಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಇದ್ದರು. ಈಗ ಅಂತಿಮ ಸುತ್ತಿಗೆ ಮೂವರು ಆಯ್ಕೆ ಆಗಿದ್ದರು. ಆ ಮೂವರು ಕೂಡ ಹೆಣ್ಣುಮಕ್ಕಳೇ ಅನ್ನೋದು ವಿಶೇಷ.
ಇದನ್ನೂ ಓದಿ: ‘ಸರಿಗಮಪ’ ಫೈನಲಿಸ್ಟ್ ಇವರೇ ನೋಡಿ; ಫಿನಾಲೆ ಮತ್ತಷ್ಟು ಕಠಿಣ
ಶಿವಾನಿ, ರಶ್ಮಿ ಹಾಗೂ ಆರಾಧ್ಯಾ ರಾವ್ ಟಾಪ್ 3ರಲ್ಲಿ ಇದ್ದರು. ಈ ಪೈಕಿ ಶಿವಾನಿ ವಿನ್ನರ್ ಆಗಿದ್ದಾರೆ. ಆರಾಧ್ಯಾ ರಾವ್ ರನ್ನರ್ ಅಪ್ ಆಗಿದ್ದಾರೆ. ರಶ್ಮಿ ಎರಡನೇ ರನ್ನರ್ ಅಪ್ ಆಗಿದ್ದಾರೆ. ಜೂನ್ 7ರಂದು ಟಿವಿಯಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:10 am, Fri, 6 June 25








