AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನಿಸಿದ ಫ್ಯಾನ್ಸ್

Kamal Haasan: ಕಮಲ್ ಹಾಸನ್ ಅವರ ‘ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಉಂಟಾಗಿರುವ ವಿವಾದದಿಂದಾಗಿ ಅವರ ‘ಥಗ್ ಲೈಫ್’ ಚಿತ್ರದ ಕರ್ನಾಟಕದಲ್ಲಿನ ಬಿಡುಗಡೆ ಅನಿಶ್ಚಿತವಾಗಿದೆ. ತಮಿಳುಗರು ಕಮಲ್ ಅವರನ್ನು ಬೆಂಬಲಿಸುತ್ತಿದ್ದಾರೆ ಮತ್ತು ಕ್ಷಮೆ ಕೇಳುವಂತೆ ಆಗ್ರಹವನ್ನು ತಿರಸ್ಕರಿಸುತ್ತಿದ್ದಾರೆ.

ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನಿಸಿದ ಫ್ಯಾನ್ಸ್
ಕಮಲ್ ಹಾಸನ್
ರಾಜೇಶ್ ದುಗ್ಗುಮನೆ
|

Updated on:Jun 03, 2025 | 8:46 AM

Share

ಕಮಲ್ ಹಾಸನ್ (Kamal Haasan) ಅವರು ತಾವು ನೀಡಿದ ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂಬ ಹೇಳಿಕೆ ಸರಿಯೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು ಕ್ಷಮೆ ಕೇಳುವಂತೆ ಪದೇ ಪದೇ ಆಗ್ರಹಿಸಿದರೂ ಅವರು ಬಗ್ಗುತ್ತಿಲ್ಲ. ಈಗ ಕಮಲ್ ಹಾಸನ್ ಪರ ತಮಿಳಿಗರು ಬ್ಯಾಟ್ ಬೀಸುತ್ತಿದ್ದಾರೆ. ಅವರ ಪರ ತಾವು ಸದಾ ನಿಲ್ಲೋದಾಗಿ ಹೇಳಿರೋ ಇವರು, ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ. ಅಲ್ಲದೆ, ಎಲ್ಲಾ ತಮಿಳಿಗರು ಎಚ್ಚರಿಕೆಯಿಂದ ಓದುವಂತೆ ಪತ್ರದಲ್ಲಿ ಬರೆಯಲಾಗಿದೆ.

ಪತ್ರದಲ್ಲಿ ಏನಿದೆ?

‘ಈ ಪತ್ರವನ್ನು ಎಲ್ಲಾ ತಮಿಳಿಗರು ಎಚ್ಚರಿಕೆಯಿಂದ ಓದಬೇಕು. ಕಮಲ್ ಹಾಸನ್ ಸತ್ಯವನ್ನು ಧೈರ್ಯದಿಂದ ಹೇಳಿದ್ದಾರೆ. ಅವರ ಸಿನಿಮಾ ಕರ್ನಾಟಕದಲ್ಲಿ ನಿಷೇಧಕ್ಕೊಳಗಾಗುವ ಬೆದರಿಕೆ ಇದ್ದರೂ ಕಮಲ್ ಅವರು ಹಿಂದೆ ಸರಿಯಲಿಲ್ಲ ಮತ್ತು ಅವರು ಕನ್ನಡಿಗರಿಗೆ ಕ್ಷಮಿಸಿ ಎಂದು ಕೇಳಲಿಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗದೆ ಇದ್ದರೆ ಅವರು 40ರಿಂದ 70 ಕೋಟಿ ರೂಪಾಯಿ ಕಳೆದುಕೊಳ್ಳಬಹುದು. ಜೊತೆಗೆ ಪರಿಹಾರವನ್ನು ಸಹ ಪಾವತಿಸಬೇಕಾಗಬಹುದು. ಆದರೂ ಕಮಲ್ ತನ್ನ ನಿಲುವನ್ನು ಬಿಟ್ಟಿಲ್ಲ’ ಎಂದು ತಮಿಳಿಗರು ಪತ್ರದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ
Image
‘ನಾನು ಕರ್ನಾಟಕದವನು, ನನ್ನ ಅವ್ವ ಇಲ್ಲೇ ಇರೋದು’: ಇಳಯರಾಜ ಕನ್ನಡ ಪ್ರೇಮ
Image
ಒಟಿಟಿಯಲ್ಲಿ ರಿಲೀಸ್ ಆದ ಈ ಕಾಮಿಡಿ ಚಿತ್ರವನ್ನು ಮಿಸ್ ಮಾಡಲೇಬೇಡಿ
Image
ಹೈ-ಟೀ ಸಮಾರಂಭದಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಅನಂತ್ ನಾಗ್​
Image
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

‘ಕ್ಷಮಿಸಿ ಎಂದು ಹೇಳುವುದು ಕಮಲ್ ವೈಯಕ್ತಿಕವಾಗಿ ಮಾತ್ರ ಕೇಳಿದಂತೆ ಆಗೋದಿಲ್ಲ. ಪ್ರತಿಯೊಬ್ಬ ತಮಿಳಿಗನೂ ಕ್ಷಮೆಯಾಚಿಸಿದಂತೆ ಭಾಸವಾಗುತ್ತಿತ್ತು. ನಾವು ಕ್ಷಮೆ ಕೇಳೋಕೆ ಏನೂ ಇಲ್ಲ. ಇದು ಕೇವಲ ಸಿನಿಮಾ ಬಗ್ಗೆ ಮಾತ್ರವಲ್ಲ. ಇದು ನಮ್ಮ ಹೆಮ್ಮೆ, ಸತ್ಯ ಮತ್ತು ತಮಿಳಿನ ಅಸ್ಮಿತತೆ ಬಗ್ಗೆ’ ಎಂದು ಅವರು ಹೇಳಿದ್ದಾರೆ.]

ಇದನ್ನೂ ಓದಿ: ಕಮಲ್ ಹಾಸನ್ ಕನ್ನಡ ವಿವಾದ: ‘ಥಗ್ ಲೈಫ್’ ಬಿಡುಗಡೆಗೆ ಹೈಕೋರ್ಟ್​ ಮೊರೆ ಹೋದ ನಟ

‘ಚಿತ್ರಮಂದಿರಗಳಲ್ಲಿ ಥಗ್ ಲೈಫ್ ಸಿನಿಮಾ ವೀಕ್ಷಿಸಿ, ಬೆಂಬಲಿಸಿ. ಕಮಲ್ ಹಾಸನ್ ಜೊತೆ ನಿಲ್ಲಿ’ ಎಂದು ತಮಿಳಿಗರು ಬರೆದುಕೊಂಡ ಪತ್ರ ವೈರಲ್ ಆಗಿದೆ. ಸದ್ಯ ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರದ ರಿಲೀಸ್ ವಿಚಾರ ಅನಿಶ್ಚಿತವಾಗಿದೆ. ಕಮಲ್ ಹಾಸನ್ ಕ್ಷಮೆ ಕೇಳಿಲ್ಲ ಎಂದರೆ ಚಿತ್ರ ಬಿಡುಗಡೆ ಆಗೋದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.

ಫಿಲಂ ಚೇಂಬರ್ ನಲ್ಲಿ ಇಂದು ತುರ್ತು ಸಭೆ:

ಕಮಲ್ ಹಾಸನ್ ಮೊಂಡಾಟ ಮುಂದುವರೆದಿರುವ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ತುರ್ತು ಸಭೆ ಕರೆದಿದೆ. ಈ ವೇಳೆ ಕಮಲ್ ಹಾಸನ್ ಅವರ ‘ಥಗ್ ಲೈಫ್’ ರಿಲೀಸ್​ಗೆ ಬ್ರೇಕ್ ಹಾಕೋ ಸಾಧ್ಯತೆ ಹೆಚ್ಚಿದೆ. ಬೆಳಿಗ್ಗೆ 11.30ಕ್ಕೆ ಸಭೆ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:45 am, Tue, 3 June 25