Anant Nag: ಹೈ-ಟೀ ಸಮಾರಂಭದಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಪಡೆದ ನಂತರ, ಹಿರಿಯ ನಟ ಅನಂತ್ ನಾಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ರಾಷ್ಟ್ರಪತಿ ಭವನದಲ್ಲಿ ನಡೆದ ಹೈ ಟೀ ಸಮಾರಂಭದಲ್ಲಿ ಈ ಭೇಟಿ ನಡೆಯಿತು. ಈ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರ ಸಾಧನೆಗೆ ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ನಟ ಅನಂತ್ ನಾಗ್ (Anant Nag) ಅವರಿಗೆ ಇತ್ತೀಚೆಗೆ ಪದ್ಮಭೂಷಣ ನೀಡಿ ಗೌರವಿಸಲಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನಂತ್ ನಾಗ್ ಅವರಿಗೆ ಪದ್ಮಭೂಷಣವನ್ನು ನೀಡಿದರು. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿವೆ. ಈ ಬೆನ್ನಲ್ಲೇ ಅನಂತ್ ನಾಗ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅವರ ಸಾಧನೆಗೆ ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪದ್ಮಭೂಷಣ ಪ್ರಶಸ್ತಿ ಸಮಾರಂಭದ ನಂತರ ರಾಷ್ಟ್ರಪತಿಯವರು ಹೈ ಟೀ ಸಮಾರಂಭ ಆಯೋಜನೆ ಮಾಡಿದ್ದರು. ಅಂದರೆ ಬಂದ ಅತಿಥಿಗಳಿಗೆ ಟೀ ಪಾರ್ಟಿ ಆಯೋಜನೆ ಮಾಡುವುದಕ್ಕೆ ಹೀಗೆ ಹೇಳಲಾಗುತ್ತದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಉಪಸ್ಥಿತರಿದ್ದರು. ಅನಂತ್ ನಾಗ್ ಹಾಗೂ ಮೋದಿ ಪರಸ್ಪರ ಮಾತುಕತೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಫೋಟೋ ಕ್ಲಿಕ್ ಮಾಡಲಾಗಿದೆ. ಅನಂತ್ ನಾಗ್ ಕೈಯನ್ನು ಮೋದಿಯವರು ಹಿಡಿದುಕೊಂಡಿದ್ದನ್ನು ಫೋಟೋದಲ್ಲಿ ಕಾಣಬಹುದು.
ಪದ್ಮಭೂಷಣ ಪ್ರಶಸ್ತಿ ಸಮಾರಂಭದ ನಂತರ ರಾಷ್ಟ್ರಪತಿಯವರು ನೀಡಿದ High-Tea ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಹಿರಿಯ ಕಲಾವಿದರಾದ ಶ್ರೀಅನಂತನಾಗ್ ರವರನ್ನು ಮಾತನಾಡಿಸಿದಾಗ ತೆಗೆದ ಚಿತ್ರ.@narendramodi #anantnag #padmabhushan pic.twitter.com/jRG4ubG3Vo
— Saraswathi Jagirdar 🇮🇳 (@saraswathi1717) June 2, 2025
Shri Anant Nag (Art) was honored with the Padma Bhushan Award 2025 by President Droupadi Murmu.#PadmaAwards #PadmaAwards2025 #PadmaBhushan #PadmaBhushanAwards #AnantNag pic.twitter.com/yB6yl14yPF
— Bhargavi (@IamHCB) May 27, 2025
ಮೇ 27ರಂದು ಅನಂತ್ ನಾಗ್ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಲಾಯಿತು. ಅವರಿಗೆ ಪದ್ಮಭೂಷಣ ಈ ಮೊದಲೇ ಘೋಷಣೆ ಆಗಿತ್ತು. ಅನಂತ್ ನಾಗ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಈ ಗೌರವ ಸಂದಿದೆ. ಅವರಿಗೆ ಪದ್ಮಭೂಷಣ ನೀಡಬೇಕು ಎಂಬುದು ಕನ್ನಡಿಗರ ಹಲವು ವರ್ಷಗಳ ಕನಸಾಗಿತ್ತು. ಆ ಕನಸು ಈಗ ಈಡೇರಿದೆ.
ಇದನ್ನೂ ಓದಿ: ಕನ್ನಡಿಗರ ಬೇಡಿಕೆ ಫಲಿಸಿದ ಕ್ಷಣ; ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಅನಂತ್ ನಾಗ್ ಅವರು 1973ರಲ್ಲಿ ರಿಲೀಸ್ ಆದ ‘ಸಂಕಲ್ಪ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದು ಅವರು ನಟಿಸಿದ ಮೊದಲ ಚಿತ್ರ. 1975ರಲ್ಲಿ ‘ದೇವರ ಕಣ್ಣು’ ಚಿತ್ರ ರಿಲೀಸ್ ಆಯಿತು. ಆ ಬಳಿಕ ಅನಂತ್ ನಾಗ್ ಅವರು ಹಲವು ರೀತಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನಟಿಸಿದರು. ಅವರು ಕನ್ನಡದ ಯಶಸ್ವಿ ಹೀರೋ ಆದರು. ಯಾವುದೇ ರೀತಿಯ ಪಾತ್ರ ಕೊಟ್ಟರೂ ನಟಿಸಿ ತೋರಿಸುವ ಸಾಮರ್ಥ್ಯ ಅವರಿಗೆ ಇದೆ. ಈ ಕಾರಣಕ್ಕೆ ಅವರು ಕನ್ನಡಿಗರಿಗೆ ಹೆಚ್ಚು ಇಷ್ಟ ಆಗುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








