‘ಕೇಳದೆ ನಿಮಗೀಗ..’ ಚಿತ್ರದ ಹಾಡಿನ ಇತಿಹಾಸ ಹೇಳಿದ್ದ ಇಳಯರಾಜ
Ilaiyaraaja: ಇಳಯರಾಜ ಅವರ 82ನೇ ಜನ್ಮದಿನದಂದು, ಅವರ ಸಂಗೀತ ಜೀವನ ಮತ್ತು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳೋಣ. ‘ಗೀತಾ’ ಚಿತ್ರದ ‘ಕೇಳದೆ ನಿಮಗೀಗ...’ ಹಾಡಿನ ರಚನೆಯ ಹಿಂದಿನ ಕಥೆ ಮತ್ತು ಶಂಕರ್ ನಾಗ್ ಅವರೊಂದಿಗಿನ ಸಂಬಂಧವನ್ನು ಈ ಲೇಖನ ತಿಳಿಸುತ್ತದೆ.

ಇಳಯರಾಜ (Ilaiyaraaja) ಅವರಿಗೆ ಇಂದು (ಜೂನ್ 3) ಜನ್ಮದಿನ. ಅವರಿಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಹಳ್ಳಿಯಿಂದ ಬಂದ ಅವರು ಇಂದು ದೊಡ್ಡ ಸಂಗೀತ ಸಂಯೋಜಕರಾಗಿ ಬೆಳೆದಿದ್ದಾರೆ. ಅವರು ಮಾಡಿದ ಸಾಧನೆ ಅಂಥದ್ದು. ಅವರಿಗೆ ಸರಿ ಸಾಟಿ ಆದವರು ಮತ್ತೊಬ್ಬರಿಲ್ಲ. ಅವರು ಕನ್ನಡದಲ್ಲೂ ಹಲವು ಸೂಪರ್ ಹಿಟ್ ಸಾಂಗ್ಗಳನ್ನು ನೀಡಿದ್ದಾರೆ. ಇಳಯರಾಜ ಅವರಿಗೆ ಈಗ 82 ವರ್ಷ. ಅವರು ಈ ಮೊದಲು ಕನ್ನಡದ ‘ಗೀತಾ’ ಚಿತ್ರದ ‘ಕೇಳದೆ ನಿಮಗೀಗ..’ ಚಿತ್ರದ ಹಾಡಿನ ಬಗ್ಗೆ ಹೇಳಿದ್ದರು.
ಶಂಕರ್ ನಾಗ್ ನಟನೆಯ ‘ಗೀತಾ’ ಸಿನಿಮಾಗೆ ಇಳಯರಾಜ ಅವರೇ ಸಂಗೀತ ಸಂಯೋಜನೆ ಮಾಡಿದ್ದರು. 1981ರಲ್ಲಿ ಈ ಚಿತ್ರ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ‘ಕೇಳದೆ ನಿಮಗೀಗ..’ ಹಾಡು ಇದೇ ಚಿತ್ರದ್ದು. ಇದನ್ನು, ಇಳಯರಾಜ ಕಂಪೋಸ್ ಮಾಡಿದ್ದರು. ಈ ಹಾಡಿನ ಬಗ್ಗೆ ಇಳಯರಾಜ ಮಾತನಾಡಿದ್ದರು.
ಶಂಕರ್ ನಾಗ್ ಅವರಿಗೆ ಇಳಯರಾಜ ಮೇಲೆ ವಿಶೇಷ ಪ್ರೀತಿ ಇತ್ತು. ಒಮ್ಮೆ ಇಳಯರಾಜ ಬಳಿ ಬಂದ ಅವರು, ‘ಗೀತಾ’ ಹಾಡಿನ ಸಿಚ್ಯುವೇಶನ್ ಹೇಳಿಕೊಂಡರು. ‘ಡ್ರಾಮಾ ನಡೆಯುತ್ತದೆ. ಎರಡು ಹಳ್ಳಿಯಲ್ಲಿ ನಡೆಯುವ ಪ್ರೀತಿಯ ಕಥೆ ಎಂದೆಲ್ಲ ವಿವರಿಸಿದರು. ಆ ಬಳಿಕ ಇದನ್ನು ಕೇಳಿ ಚಿ. ಉದಯ್ ಶಂಕರ್ ಸಾಂಗ್ ಬರೆದರು’ ಎಂದಿದ್ದರು ಇಳಯರಾಜ.
ಟ್ಯೂನ್ಗೆ ತಕ್ಕಂತೆ ಅಲ್ಲಿ ಸಂಪಿಗೆ ಒಂದೂರು, ಮಲ್ಲಿಗೆ ಒಂದೂರು ಎಂದು ಬರೆದಿದ್ದರು ಉದಯ್ ಶಂಕರ್. ‘ಹೀಗೆ ಬರೆದರೆ ಡ್ರಾಮಾಗೆ ತೂಕ ಬರಲ್ಲ’ ಎಂದು ಇಳಯರಾಜ ವಿವರಿಸಿದರು. ‘ಡ್ರಾಮಾಗೆ ನರೇಶನ್ ಬರೆಯಿರಿ ಎಂದೆ. ಕೇಳದೇ ನಿಮಗೀಗ ದೂರದಲ್ಲಿ ಯಾರೋ, ಹಾಡು ಕೇಳಿದಂತೆ ಒಂದು ಹೆಣ್ಣಿನಾ ಓ ನೊಂದ ವಿರಹ ಗೀತೆ ಎಂದು ಬರೆದರು’ ಎಂದು ಅಂದಿನ ಘಟನೆ ವಿವರಿಸಿದ್ದರು.
ಮೈಸೂರು ದಸರಾಗೆ ಇಳಯರಾಜ ಅವರು ಬಂದಿದ್ದರು. ಆ ಸಂದರ್ಭದಲ್ಲಿ ಈ ಗೀತೆ ಬಗ್ಗೆ ಹೇಳಿದ್ದರು. ಅವರು ಕೊಲ್ಲೂರು ತಾಯಿಯನ್ನು ಬಲವಾಗಿ ನಂಬುತ್ತಾರೆ. ಈ ಕಾರಣಕ್ಕೆ ಕೊಲ್ಲೂರೂ ಮೂಕಾಂಬಿಕೆ ನನ್ನ ತಾಯಿ ಎಂದು ಹೇಳಿಕೊಳ್ಳುತ್ತಾರೆ.
ಇದನ್ನೂ ಓದಿ: ‘ನಾನು ಕರ್ನಾಟಕದವನು, ನನ್ನ ಅವ್ವ ಇಲ್ಲೇ ಇರೋದು’: ಇಳಯರಾಜ ಕನ್ನಡ ಪ್ರೇಮ
ಶಂಕರ್ ನಾಗ್ ಅವರು ಕನ್ನಡ ಚಿತ್ರಂಗ ಕಂಡ ಶ್ರೇಷ್ಠ ಹೀರೋ ಹಾಗೂ ನಿರ್ದೇಶಕರಲ್ಲಿ ಒಬ್ಬರು. ಅವರು 1992ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಆದ ದೊಡ್ಡ ನಷ್ಟ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







