‘ನಾನು ಕರ್ನಾಟಕದವನು, ನನ್ನ ಅವ್ವ ಇಲ್ಲೇ ಇರೋದು’: ಇಳಯರಾಜ ಕನ್ನಡ ಪ್ರೇಮ
ಇಳಯರಾಜ ಅವರು ಕರ್ನಾಟಕವನ್ನು ತಮ್ಮ ಮನೆಯೆಂದು ಪರಿಗಣಿಸುತ್ತಾರೆ. ಅವರು ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಶಂಕರ್ ನಾಗ್ ಅವರೊಂದಿಗೆ ಇಳಯರಾಜ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಕನ್ನಡದೊಂದಿಗಿನ ಅವರ ಆಳವಾದ ಸಂಬಂಧ ಮತ್ತು ಕರ್ನಾಟಕದ ಮೇಲಿನ ಅವರ ಪ್ರೀತಿಯನ್ನು ಈ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು.

ಕನ್ನಡವು ತಮಿಳಿನಿಂದ ಹುಟ್ಟಿದ್ದು ಎಂದು ಕಮಲ್ ಹಾಸನ್ (Kamal Haasan) ಅವರು ವಿವಾದ ಮಾಡಿಕೊಂಡಿದ್ದು ಗೊತ್ತೇ ಇದೆ. ಈ ಕಾರಣಕ್ಕೆ ಅವರ ವಿರುದ್ಧ ಎಲ್ಲರೂ ಧ್ವನಿ ಎತ್ತಿದ್ದಾರೆ. ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಅನೇಕರು ಹೇಳೀಕೊಂಡಿದ್ದರು. ಆದರೆ. ಈ ವಿಚಾರದಲ್ಲಿ ಇಳಯರಾಜ ಅವರು ಭಿನ್ನವಾಗಿ ನಿಲ್ಲುತ್ತಾರೆ. ಅವರು ನೀಡಿದ ಹೇಳಿಕೆ ಒಂದು ಗಮನ ಸೆಳೆದಿತ್ತು. ಅವರು ಕರ್ನಾಟಕದ ಮಗ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅದಕ್ಕೆ ಕಾರಣ ಇಲ್ಲಿದೆ.
ಇಂದು (ಜೂನ್ 3) ಇಳಯರಾಜ ಅವರ ಜನ್ಮದಿನ. ಅವರಿಗೆ ಈಗ 82 ವರ್ಷ ವಯಸ್ಸು. ಈ ಮೊದಲು ಟಿವಿ9 ಕನ್ನಡಕ್ಕೆ ಇಳಯರಾಜ ಅವರು ಸಂದರ್ಶನ ನೀಡಿದ್ದರು. ಆಗ ಅವರನ್ನು ಅತಿಥಿ ಎಂದು ಹೇಳಲಾಯಿತು. ಆದರೆ, ತಾವು ಇಲ್ಲಿಗೆ ಅತಿಥಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೆ ಕಾರಣವನ್ನು ಅವರು ವಿವರಿಸಿದ್ದರು. ‘ನನ್ನ ಅಮ್ಮ ಕೊಲ್ಲೂರು ಮೂಕಾಂಬಿಕೆ ಕರ್ನಾಟಕದಲ್ಲೇ ಇರೋದು. ಹೀಗಾಗಿ, ನಾನು ಇಲ್ಲಿಯ ಮಗ. ನನ್ನ ಊರು ಇದು’ ಎಂದು ಅವರು ಹೆಮ್ಮೆಯಿಂದ ಕನ್ನಡದಲ್ಲೇ ಹೇಳಿಕೊಂಡಿದ್ದರು. ಆ ವಿಡಿಯೋ ಈಗ ವೈರಲ್ ಆಗಿದೆ.
ಇಳಯರಾಜ ಅವರು ಕನ್ನಡದ ನಂಟು ಸಾಕಷ್ಟು ಇದೆ. ‘ನಾನು ಸಹಾಯಕ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಜಿಕೆ ವೆಂಕಟೇಶ್ ಜೊತೆ ಕೆಲಸ ಮಾಡಿದ್ದೇನೆ. ಅಲ್ಲಿಂದ ಕನ್ನಡದ ಅನುಭವ’ ಎಂದಿದ್ದರು. ‘ನಾನು ಕನ್ನಡದವನು, ನನ್ನ ಸಾಂಗ್ ಎಂದು ಜನರು ಒಪ್ಪಿಕೊಂಡಿದ್ದಾರೆ’ ಎಂದಿದ್ದರು ಅವರು.
ಇಳಯರಾಜ ಅವರು ಶಂಕರ್ನಾಗ್ ಜೊತೆ ಒಳ್ಳೆಯ ನಂಟು ಇತ್ತು. ಅವರ ಜೊತೆ ಕೆಲಸ ಮಾಡೋದು ಎಂದರೆ ಅವರಿಗೆ ತುಂಬಾನೇ ಖುಷಿ ಆಗಿತ್ತು. ಹಲವು ಬಾರಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ‘ಸಂಗೀತ ಎಂಬುದು ತುಂಬಾನೇ ಮುಖ್ಯ. ನಾನು ಯಾವಾಗಲೂ ಬೇಗ ಸಂಗೀತ ಸಂಯೋಜನೆ ಮಾಡಿಕೊಡುತ್ತಿದ್ದೆ’ ಎಂದು ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: ‘ನನ್ನಂತೆ ಯಾರಿರಲಿಲ್ಲ, ಮುಂದೆ ಯಾರೂ ಬರಲ್ಲ’; ಇಳಯರಾಜ ಹೇಳಿಕೆ ಕೇಳಿ ಬಂತು ನೆಗೆಟಿವ್ ಕಮೆಂಟ್
ಇಳಯರಾಜ ಅವರು ಹಾಡೋಕೆ ಆರಂಭಿಸಿದ್ದು ಒಂದು ಅಚ್ಚರಿಯ ರೀತಿಯಲ್ಲಿ. ‘ಅವರು ಫ್ರೀ ಇದಾರ, ಇವರು ಫ್ರೀ ಇದಾರ ಎಂದು ಗಾಯಕರ ಬಳಿ ಕೇಳುತ್ತಾ ಹೋಗಲಾಗುತ್ತಿತ್ತು. ಆದರೆ, ಯಾರೂ ಫ್ರೀ ಇಲ್ಲದಾಗ, ನಾನೇ ಹಾಡುತ್ತಿದ್ದೆ’ ಎಂದು ಇಳಯರಾಜ ಅವರು ಈ ಮೊದಲು ಹೇಳಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







