AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

ರಶ್ಮಿಕಾ ಮಂದಣ್ಣ ಅವರು ಕನ್ನಡದಿಂದ ಹಿಡಿದು ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ನ್ಯಾಷನಲ್ ಕ್ರಶ್’ ಎಂದೇ ಪ್ರಸಿದ್ಧರಾಗಿರುವ ಅವರು ಇತ್ತೀಚೆಗೆ ‘ಕುಬೇರ’ ಚಿತ್ರದಲ್ಲಿ ನಟಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರ ಸರಳತೆ ಹಾಗೂ ಸೌಜನ್ಯತೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ.

ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?
ರಶ್ಮಿಕಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:May 29, 2025 | 8:37 AM

Share

ರಶ್ಮಿಕಾ ಮಂದಣ್ಣ (Rashmika Mandanna) ಅವರು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಪರಭಾಷೆಯಲ್ಲೂ ಚಿರಪರಿಚಿತರು. ಅಲ್ಲಿಯೂ ಅವರಿಗೆ ಸಾಕಷ್ಟು ಬೇಡಿಕೆ ಇದೆ. ರಶ್ಮಿಕಾ ಮಂದಣ್ಣ ಅವರು ಈ ಮೊದಲು ಕರ್ನಾಟಕದ ಕ್ರಶ್ ಆಗಿದ್ದರು. ಆ ಬಳಿಕ ಅವರಿಗೆ ನ್ಯಾಷನಲ್ ಕ್ರಶ್ ಪಟ್ಟ ಸಿಕ್ಕಿತ್ತು. ಅವರು ಅಭಿಮಾನಿಗಳಿಗೆ ಹಾಗೂ ಪಾಪರಾಜಿಗಳಿಗೆ ವಿಶೇಷ ಗೌರವ ನೀಡುತ್ತಾರೆ. ಇತ್ತೀಚೆಗೆ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿದರು ಮತ್ತು ಅವರನ್ನು ನ್ಯಾಷನಲ್ ಕ್ರಶ್ ಎಂದು ಕರೆದಾಗ ಅವರು ಪ್ರತಿಕ್ರಿಯಿಸಿದ ರೀತಿಯ ವಿಡಿಯೋ ವೈರಲ್ ಆಗಿದೆ.

ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್, ಮುಂಬೈ ಹಾಗೂ ಚೆನ್ನೈ ಮಧ್ಯೆ ಓಡಾಡುತ್ತಾ ಇರುತ್ತಾರೆ. ಇದಕ್ಕೆ ಕಾರಣ ಸಿನಿಮಾದ ಶೂಟಿಂಗ್. ಅವರು ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರು ಮುಂಬೈ ಏರ್​ಪೋರ್ಟ್​ನಲ್ಲಿ ಅವರು ಕಾಣಿಸಿಕೊಂಡರು. ಆಗ ಪಾಪರಾಜಿಗಳು ‘ನೀವು ಸುಂದರವಾಗಿ ಕಾಣುತ್ತಿದ್ದೀರಿ, ನ್ಯಾಷನಲ್ ಕ್ರಶ್’ ಎಂದು ಅವರನ್ನು ಕರೆಯಲಾಯಿತು.  ಅವರು ಆಗ ನಕ್ಕರು.

ಇದನ್ನೂ ಓದಿ
Image
ಕಿಚ್ಚ ಸುದೀಪ್-ರಾಜೇಶ್ ಕೃಷ್ಣನ್ ಹಾಡಿನ್ ಜುಗಲ್​ಬಂದಿ; ಅಪರೂಪದ ವಿಡಿಯೋ
Image
ಎ,ಓಂ ಚಿತ್ರವನ್ನು ನಾನು ಮಾಡಿದ್ದರೆ ನಿವೃತ್ತಿ ಪಡೆಯುತ್ತಿದ್ದೆ; ಸುಕುಮಾರ್
Image
ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಿತ್ರಕ್ಕೆ ಸೊಳ್ಳೆ ಕಾಟ; ಶೂಟಿಂಗ್ ಸ್ಥಗಿತ
Image
ಕಮಲ್ ಹೇಳಿಕೆ ವಿರುದ್ಧ ಧ್ವನಿ ಎತ್ತಿದ ಅಹಿಂಸಾ ಚೇತನ್; ಸೆಲೆಬ್ರಿಟಿಗಳ ಮೌನ

ರಶ್ಮಿಕಾ ಮಂದಣ್ಣ ಅವರು ಸಿಂಪಲ್ ಉಡುಗೆಯಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಮುಂಬೈನಲ್ಲಿ ವಿಮಾನ ನಿಲ್ದಾಣದಲ್ಲಿ ಟಿ-ಶರ್ಟ್​ ಹಾಗೂ ಜೀನ್ಸ್​ನಲ್ಲಿ ಅವರು ಕಾಣಿಸಿದರು. ಅವರು ಸಣ್ಣ ಬ್ಯಾಗ್ ಹಾಕಿದ್ದರು. ಅವರು  ಮಾಸ್ಕ್ ಹಾಕೋದಕ್ಕೆ ಮರೆಯಲ್ಲ.

ರಶ್ಮಿಕಾ ಮಂದಣ್ಣ ಅವರು ‘ಕುಬೇರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದು ಸೋಶಿಯಲ್ ಥ್ರಿಲ್ಲರ್ ಸಿನಿಮಾ. ಧನುಷ್, ನಾಗಾರ್ಜುನ ಅಕ್ಕಿನೇನಿ ಹಾಗೂ ಜಿಮ್ ಸರ್ಬ್ ನಟಿಸಿದ್ದಾರೆ. ತಮಿಳಿನ ಈ ಸಿನಿಮಾ ಜೂನ್ 20ರಂದು ಹಿಂದಿ, ಕನ್ನಡ ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ‘ಕುಬೇರ’ ಟೀಸರ್: ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯಾದ ರಶ್ಮಿಕಾ; ಗ್ಲಾಮರ್ ಮಾಯ

ಕುಬೇರ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆ ಕಂಡು ಮೆಚ್ಚುಗೆ ಪಡೆದಿದೆ.  ರಶ್ಮಿಕಾಗೆ ಬ್ಯಾಕ್ ಟು ಬ್ಯಾಕ್ ಆಫರ್​ಗಳು ಬರುತ್ತಿವೆ. ಅವರು ‘ಥಾಮಾ’ ಹೆಸರಿನ ಹಾರರ್ ಕಾಮಿಡಿ ಸಿನಿಮಾ ಮಾಡುತ್ತಿದ್ದಾರೆ. ಆಯುಷ್ಮಾನ್ ಖುರಾನಾ ಚಿತ್ರಕ್ಕೆ ನಾಯಕ. ಇದಲ್ಲದೆ, ‘ಗರ್ಲ್​ಫ್ರೆಂಡ್’ ಹೆಸರಿನ ಚಿತ್ರವನ್ನು ಕೂಡ ಅವರು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:37 am, Thu, 29 May 25