AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚ ಸುದೀಪ್-ರಾಜೇಶ್ ಕೃಷ್ಣನ್ ಹಾಡಿನ್ ಜುಗಲ್​ಬಂದಿ; ಅಪರೂಪದ ವಿಡಿಯೋ

ಕಿಚ್ಚ ಸುದೀಪ್ ಮತ್ತು ರಾಜೇಶ್ ಕೃಷ್ಣನ್ ಅವರ ಅಪರೂಪದ ಹಾಡಿನ ಜುಗಲ್ಬಂದಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರಿಗಮಪ ಕಾರ್ಯಕ್ರಮದಲ್ಲಿ ಈ ಜೋಡಿ ಹಾಡಿದ ‘ಇವಳಾ ಮುಗುಳು ನಗೆ’ ಹಾಡು ಪ್ರೇಕ್ಷಕರ ಮನಗೆದ್ದಿದೆ. ಸುದೀಪ್ ಅವರ ಧ್ವನಿಗೆ ಅಭಿಮಾನಿಗಳು ಮನಸೋತಿದ್ದಾರೆ. ಸದ್ಯ ಅವರು ‘ಬಿಲ್ಲ ರಂಗ ಭಾಷ’ ಚಿತ್ರದಲ್ಲಿ ಬ್ಯುಸಿ ಇದ್ದಾರೆ.

ಕಿಚ್ಚ ಸುದೀಪ್-ರಾಜೇಶ್ ಕೃಷ್ಣನ್ ಹಾಡಿನ್ ಜುಗಲ್​ಬಂದಿ; ಅಪರೂಪದ ವಿಡಿಯೋ
ರಾಜೇಶ್- ಸುದೀಪ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: May 29, 2025 | 8:13 AM

Share

ಕಿಚ್ಚ ಸುದೀಪ್ (Sudeep) ಅವರು ಒಳ್ಳೆಯ ನಟ ಅನ್ನೋದು ಬಹುತೇಕರಿಗೆ ಗೊತ್ತಿದೆ. ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಹೊಸ ಸಿನಿಮಾ ‘ಬಿಲ್ಲ ರಂಗ ಭಾಷ’ ಬಗ್ಗೆ ನಿರೀಕ್ಷೆ ಇದೆ. ಹೀಗಿರುವಾಗಲೇ ಅವರ ಹಳೆಯ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಕಿಚ್ಚ ಸುದೀಪ್ ಹಾಗೂ ರಾಜೇಶ್ ಕೃಷ್ಣನ್ ಹಾಡಿನ ಜುಗಲ್​ಬಂದಿ ವಿಡಿಯೋ ಕೂಡ ಒಂದು. ಈ ವಿಡಿಯೋನ ಎಲ್ಲರೂ ಇಷ್ಟಪಟ್ಟಿದ್ದಾರೆ.

ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅವರು ‘ಸರಿಗಮಪ’ ವೇದಿಕೆ ಮೇಲೆ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸೀಸನ್​​ನಲ್ಲಿ ಇವರ ಕಾಂಬೋ ಮುಂದುವರಿದಿದೆ. ಈ ಮೊದಲು ಕೂಡ ಈ ಮೂವರು ಇದ್ದರು. ಈ ಮೊದಲು ಸರಿಗಮಪ ವೇದಿಕೆ ಮೇಲೆ ಬಂದಿದ್ದ ಸುದೀಪ್ ಅವರು ಇವರ ಜೊತೆ ಹಾಡಿನ ಜುಗಲ್​ ಬಂದಿ ಮಾಡಿದ್ದರು.

ಇದನ್ನೂ ಓದಿ
Image
‘ಪುಷ್ಪ’ ನಿರ್ದೇಶಕ ಸಿನಿಮಾಗೆ ಕನ್ನಡದ ಈ ಚಿತ್ರಗಳೇ ಸ್ಫೂರ್ತಿ
Image
ಎ,ಓಂ ಚಿತ್ರವನ್ನು ನಾನು ಮಾಡಿದ್ದರೆ ನಿವೃತ್ತಿ ಪಡೆಯುತ್ತಿದ್ದೆ; ಸುಕುಮಾರ್
Image
ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಿತ್ರಕ್ಕೆ ಸೊಳ್ಳೆ ಕಾಟ; ಶೂಟಿಂಗ್ ಸ್ಥಗಿತ
Image
ಕಮಲ್ ಹೇಳಿಕೆ ವಿರುದ್ಧ ಧ್ವನಿ ಎತ್ತಿದ ಅಹಿಂಸಾ ಚೇತನ್; ಸೆಲೆಬ್ರಿಟಿಗಳ ಮೌನ

ಸುದೀಪ್ ಹಾಗೂ ರಾಜೇಶ್ ಕೃಷ್ಣನ್ ಅವರು ಒಟ್ಟಾಗಿ ಕುಳಿತು, ‘ಇವಳಾ ಮುಗುಳು ನಗೆ..’ ಹಾಡನ್ನು ಹಾಡಿದ್ದರು. ಈ ಹಾಡು ಗಮನ ಸೆಳೆಯಿತು. ಈ ವಿಡಿಯೋ ಈಗ ವೈರಲ್ ಆಗಿದೆ. ಸುದೀಪ್ ಧ್ವನಿಗೆ ಅನೇಕರು ಮಾರು ಹೋಗಿದ್ದರು. ಅವರು ಒಳ್ಳೆಯ ಗಾಯಕರೂ ಹೌದು ಎಂದು ಅನೇಕರು ಒಪ್ಪಿಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲೂ ಸುದೀಪ್ ಅವರು ‘ಸರಿಗಮಪ’ ವೇದಿಕೆ ಮೇಲೆ ಬಂದಿದ್ದರು ಮತ್ತು ಕುಟುಂಬ ಕೂಡ ಆ ಸಂದರ್ಭದಲ್ಲಿ ಹಾಜರಿ ಹಾಕಿತ್ತು. ಈ ವೇಳೆ ಅವರ ಮಗಳು ಅದ್ಭುತವಾಗಿ ಹಾಡು ಹೇಳುವ ಮೂಲಕ ಎಲ್ಲರ ಗಮನ ಸೆಳೆದರು.

ಇದನ್ನೂ ಓದಿ: ಸುದೀಪ್ ಫೀಮೇಲ್ ಫ್ಯಾನ್ಸ್ ನೋಡಿ ಕಂಗಾಲಾಗಿದ್ದ ಪತ್ನಿ ಪ್ರಿಯಾ

ಸುದೀಪ್ ಅವರು ಸದ್ಯ ‘ಬಿಲ್ಲ ರಂಗ ಭಾಷ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ. ‘ಮ್ಯಾಕ್ಸ್’ ಸಿನಿಮಾ ಹಿಟ್ ಆದ ಬಳಿಕ ಸುದೀಪ್ ಒಪ್ಪಿಕೊಂಡ ಮುಂದಿನ ಚಿತ್ರ ಇದು ಎನ್ನುವ ಕಾರಣಕ್ಕೂ ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ