AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಫೀಮೇಲ್ ಫ್ಯಾನ್ಸ್ ನೋಡಿ ಕಂಗಾಲಾಗಿದ್ದ ಪತ್ನಿ ಪ್ರಿಯಾ

ಸುದೀಪ್ ಮತ್ತು ಪ್ರಿಯಾ ಅವರದ್ದು ಪ್ರೇಮ ವಿವಾಹ. ವಿವಾಹದ ನಂತರ ಅನೇಕ ಸವಾಲುಗಳನ್ನು ಇವರು ಎದುರಿಸಿದರು. ಸುದೀಪ್ ಅವರ ಅಪಾರ ಮಹಿಳಾ ಅಭಿಮಾನಿಗಳನ್ನು ನೋಡಿ ಪ್ರಿಯಾ ಅವರು ಆರಂಭದಲ್ಲಿ ಕಂಗಾಲಾದರು. ಆದರೆ, ಸುದೀಪ್ ಅವರ ಪ್ರೀತಿ ಮತ್ತು ಬೆಂಬಲದಿಂದ ಅವರು ಅದನ್ನು ಜಯಿಸಿದರು.

ಸುದೀಪ್ ಫೀಮೇಲ್ ಫ್ಯಾನ್ಸ್ ನೋಡಿ ಕಂಗಾಲಾಗಿದ್ದ ಪತ್ನಿ ಪ್ರಿಯಾ
ಸುದೀಪ್-ಪ್ರಿಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:May 27, 2025 | 8:03 AM

Share

ಕಿಚ್ಚ ಸುದೀಪ್ (Sudeep) ಹಾಗೂ ಪ್ರಿಯಾ ದಂಪತಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಸಾನ್ವಿ ಹೆಸರಿನ ಮಗಳು ಇದ್ದಾರೆ. ಅವರು ಕೂಡ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಸುದೀಪ್ ಅವರು ಈಗ ಸೂಪರ್​ಸ್ಟಾರ್. ಅವರಿಗೆ ಮೊದಲಿನಿಂದಲೇ ಜನಪ್ರಿಯತೆ ಸಿಕ್ಕಿತ್ತು ಎನ್ನಿ. ಸುದೀಪ್ ಅವರ ಫೀಮೇಲ್ ಫ್ಯಾನ್​ಬೇಸ್ ನೋಡಿ ಪ್ರಿಯಾ ಅವರು ಕಂಗಾಲಾಗಿದ್ದರು. ಮದುವೆ ಆದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.

2001ರಲ್ಲಿ ಕಿಚ್ಚ ಸುದೀಪ್ ಅವರು ವಿವಾಹ ಆದರು. ಅಕ್ಟೋಬರ್​ನಲ್ಲಿ ಈ ವಿವಾಹ ನಡೆಯಿತು. ಇವರದ್ದು ಪ್ರೇಮ ವಿವಾಹ. ಮದುವೆ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ಕಿಚ್ಚ ಸುದೀಪ್ ಹಾಗೂ ಪ್ರಿಯಾ ವಿವರಿಸಿದ್ದರು. ಸುದೀಪ್ ಅವರ ಫ್ಯಾನ್​ ಬೇಸ್ ನೋಡಿ ಪ್ರಿಯಾ ಅವರು ಕಂಗಾಲಾಗಿದ್ದರು. ಜೀವನ ಮುಂದೆ ಹೇಗೆ ಎನ್ನುವ ಪ್ರಶ್ನೆ ಅವರನ್ನು ಕಾಡಿತ್ತು.

ಇದನ್ನೂ ಓದಿ
Image
‘ಪಾರು’ ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ; ಫಲಿಸಲಿಲ್ಲ ಪ್ರಾರ್ಥನೆ
Image
‘ದೃಶ್ಯಂ’ ರೀತಿಯ ಈ ಸಿನಿಮಾ ಒಟಿಟಿಯಲ್ಲಿ; ಕನ್ನಡದಲ್ಲೂ ವೀಕ್ಷಣೆ ಲಭ್ಯ
Image
‘ಸರಿಗಮಪ’ ಫಿನಾಲೆಯಲ್ಲಿ ಇಲ್ಲ ಲಹರಿ ಮಹೇಶ್; ಅಭಿಮಾನಿಗಳ ಆಕ್ರೋಶ
Image
‘ಸೀತಾ ರಾಮ’ ಧಾರಾವಾಹಿಗೆ ವಿದಾಯದ ಸಂಚಿಕೆ; ಸೀತಾಗೆ ಗನ್​ ಹಿಡಿದ ಭಾರ್ಗವಿ

‘ನಂಗೆ ಒಂದೇ ಪ್ರಾಬ್ಲಂ ಇದ್ದಿತ್ತು. ಅವರ ಫಿಮೇಲ್ ಫ್ಯಾನ್ಸ್ ನೋಡಿ ಕಂಗಾಲಾದೆ. ರಿಯಾಲಿಟಿ ನೋಡಿ ಸ್ಟ್ರೈಕ್ ಆಯ್ತು. ನನಗೆ ಅಲ್ಲಿವರೆಗೆ ಐಡಿಯಾ ಇರಲೇ ಇಲ್ಲ. ಆಮೇಲೆ ಸುಮಾರು ಜನರು ನನ್ನನ್ನು ಮಾತನಾಡಿಸಲೇ ಇಲ್ಲ. ಅಪ್ಸೆಟ್ ಆದ ಮಹಿಳಾ ಅಭಿಮಾನಿಗಳು ಸುದೀಪ್ ಬಳಿ ನೀವು ಮದುವೆ ಯಾಕೆ ಆದ್ರಿ ಎಂದು ಕೇಳುತ್ತಿದ್ದರು. ಆದರೆ ನನ್ನ ಕನ್ವಿನ್ಸ್ ಮಾಡೋಕೆ ಅವರು ಎಫರ್ಟ್ ಹಾಕಿದ್ರು. ಶೂಟ್ ಕರೆದುಕೊಂಡು ಹೋಗಿ ಹೇಗೆ ಶೂಟ್ ಮಾಡ್ತೀವಿ ಎಂದು ತೋರಿಸಿದ್ರು’ ಎಂದಿದ್ದರು ಪ್ರಿಯಾ.

ಪ್ರಿಯಾ ಹಾಗೂ ಸುದೀಪ್ ಮಧ್ಯೆ ಕೆಲವೊಮ್ಮೆ ವೈಮನಸ್ಸು ಬಂದಿದ್ದು ಇದೆ. ಈ ವೈಮನಸ್ಸನ್ನು ಅವರು ಬಗೆಹರಿಸಿಕೊಂಡು ಮುಂದೆ ಸಾಗುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಹಲವು ವೇದಿಕೆ ಮೇಲೆ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜೊತೆ ಬಂದಿದ್ದು ಇದೆ. ಈ ವೇಳೆ ಪತ್ನಿಯನ್ನು ಹೊಗಳಿದ್ದರು.

ಇದನ್ನೂ ಓದಿ:  ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ

ಸದ್ಯ ಸುದೀಪ್ ಅವರು ‘ಬಿಲ್ಲ ರಂಗ ಭಾಷ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಅವರ ಕೈಗೆ ಏಟಾಗಿದ್ದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಅವರು ‘ಮ್ಯಾಕ್ಸ್’ ಚಿತ್ರದ ಬಳಿಕ ದೊಡ್ಡ ಯಶಸ್ಸು ಕಂಡರು. ಈ ಕಾರಣದಿಂದಲೂ ಅವರ ಮುಂದಿನ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ ಎನ್ನಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:01 am, Tue, 27 May 25

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ