AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shridhar Nayak Death: ‘ಪಾರು’ ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ; ಫಲಿಸಲಿಲ್ಲ ಪ್ರಾರ್ಥನೆ

Shridhar Nayak Passes Away: ಕನ್ನಡ ಕಿರುತೆರೆ ಮತ್ತು ಚಲನಚಿತ್ರ ನಟ ಶ್ರೀಧರ್ ನಾಯಕ್ ಅವರು ಮೇ 26ರಂದು ನಿಧನರಾಗಿದ್ದಾರೆ. 47 ವರ್ಷದ ಶ್ರೀಧರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ‘ಪಾರು’ ಮತ್ತು ‘ವಧು’ ಧಾರಾವಾಹಿಗಳಲ್ಲಿ ಅವರ ಪಾತ್ರಗಳು ಜನಪ್ರಿಯವಾಗಿದ್ದವು. ‘ಮ್ಯಾಕ್ಸ್’ ಚಿತ್ರದಲ್ಲೂ ಅವರು ನಟಿಸಿದ್ದರು. ಅವರ ಅಕಾಲಿಕ ನಿಧನವು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

Shridhar Nayak Death: ‘ಪಾರು’ ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ; ಫಲಿಸಲಿಲ್ಲ ಪ್ರಾರ್ಥನೆ
ಶ್ರೀಧರ್ ನಾಯಕ್
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:May 27, 2025 | 8:39 AM

Share

ಕನ್ನಡ ಕಿರುತೆರೆಯಲ್ಲಿ ನಟಿಸಿ ಫೇಸಮ್ ಆಗಿದ್ದ ನಟ ಶ್ರೀಧರ್ ನಾಯಕ್ (Shridhar Nayak) ಅವರು ಮೇ 26ರ ರಾತ್ರಿ ನಿಧನ ಹೊಂದಿದ್ದಾರೆ. ಇತ್ತೀಚೆಗೆ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಅವರಿಗೆ ಸಹಾಯ ಮಾಡುವಂತೆ ಅನೇಕರು ಕೋರಿಕೊಂಡಿದ್ದರು. ಅವರು ಗುರುತೇ ಸಿಗದಷ್ಟು ಬದಲಾಗಿ ಬೆಡ್ ಮೇಲೆ ಮಲಗಿದ್ದು ನೋಡಿ ಹಲವರಿಗೆ ಶಾಕ್ ಆಗಿತ್ತು. ಈಗ ಶ್ರೀಧರ್ ಅವರು ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರು ಎಳೆದಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಕಳೆಬರವನ್ನು ಇಡಲಾಗಿದೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.

ಶ್ರೀಧರ್ ಅವರಿಗೆ ಅನಾರೋಗ್ಯ ಉಂಟಾದ ವಿಚಾರದ ಬಗ್ಗೆ ಏಪ್ರಿಲ್​ನಲ್ಲಿ ಸುದ್ದಿ ಬಿತ್ತರ ಆಯಿತು. ವಿಚಿತ್ರ ಸೋಂಕಿನಿಂದ ಅವರು ಈ ರೀತಿ ಆಗಿದ್ದರು. ಗುರುತು ಸಿಗದಷ್ಟು ಬದಲಾಗಿ ಅವರು ಆಸ್ಪತ್ರೆಯ ಬೆಡ್​ ಮೇಲೆ ಮಲಗಿರೋದು ಕಂಡು ಬಂದಿತ್ತು. ಇದನ್ನು ನೋಡಿ ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಆಗಿತ್ತು. ಅವರು ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸಿದ್ದರು.

ಇತ್ತೀಚೆಗೆ ಶ್ರೀಧರ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಹೀಗಾಗಿ, ಅವರು ಸಹಾಯ ಕೋರಿದ್ದರು. ಅನೇಕರು ಹಣದ ಸಹಾಯ ಕೂಡ ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿ ಆಗಲಿಲ್ಲ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ
Image
‘ದೃಶ್ಯಂ’ ರೀತಿಯ ಈ ಸಿನಿಮಾ ಒಟಿಟಿಯಲ್ಲಿ; ಕನ್ನಡದಲ್ಲೂ ವೀಕ್ಷಣೆ ಲಭ್ಯ
Image
‘ಸರಿಗಮಪ’ ಫಿನಾಲೆಯಲ್ಲಿ ಇಲ್ಲ ಲಹರಿ ಮಹೇಶ್; ಅಭಿಮಾನಿಗಳ ಆಕ್ರೋಶ
Image
‘ಸೀತಾ ರಾಮ’ ಧಾರಾವಾಹಿಗೆ ವಿದಾಯದ ಸಂಚಿಕೆ; ಸೀತಾಗೆ ಗನ್​ ಹಿಡಿದ ಭಾರ್ಗವಿ
Image
‘ಕುಬೇರ’ ಟೀಸರ್: ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯಾದ ರಶ್ಮಿಕಾ; ಗ್ಲಾಮರ್ ಮಾಯ

‘ನಮ್ಮ ನಡುವಿದ್ದ ಕಲಾವಿದ ಶ್ರೀಧರ ನಾಯಕ್ ಬಹಳ ದಿನಗಳ ಅನಾರೋಗ್ಯದಿಂದ ಮುಕ್ತರಾಗಿ ರಾತ್ರಿ 10 ಗಂಟೆಗೆ ದೇವಸನ್ನಿಧಿ ಸೇರಿದ್ದಾರೆ.ಅವರ ಪಾರ್ಥೀವ ಶರೀರವು ಹೆಬ್ಬಾಳದಲ್ಲಿರುವ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ಘಂಟೆಯವರೆಗೆ (ಮೇ 27) ಅಂತಿಮ ದರ್ಶನದ ವ್ಯವಸ್ಥೆ ಮಾಡಿರುತ್ತಾರೆ’ ಎಂದು ನಾಗೇಂದ್ರ ಶಾನ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೋಳಿಗೆ ಮಾಡೋದು ಕಲಿತ ಬಿಗ್ ಬಾಸ್ ಸುಂದರಿ ಮೋಕ್ಷಿತಾ ಪೈ

1978ರಲ್ಲಿ ಶ್ರೀಧರ್ ಅವರು ಜನಿಸಿದರು. ಮೋಕ್ಷಿತಾ ಪೈ ನಟನೆಯ ‘ಪಾರು’ ಧಾರಾವಾಹಿಯಲ್ಲಿ ಆದಿಯ ಚಿಕ್ಕಪ್ಪನ ಪಾತ್ರವನ್ನು ಶ್ರೀಧರ್ ಮಾಡಿದ್ದರು. ಇತ್ತಿಚೆಗಷ್ಟೇ ಪ್ರಸಾರ ಆರಂಭಿಸಿರೋ ‘ವಧು’ ಧಾರಾವಾಹಿಯಲ್ಲಿ ಕಥಾ ನಾಯಕಿ ವಧುವಿನ ಚಿಕ್ಕಪ್ಪನ ಪಾತ್ರ ಮಾಡಿದ್ದರು. ಅವರು ‘ಮಂಗಳ ಗೌರಿ’ ಸೇರಿ 40ಕ್ಕೂ ಅಧಿಕ ಸೀರಿಯಲ್​ನಲ್ಲಿ ಅಭಿನಯಿಸಿದ್ದರು.  ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದಲ್ಲಿ ಅವರು ನಟಿಸಿದ್ದರು. ಈಗ ಅವರ ಸಾವು ಅಭಿಮಾನಿಗಳಿಗೆ ಅಪಾರ ನೋವು ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:26 am, Tue, 27 May 25

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ