ಸುರದ್ರೂಪಿ ಶ್ರೀಧರ್ ಕೊನೆಯ ದಿನಗಳು ಹೇಗಿದ್ದವು ನೋಡಿ; ವೈರಿಗಳಿಗೂ ಹೀಗಾಗಬಾರದು
Shridhar Naik Passes Away: ಕಿರುತೆರೆ ನಟ ಶ್ರೀಧರ್ ನಾಯಕ್ ಅವರು 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಆರು ತಿಂಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೋಗ್ಯದಲ್ಲಿನ ಭಾರಿ ಬದಲಾವಣೆ ತೋರಿಸುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 'ಪಾರು', 'ಮಂಗಳ ಗೌರಿ' ಮುಂತಾದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಅವರ ಸಾವು ಕಿರುತೆರೆ ಲೋಕಕ್ಕೆ ಭಾರೀ ನಷ್ವವನ್ನುಂಟು ಮಾಡಿದೆ.

ಕಿರುತೆರೆ ನಟ ಶ್ರೀಧರ್ ನಾಯಕ್ ಅವರು ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು. ಅವರು ಇಲ್ಲ ಎಂಬ ವಿಚಾರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಶ್ರೀಧರ್ ನಾಯಕ್ (Shridhar Naik) ಆರೋಗ್ಯವಾಗಿದ್ದಾಗ ಹೇಗಿದ್ದರು ಮತ್ತು ಅನಾರೋಗ್ಯಕ್ಕೆ ಒಳಗಾದ ಬಳಿಕ ಹೇಗಾದರು ಎಂಬುದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ ಮತ್ತು ಈ ರೀತಿಯ ಪರಿಸ್ಥಿತಿ ವೈರಿಗಳಿಗೂ ಬರಬಾರದು ಎಂದು ಅನೇಕರು ಕೋರಿಕೊಂಡಿದ್ದಾರೆ.
ಶ್ರೀಧರ್ ನಾಯಕ್ ಅವರು ಜನಿಸಿದ್ದು 1978ರಲ್ಲಿ. ಅವರಿಗೆ ಈಗಿನ್ನೂ 47 ವರ್ಷ. ಇನ್ನೂ ಬದುಕಿ ಬಾಳಬೇಕಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿನಿಂದ ಕಿರುತೆರೆ ಲೋಕಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಶ್ರೀಧರ್ ನಾಯಕ್ ಅವರಿಗೆ ಕಳೆದ ಆರು ತಿಂಗಳಿಂದ ಅನಾರೋಗ್ಯ ಕಾಡಿತ್ತು. ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸಾವಿನ ವಿರುದ್ಧ ಜಯಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಶ್ರೀಧರ್ ನಾಯಕ್
ಶ್ರೀಧರ್ ನಾಯಕ್ ಅವರಿಗೆ ಆರು ತಿಂಗಳ ಹಿಂದೆ ಇನ್ಫೆಕ್ಷನ್ಗೆ ಒಳಗಾಗಿದ್ದರು. ಇದಾದ ಬಳಿಕ ಅವರ ದೇಹದ ಚಿತ್ರಣವೇ ಬದಲಾಗಿ ಹೋಯಿತು. ಗುರುತೇ ಸಿಗದಷ್ಟು ಬದಲಾದರು. ಸುರದ್ರೂಪಿ ಎನಿಸಿಕೊಂಡಿದ್ದ ಶ್ರೀಧರ್, ಸಣಕಲಾಗಿ ಹೋದರು. ಚಿತ್ರರಂಗ ಹಾಗೂ ಕಿರುತೆರೆ ಲೋಕದ ಅನೇಕರು ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದರು.
ಇದನ್ನೂ ಓದಿ: ‘ಪಾರು’ ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ; ಫಲಿಸಲಿಲ್ಲ ಪ್ರಾರ್ಥನೆ
ಶ್ರೀಧರ್ ನಾಯಕ್ ಅವರು ‘ಪಾರು’, ‘ವಧು’, ‘ಮಂಗಳ ಗೌರಿ’, ‘ಮನೆಯೇ ಮಂತ್ರಾಲಯ’ ಸೇರಿದಂತೆ 40ಕ್ಕೂ ಹೆಚ್ಚು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದಲ್ಲೂ ಅವರು ಅವಕಾಶ ಪಡೆದಿದ್ದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಅವರು ಕೆಲವು ತಮಿಳು ಸಿನಿಮಾಗಳನ್ನು ಕೂಡ ಮಾಡಿದ್ದರು. ಆದರೆ, ಆರ್ಥಿಕವಾಗಿ ಅವರು ಸದೃಢರಾಗಿರಲಿಲ್ಲ. ಹೀಗಾಗಿ ಸಹಾಯಕ್ಕಾಗಿ ಅವರು ಅಭಿಮಾನಿಗಳು ಹಾಗೂ ಬಣ್ಣದ ಲೋಕದವರನ್ನು ಕೇಳಿದ್ದರು. ಅನೇಕರು ಕೈಲಾದಷ್ಟು ಸಹಾಯ ಮಾಡಿದ್ದರು. ಆದರೆ, ಅವರನ್ನು ಉಳಿಸಿಕೊಳ್ಳಲು ಸಾಧ್ಯ ಆಗಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:30 am, Tue, 27 May 25




