‘ಸೀತಾ ರಾಮ’ ಧಾರಾವಾಹಿಗೆ ವಿದಾಯದ ಸಂಚಿಕೆ; ಸೀತಾಗೆ ಗನ್ ಹಿಡಿದ ಭಾರ್ಗವಿ
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಸೀತಾ ರಾಮ' ಮೇ 30 ರಂದು ಅಂತ್ಯಗೊಳ್ಳಲಿದೆ. ಕೊನೆಯ ವಾರದಲ್ಲಿ, ಭಾರ್ಗವಿ ಸೀತಾಳ ಮೇಲೆ ಬಂದೂಕು ತೋರಿಸುವುದು ಸೇರಿದಂತೆ ಹಲವು ಆಘಾತಕಾರಿ ಘಟನೆಗಳು ನಡೆಯಲಿವೆ. ಭಾರ್ಗವಿಯ ನಿಜ ಸ್ವರೂಪ ಬಹಿರಂಗಗೊಳ್ಳುವುದು ಕೂಡ ಈ ವಾರದಲ್ಲಿ ನಡೆಯಲಿದೆ. ಧಾರಾವಾಹಿಯ ಅಭಿಮಾನಿಗಳು ಕೊನೆಯ ಸಂಚಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಎಲ್ಲರನ್ನೂ ರಂಜಿಸಿದ ಜೀ ಕನ್ನಡದ ‘ಸೀತಾ ರಾಮ’ ಧಾರಾವಾಹಿಯು (Seetha Raama Serial) ಈಗ ಕೊನೆಯಾಗುವ ಹಂತಕ್ಕೆ ತಲುಪಿರೋದು ವೀಕ್ಷಕರಿಗೆ ಗೊತ್ತೇ ಇದೆ. ಧಾರಾವಾಹಿಯು ಯಾವ ರೀತಿಯಲ್ಲಿ ಪೂರ್ಣಗೊಳ್ಳಲಿದೆ ಎಂಬ ವಿಚಾರ ಗೊತ್ತಿರಲಿಲ್ಲ. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಮುಂದಿನ ವಾರದಲ್ಲಿ ಯಾವ ದಿನ ಸಂಚಿಕೆ ಯಾವ ರೀತಿಯಲ್ಲಿ ಇರಲಿದೆ ಎಂಬುದಕ್ಕೆ ಜೀ ಕನ್ನಡ ವಾಹಿನಿಯು ಮಾಹಿತಿ ನೀಡಿದೆ. ಭಾರ್ಗವಿಯು ಸೀತಾಳಿಗೆ ಗನ್ ಹಿಡಿದು ಹೆದರಿಸಿದ್ದಾಳೆ.
‘ಸೀತಾ ರಾಮ’ ಧಾರಾವಾಹಿ ಪೂರ್ಣಗೊಳ್ಳಬಹುದೇ ಎನ್ನುವ ಅನುಮಾನ ಅನೇಕರಿಗೆ ಮೂಡಿತ್ತು. ಇದಕ್ಕೆ ಕಾರಣ ಆಗಿದ್ದು ಧಾರಾವಾಹಿಯ ಕಥೆ ಹಾಗೂ ಸಮಯ ಬದಲಾವಣೆ. ಈಗ ‘ಸೀತಾ ರಾಮ’ ಧಾರಾವಾಹಿ ಮುಂದಿನ ವಾರಕ್ಕೆ ಕೊನೆ ಆಗಲಿದೆ. ಮೇ 30ಕ್ಕೆ ಧಾರಾವಾಹಿಯ ಕೊನೆ ಎಪಿಸೋಡ್ ಪ್ರಸಾರ ಕಾಣಲಿದೆ.
‘ಸೀತಾ ರಾಮ’ ಧಾರಾವಾಹಿಯಲ್ಲಿ ಸಿಹಿ ಹಾಗೂ ಸುಬ್ಬಿ ಎಂಬ ಗುಟ್ಟು ಸೀತಾ ಹಾಗೂ ರಾಮನಿಗೆ ಗೊತ್ತಿರಲಿಲ್ಲ. ಈ ಗುಟ್ಟು ಈಗ ರಟ್ಟಾಗಿದೆ. ಈ ವಿಚಾರ ಸೀತಾಗೆ ಸೋಮವಾರ ತಿಳಿಯಲಿದೆ. ಈ ಎಪಿಸೋಡ್ ಸಾಕಷ್ಟು ಕುತೂಹಲ ಮೂಡಿಸಿದೆ. ಆ ಬಳಿಕ ಮಂಗಳವಾರ ಅಶೋಕ ಹಾಗೂ ಸತ್ಯ ಭಾರ್ಗವಿ ಬಣ್ಣ ಬಯಲು ಮಾಡುತ್ತಾರೆ. ಬುಧವಾರ ಭಾರ್ಗವಿ ನಿಜ ಸ್ವರೂಪ ಗೊತ್ತಾಗುತ್ತದೆ.
View this post on Instagram
ಗುರುವಾರ ಭಾಗರ್ವಿಯು ಸೀತಾಳನ್ನು ಬಂಧಿಸುತ್ತಾಳೆ ಮತ್ತು ಗನ್ ಹಿಡಿಯುತ್ತಾಳೆ. ಶುಕ್ರವಾರ ಇಡೀ ಮನೆಯವರಿಗೆ ಭಾರ್ಗವಿಯ ನಿಜವಾದ ವಿಚಾರ ಗೊತ್ತಾಗುತ್ತದೆ. ಈ ರೀತಿಯಲ್ಲಿ ಮುಂದಿನ ವಾರ ಇರಲಿದೆ ಎಂದು ಜೀ ಕನ್ನಡ ವಾಹಿನಿ ಮಾಹಿತಿ ನೀಡಿದೆ. ಈ ಧಾರಾವಾಹಿ ಕೊನೆಗೊಂಡ ಬಳಿಕ ಮುಂದೇನು ಎನ್ನುವ ಪ್ರಶ್ನೆ ಧಾರಾವಾಹಿ ಅಭಿಮಾನಿಗಳಿಗೆ ಮೂಡಿದೆ.
ಇದನ್ನೂ ಓದಿ: ಸಿಹಿಯ ಆತ್ಮದ ಜೊತೆ ಮಾತನಾಡಿದ ಸೀತಾ; ‘ಸೀತಾ ರಾಮ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್
‘ಸೀತಾ ರಾಮ’ ಧಾರಾವಾಹಿ ಆರಂಭದಲ್ಲಿ ಸಾಕಷ್ಟು ಉತ್ತಮವಾಗಿ ಮೂಡಿ ಬಂದಿತ್ತು. ಈ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ವೀಕ್ಷಣೆ ಮಾಡಿದ್ದರು, ಅಲ್ಲದೆ, ಉತ್ತಮ ಟಿಆರ್ಪಿ ಕೂಡ ಪಡೆದುಕೊಂಡಿತ್ತು. ಹೀಗಾಗಿ, ಇದೇ ಸಮಯಕ್ಕೆ ಧಾರಾವಾಹಿಯನ್ನು ಮರುಪ್ರಸಾರ ಮಾಡಿ ಎಂದು ಅನೇಕರು ಬೇಡಿಕೆ ಇಡುತ್ತಾ ಇದ್ದಾರೆ. ವಾಹಿನಿಯವರು ಇದನ್ನು ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







