ಸಿಹಿಯ ಆತ್ಮದ ಜೊತೆ ಮಾತನಾಡಿದ ಸೀತಾ; ‘ಸೀತಾ ರಾಮ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್
Seetha Raama Serial: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಆತ್ಮದ ಪಾತ್ರವು ಪ್ರಮುಖ ತಿರುವು ತೆಗೆದುಕೊಳ್ಳುತ್ತಿದೆ. ಸಿಹಿ ಮತ್ತು ಸುಬ್ಬಿ ಅವಳಿಗಳೆಂದು ಬಹಿರಂಗವಾಗುತ್ತದೆ. ಸಿಹಿಯ ಆತ್ಮವು ಸೀತಾ ಮತ್ತು ಅಶೋಕನಿಗೆ ಕಾಣಿಸಿಕೊಂಡು ರಹಸ್ಯಗಳನ್ನು ಬಿಚ್ಚಿಡುತ್ತದೆ. ಭಾರ್ಗವಿಯ ನಿಜ ಸ್ವರೂಪವನ್ನು ತಿಳಿಯಲು ಇನ್ನೂ ಕಾಯಬೇಕಿದೆ.

‘ಸೀತಾ ರಾಮ’ ಧಾರಾವಾಹಿಯು (Seetha Raama Serial) ಕೊನೆಯ ಹಂತವನ್ನು ತಲುಪಿರೋದು ಗೊತ್ತೇ ಇದೆ. ಹೀಗಾಗಿ, ಧಾರಾವಾಹಿಯ ಕಥೆಯಲ್ಲಿ ಬಚ್ಚಿಟ್ಟ ರಹಸ್ಯಗಳು ಹೊರ ಬರುತ್ತಿವೆ. ಸಿಹಿ ಸತ್ತು ಹೋಗಿದ್ದಾಳೆ. ಆದರೆ, ಈ ವಿಚಾರವನ್ನು ಮುಚ್ಚಿಡಲಾಗಿತ್ತು. ಇತ್ತೀಚೆಗೆ ಸಿಹಿಯ ಆತ್ಮ ಇರುವ ವಿಚಾರವು ರಾಮನ ಗೆಳೆಯ ಅಶೋಕನಿಗೆ ತಿಳಿಯಿತು. ಈಗ ಈ ವಿಚಾರ ಸೀತಾಗೂ ತಿಳಿದಿದೆ. ಇದು ಧಾರಾವಾಹಿಯಲ್ಲಿ ಪ್ರಮುಖ ಟ್ವಿಸ್ಟ್ ಆಗಲಿದೆ. ಇನ್ನು, ಭಾರ್ಗವಿಯ ಬಣ್ಣ ಬಯಲಾಗುವುದು ಮಾತ್ರ ಬಾಕಿ.
ಸಿಹಿ ಹಾಗೂ ಸುಬ್ಬಿ ಅವಳಿಗಳು. ಇಬ್ಬರೂ ಸೀತಾಗೆ ಜನಿಸಿದ್ದರು. ಆದರೆ, ಸುಬ್ಬಿಯನ್ನು ಮತ್ತೊಬ್ಬರು ಎತ್ತಿಕೊಂಡು ಹೋದರೆ, ಸಿಹಿಯು ಸೀತಾ ಬಳಿಯೇ ಬೆಳೆದು ದೊಡ್ಡವಳಾದಳು. ಈಗ ಸಿಹಿ ಸತ್ತ ಬಳಿಕ ಸುಬ್ಬಿಯನ್ನು ಕರೆತರಲಾಗಿದೆ. ಸಿಹಿಯ ಆತ್ಮವು ಸುಬ್ಬಿಗೆ ತರಬೇತಿ ನೀಡಿದೆ. ಈ ಆತ್ಮ ಸುಬ್ಬಿಯನ್ನು ಬಿಟ್ಟು ಇನ್ಯಾರಿಗೂ ಕಾಣುತ್ತಾ ಇರಲಿಲ್ಲ.
ಈಗ ಸುಬ್ಬಿ ಹಾಗೂ ಸಿಹಿ ಅವಳಿ ಎಂದು ತಿಳಿಯುವ ಸಮಯ. ಸದ್ಯ ವೈರಲ್ ಆಗಿರೋ ಮಾಹಿತಿ ಪ್ರಕಾರ ಸೀತಾಗೆ ಸಿಹಿಯ ಆತ್ಮವು ಕಾಣಿಸಿದೆ. ಈ ಆತ್ಮವು ಸೀತಾಗೆ ಹಲವು ಮಾಹಿತಿ ನೀಡಿದೆ. ‘ನಾನು ಮತ್ತು ಸಿಹಿ ಇಬ್ಬರಲ್ಲ ಒಬ್ಬರೇ ಎಂದಿದ್ದಾರೆ. ನಾವಿಬ್ಬರೂ ನಿನ್ನ ಮಕ್ಕಳೇ’ ಎಂದು ಹೇಳಿದ್ದಾಳೆ ಸಿಹಿ. ಇದನ್ನು ಕೇಳಿ ಸೀತಾ ಖುಷಿ ಆಗಿದ್ದಾಳೆ.
View this post on Instagram
ಆದರೆ, ಇದನ್ನು ನಂಬೋಕೆ ರಾಮ ರೆಡಿ ಇರಲಿಲ್ಲ. ರಾಮನು ‘ಇದೆಲ್ಲ ಹೇಗೆ ಸಾಧ್ಯ. ನಿಮಗೆ ಹಾಗೆ ಅನಿಸಿರಬೇಕು’ ಎಂದು ಕಿವಿಮಾತು ಹೇಳಿದರು. ಆಗ ಅಲ್ಲಿಗೆ ಬಂದ ಅಶೋಕನು, ‘ಇಲ್ಲ ಸಿಹಿಯ ಆತ್ಮ ನಮ್ಮ ಜೊತೆ ಇದೆ. ಅವಳೇ ಇಷ್ಟು ದಿನ ಸುಬ್ಬಿಗೆ ಮಾರ್ಗದರ್ಶನ ನೀಡುತ್ತಿದ್ದಳು’ ಎಂದು ನಿಜ ವಿಚಾರ ಹೇಳಿದನು. ಇದನ್ನು ಕೇಳಿ ಕುಟುಂಬದಲ್ಲಿ ಖುಷಿ ವಾತಾವರಣ ಸೃಷ್ಟಿ ಆಗಿದೆ.
ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿಗೆ ಕೊನೆಯ ದಿನದ ಶೂಟಿಂಗ್; ಸೀರಿಯಲ್ ಪೂರ್ಣಗೊಳ್ಳಲು ಕಾರಣವೇನು?
ಅಂದಹಾಗೆ, ಭಾರ್ಗವಿ ಕೆಟ್ಟವಳು ಎನ್ನುವ ವಿಚಾರ ಸೀತಾ ಹಾಗೂ ರಾಮಗೆ ತಿಳಿದಿಲ್ಲ. ಇದನ್ನು ಸಿಹಿ ರಿವೀಲ್ ಮಾಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ. ಈ ಧಾರಾವಾಹಿ ಶೀಘ್ರವೇ ಕೊನೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:11 pm, Sat, 24 May 25







