ಮಹೇಶ್ ಬಾಬು ಕುಟುಂಬದಲ್ಲಿ ಕೊವಿಡ್; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
ಟಾಲಿವುಡ್ ನಟ ಮಹೇಶ್ ಬಾಬು ಕುಟುಂಬದಲ್ಲೊಬ್ಬರಿಗೆ ಕೊವಿಡ್-19 ಸೋಂಕು ತಗುಲಿದೆ. ಇದರಿಂದ ಮಹೇಶ್ ಬಾಬು ಕುಟುಂಬ ಹಾಗೂ ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿದೆ. ನಟಿ ನಿಕಿತಾ ದತ್ತ ಅವರಿಗೂ ಕೊವಿಡ್-19 ಸೋಂಕು ತಗುಲಿದೆ. ದೇಶದಲ್ಲಿ ಕೊವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕೊವಿಡ್ ಮೂರನೇ ಅಲೆ ಕಡಿಮೆ ಆಗಿ ಕೆಲವು ವರ್ಷಗಳು ಕಳೆದಿವೆ. ಎಲ್ಲರೂ ಕೊವಿಡ್ (Covid) ಹಾಗೂ ಲಾಕ್ಡೌನ್ ಪದವನ್ನು ಮರೆಯುವ ಹಂತಕ್ಕೆ ಬಂದಿದ್ದಾರೆ. ಆದರೆ, ಈ ಭೂತ ಮತ್ತೆ ಕಾಡುವ ಸೂಚನೆ ನೀಡುತ್ತಿದೆ. ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಚಿತ್ರರಂಗದವರನ್ನೂ ಈ ವೈರಸ್ ಬಿಡುತ್ತಿಲ್ಲ. ಈಗ ಮಹೇಶ್ ಬಾಬು ಕುಟುಂಬದಲ್ಲೊಬ್ಬರಿಗೆ ಕೊವಿಡ್ ಆಗಿದೆ. ಅಲ್ಲದೆ, ಒಬ್ಬರಾದ ಬಳಿಕ ಒಬ್ಬರು ಸ್ಟಾರ್ಗಳು ತಮಗೆ ಕೊವಿಡ್ ಆಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಮಹೇಶ್ ಬಾಬು ಪತ್ನಿ ನಮ್ರತಾಗೆ ಶಿಲ್ಪಾ ಶಿರೋಡ್ಕರ್ ಹೆಸರಿನ ಸಹೋದರಿ ಇದ್ದಾರೆ. ಶಿಲ್ಪಾಗೆ ಈಗ ಕೊರೊನಾ ಅಟ್ಯಾಕ್ ಮಾಡಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಇದು ಮಹೇಶ್ ಬಾಬು ಕುಟುಂಬದವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಶಿಲ್ಪಾ ಅವರು ಮಹೇಶ್ ಬಾಬು ಕುಟುಂಬದಲ್ಲಿ ಒಬ್ಬರು ಎಂಬಂತೆ ಇದ್ದಾರೆ. ಅವರು ಬಿಗ್ ಬಾಸ್ಗೆ ಹೋದಾಗ ನಮ್ರತಾ ಕಡೆಯಿಂದ ವಿಶೇಷ ವಿಶ್ ಕೂಡ ಸಿಕ್ಕಿತ್ತು. ಈಗ ಶಿಲ್ಪಾಗೆ ಕೊವಿಡ್ ಆಗಿರೋದು ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.
View this post on Instagram
ನಟಿ ನಿಖಿತಾಗೆ ಕೊವಿಡ್
‘ಕಬಿರ್ ಸಿಂಗ್’, ‘ಜ್ಯುವೆಲ್ ಥೀಫ್’ ಚಿತ್ರಗಳಲ್ಲಿ ನಟಿಸಿದ ನಿಕಿತಾ ದತ್ತ ಅವರಿಗೆ ಕೊವಿಡ್ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ‘ಕೊವಿಡ್ ಬಂದು ನನಗೆ ಹೆಲೋ ಹೇಳಿದೆ. ನನ್ನ ತಾಯಿಗೂ ವೈರಸ್ ತಗುಲಿದೆ. ಕರೆಯದೇ ಬಂದ ಈ ಅತಿಥಿ ಹೆಚ್ಚು ದಿನ ಇರೋದಿಲ್ಲ ಎಂದು ಭಾವಿಸಿದ್ದೇನೆ. ಕ್ವಾರಂಟೈನ್ ಆದ ಬಳಿಕ ಸಿಗೋಣ. ಎಲ್ಲರೂ ಸುರಕ್ಷಿತವಾಗಿರಿ’ ಎಂದು ಅವರು ಬರೆದುಕೊಂಡಿದ್ದಾರೆ.
View this post on Instagram
ಸದ್ಯ ನಿಕಿತಾ ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಅವರಿಗೆ ಹೆಚ್ಚಿನ ಸಮಸ್ಯೆಗಳೇನು ಇಲ್ಲ. ಆದಾಗ್ಯೂ ಉಳಿದವರಿಗೆ ಹರಡದಂತೆ ನೋಡಿಕೊಳ್ಳಲು ಅವರು ಮನೆಯಲ್ಲೇ ಇದ್ದಾರೆ. ಇನ್ನು ಶಿಲ್ಪಾ ಕೂಡ ಹುಷಾರಾಗಿ ಇದ್ದಾರೆ. ಸದ್ಯ ಭಾರತದಲ್ಲಿ 200ಕ್ಕೂ ಅಧಿಕ ಕೊವಿಡ್ ಕೇಸ್ಗಳು ಸದ್ಯ ಆ್ಯಕ್ಟಿವ್ ಆಗಿವೆ.
ಇದನ್ನೂ ಓದಿ: ಜೂ ಎನ್ಟಿಆರ್-ರಾಮ್ ಚರಣ್ ಜೊತೆ ಸೇರಿದ ಮಹೇಶ್ ಬಾಬು, ರಾಜಮೌಳಿ, ವಿಷಯ ಏನು?
ಸಿನಿಮಾ ವಿಚಾರಕ್ಕೆ ಬರೋದಾದರೆ ಶಿಲ್ಪಾ ಅವರು ನಮ್ರತಾ ಅಷ್ಟು ಫೇಮಸ್ ಆಗಿಲ್ಲ. ಈ ಮೊದಲು ಹಿಂದಿ ಬಿಗ್ ಬಾಸ್ನಲ್ಲಿ ಅವರು ಭಾಗವಹಿಸಿದ್ದರು. ನಿಕಿತಾ ಅವರು ಕೆಲ ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








