ತಮಿಳು ‘ಸರಿಗಮಪ’ ವೇದಿಕೆ ಮೇಲೆ ಚಿಕ್ಕಮಗಳೂರಿನ ಶಿವಾನಿ ಮ್ಯಾಜಿಕ್; ವಾಯ್ಸ್ ಕೇಳಿ ಜಡ್ಜ್ಗಳೇ ಫಿದಾ
‘ಸರಿಗಮಪ’ ಲಿಟ್ಲ್ ಚಾಂಪ್ ಸೀಸನ್ 19ರಲ್ಲಿ ರನ್ನರ್ ಅಪ್ ಆದ ಶಿವಾನಿ ಅವರು ಈಗ ಜೀ ತಮಿಳಿನ ಸರಿಗಮಪ ಸೀಸನ್ 5ರಲ್ಲಿ ಅವಕಾಶ ಪಡೆದಿದ್ದಾರೆ. ತಮಿಳು ಹಾಡೊಂದನ್ನು ಸುಮಧುರವಾಗಿ ಹಾಡಿದ ಅವರ ಪ್ರದರ್ಶನ ಜಡ್ಜ್ಗಳನ್ನು ಮೆಚ್ಚಿಸಿದೆ. ಶಿವಾನಿ ಅವರ ಯಶಸ್ಸು ಕನ್ನಡಿಗರಿಗೆ ಹೆಮ್ಮೆಯ ವಿಷಯ.

ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಸರಿಗಮಪ ಲಿಟ್ಲ್ ಚಾಂಪ್ ಸೀಸನ್ 19’ರಲ್ಲಿ ಪ್ರಗತಿ ಬಡಿಗೇರ್ ಅವರು ಗೆಲುವು ಕಂಡರೆ ಚಿಕ್ಕಮಗಳೂರಿನ ಶಿವಾನಿ (Shivani) ಅವರು ಮೊದಲ ರನ್ನರ್ ಅಪ್ ಆದರು. ಈ ಮೂಲಕ ಅವರು ಕನ್ನಡಿಗರಿಂದ ಮೆಚ್ಚುಗೆ ಪಡೆದರು. ಈಗ ಅವರಿಗೆ ಜೀ ತಮಿಳಿನಲ್ಲಿ ಪ್ರಸಾರ ಕಾಣಲಿರುವ ‘ಸರಿಗಮಪ ಸೀಸನ್ 5’ರಲ್ಲಿ ಅವಕಾಶ ದೊರೆತಿದೆ. ಇದು ಅವರಿಗೆ ಹಾಗೂ ಅವರ ಕುಟುಂಬದ ಖುಷಿ ಹೆಚ್ಚಿಸಿದೆ. ಅವರ ಧ್ವನಿ ಕೇಳಿ ಜಡ್ಜ್ಗಳೇ ಫಿದಾ ಆಗಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋಗಳಲ್ಲಿ ಆಯಾ ಭಾಷೆಯಲ್ಲಿ ಜನಪ್ರಿಯತೆ ಪಡೆದ ಕಲಾವಿದರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಏಕೆಂದರೆ ಅಲ್ಲಿ ಭಾಷೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಆದರೆ, ಹಾಡಿನ ರಿಯಾಲಿಟಿ ಶೋಗಳಿಗೆ ಈ ರೀತಿಯ ಯಾವುದೇ ಚೌಕಟ್ಟು ಇರೋದಿಲ್ಲ. ಈ ಕಾರಣದಿಂದಲೇ ಅನೇಕರು ಬೇರೆ ಬೇರೆ ಭಾಷೆಯ ಸಿಂಗಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಈಗ ಶಿವಾನಿ ಕೂಡ ತಮಿಳಿನ ರಿಯಾಲಿಟಿ ಶೋಗೆ ಕಾಲಿಟ್ಟಿದ್ದಾರೆ.
View this post on Instagram
View this post on Instagram
ಜೀ ತೆಲುಗಿನಲ್ಲಿ ಪ್ರಸಾರ ಕಾಣಲಿರುವ ‘ಸರಿಗಮಪ ಸೀಸನ್ 5’ರ ಆಡಿಷನ್ನಲ್ಲಿ ಶಿವಾನಿ ಭಾಗಿಯಾಗಿದ್ದರು. ವೇದಿಕೆ ಮೇಲೆ ಅವರು ತಮ್ಮ ಹಾಡಿನ ಸಾಮರ್ಥ್ಯ ತೋರಿಸಿದ್ದಾರೆ. 2011ರಲ್ಲಿ ರಿಲೀಸ್ ಆದ ತಮಿಳಿನ ‘ವಾಗೈ ಸೂಡ ವಾ’ ಚಿತ್ರದ ‘ಪೋರಾನೆ ಪೋರಾನೆ..’ ಹಾಡನ್ನು ಸುಮಧುರವಾಗಿ ಹಾಡಿದ್ದಾರೆ ಶಿವಾನಿ. ತಮಿಳಿನ ಹಾಡನ್ನು ಕಲಿತು ಇಷ್ಟು ಅದ್ಭುತವಾಗಿ ಹಾಡಿದ್ದಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.
ಇದನ್ನೂ ಓದಿ: ‘ಸರಿಗಮಪ’ ಫಿನಾಲೆಯಲ್ಲಿ ಲಹರಿ ಮಹೇಶ್ಗೆ ಇಲ್ಲ ಸ್ಥಾನ; ಅಭಿಮಾನಿಗಳ ಆಕ್ರೋಶ
ಶಿವಾನಿ ಹಾಡನ್ನು ಕೇಳಿ ವೇದಿಕೆ ಮೇಲಿದ್ದ ಜಡ್ಜ್ಗಳು ಹಾಗೂ ಜ್ಯೂರಿಗಳು ಫಿದಾ ಆಗಿದ್ದಾರೆ. ಎಲ್ಲರೂ ಅವರನ್ನು ಸ್ಪರ್ಧಿಯಾಗಿ ಆಯ್ಕೆ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ವೇದಿಕೆ ಮೇಲೆ ಗಾಯಕ ವಿಜಯ್ ಪ್ರಕಾಶ್ ಕೂಡ ಇದ್ದರು ಅನ್ನೋದು ವಿಶೇಷ. ಶಿವಾನಿ ಅವರು ಸೀಸನ್ 19ರಲ್ಲಿ ಇರುವಾಗ ವಿಜಯ್ ಪ್ರಕಾಶ್ ಕೂಡ ಜಡ್ಜ್ ಸ್ಥಾನದಲ್ಲಿ ಇದ್ದರು. ಈಗ ಅವರು ಮತ್ತೊಮ್ಮೆ ವಿಜಯ್ ಪ್ರಕಾಶ್ ಅಡಿಯಲ್ಲಿ ಹಾಡಲು ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








